20.4 C
Bangalore
Monday, December 9, 2019

ಹವಾಮಾನ ನ್ಯಾಯಕ್ಕಾಗಿ ಹೋರಾಡುವ ಸಮಯ!

Latest News

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ಕಾಗವಾಡ, ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮುನ್ನಡೆ

ಬೆಳಗಾವಿ: ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೊದಲ ಸುತ್ತಿನ ಎಣಿಕೆಯಲ್ಲಿ ಮುಂದಿದ್ದಾರೆ. ಅಂಚೆಮತಗಳ ಎಣಿಕೆಯಲ್ಲೂ ಮುಂದಿದ್ದ ಅವರು ನಂತರ ಮೊದಲ ಸುತ್ತಿನಲ್ಲೂ...

ಮೊದಲ ಹಂತದ ಮತ ಎಣಿಕೆ ಶಿವರಾಮ ಹೆಬ್ಬಾರಗೆ 5004 ಮತ ಮುನ್ನಡೆ

ಕಾರವಾರ: ಕುತೂಹಲ ಕೆರಳಿಸಿರುವ ವಿಧಾನಸಭೆಯ 15 ಕ್ಷೇತ್ರಗಳ ಉಪಚುನಾವಣೆಯ ಪೈಕಿ ಯಲ್ಲಾಪುರ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಮೊದಲ ಹಂತದ ಮತ ಎಣಿಕೆಯಲ್ಲಿ...

ಹವಾಮಾನ ವೈಪರೀತ್ಯದ ಕುರಿತು ಪೊಲೆಂಡ್​ನಲ್ಲಿ 2018ರ ಡಿ.2ರಿಂದ 15ರವರೆಗೆ ನಡೆದ ಶೃಂಗಸಭೆಯಲ್ಲಿ 200ಕ್ಕೂ ಹೆಚ್ಚು ದೇಶಗಳು ಒಟ್ಟು ಸೇರಿದ್ದವು. ಈ ಬಾರಿ ದೊಡ್ಡವರ ತೀರ್ವನದ ಕುರಿತು ಯುವಜನತೆ ತಿರುಗಿಬಿದ್ದದ್ದು ವಿಶೇಷವಾಗಿತ್ತು. ಮುಖ್ಯವಾಗಿ, ‘ಹವಾಮಾನ ನ್ಯಾಯ’ದ ಬಗ್ಗೆ ದನಿ ಎತ್ತಿದ್ದು ಗಮನ ಸೆಳೆಯಿತು.

‘ನಾನೀಗ ಹವಾಮಾನ ನ್ಯಾಯದ ಬಗ್ಗೆ ಮಾತನಾಡುತ್ತಿದ್ದೇನೆ. ತುಂಬ ಜನ ಸ್ವೀಡನ್ ಒಂದು ಸಣ್ಣದೇಶ. ಹಾಗಾಗಿ ಬದಲಾಗುತ್ತಿರುವ ಹವಾಮಾನದಂಥ ದೊಡ್ಡ ಸಂಗತಿಗೆ ನಾವೇನು ಮಾಡಬೇಕಾಗಿಲ್ಲ ಎನ್ನುತ್ತಿದ್ದಾರೆ. ಆದರೆ ಚಿಕ್ಕದು ಕೂಡ ಬದಲಾವಣೆಗೆ ಕಾರಣವಾಗಬಲ್ಲದು ಎಂಬುದನ್ನು ನಾನೂ ಕಲಿತಿದ್ದೇನೆ. ಪ್ರತಿಬಾರಿಯೂ ಇಲ್ಲಿ ಸಭೆ ಸೇರಿ ಬದಲಾಗುತ್ತಿರುವ ವಾತಾವರಣದ ಕುರಿತು ಚರ್ಚೆಮಾಡುತ್ತೀರಿ ಅಷ್ಟೆ. ಯಾವುದೇ ನಿರ್ಣಯಕ್ಕೂ ಬರುವುದಿಲ್ಲ. ಇಂದು ನೀವು ಮಾಡುವ ತಪ್ಪು ನಿರ್ಧಾರ ಮುಂದಿನ ನಮ್ಮ ಭವಿಷ್ಯಕ್ಕೆ ಮಾರಕವಾಗುವುದೆಂಬುದು ನಿಮಗೆ ನೆನಪಿರಲಿ. ಹಾಗಾಗಿ ನಾನು ನಿಮ್ಮನ್ನು ಬೇಡಿಕೊಳ್ಳುವುದಿಲ್ಲ. ನಾವೇ ಮಕ್ಕಳೆಲ್ಲ ಸೇರಿ ಇದರ ವಿರುದ್ಧ ಹೋರಾಡುತ್ತೇವೆ…’

ಹೀಗೆಂದು ಸ್ವೀಡನ್ ದೇಶದ 15 ವರ್ಷದ ಗ್ರೇಟಾ ಥಮ್​ಗ್ ಎಂಬ ಬಾಲಕಿ ಪೊಲ್ಯಾಂಡ್​ನಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರೆ, ದಿಗ್ಗಜರೆಲ್ಲ ಅವಕ್ಕಾದರು.

ಹವಾಮಾನ ವೈಪರೀತ್ಯದ ಬಗ್ಗೆ ಪೊಲೆಂಡ್​ನಲ್ಲಿ 200ಕ್ಕೂ ಹೆಚ್ಚು ದೇಶಗಳು ಒಟ್ಟು ಸೇರಿದ ಇಣಕ24 ಎಂದೇ ಕರೆಯಲ್ಪಡುವ ಯುಎನ್ ಕ್ಲೈಮೇಟ್ ಚೇಂಜ್ ಕಾನ್​ಫೆರೆನ್ಸ್​ನಲ್ಲಿ ಈ ಬಾಲಕಿ ಮಾತನಾಡಿದ್ದು ಭಾರತದ ಮಾಧ್ಯಮಗಳಲ್ಲಿ ಅಷ್ಟೇನು ಪ್ರಚಾರವಾಗಲಿಲ್ಲ.

ಇದೇ ಹೊತ್ತಲ್ಲಿ ಗ್ರೇಟಾ ಭಾಷಣದಿಂದ ಪ್ರೇರೇಪಿತರಾಗಿ ಆಸ್ಟ್ರೇಲಿಯಾದಲ್ಲಿ 8, 9, 10ನೇ ತರಗತಿಯ 1ಲಕ್ಷಕ್ಕೂ ಅಧಿಕ ಹುಡುಗರು- ಹುಡುಗಿಯರು ಶಾಲೆಯಿಂದ ಹೊರಬಂದು ರಸ್ತೆ ಬಂದ್ ಮಾಡಿ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು, ಏಕೆಂದರೆ, ಆಸ್ಟ್ರೇಲಿಯಾ ಸರ್ಕಾರ ಹವಾಮಾನಕ್ಕೆ ಸಂಬಂಧಿಸಿದಂತೆ ಒಂದು ತಪ್ಪು ನಿರ್ಧಾರ ತೆಗೆದುಕೊಂಡಿತ್ತು.

ನಮ್ಮ ಕೈಗಾರೀಕರಣದಿಂದಾಗಿ ಸರಾಸರಿ ಜಾಗತಿಕ ತಾಪಮಾನ ಏರುತ್ತಿದೆ. ಇದರ ಪರಿಣಾಮ ಈಗಾಗಲೇ ನಮ್ಮ ಗೋಚರಕ್ಕೆ ಬಂದಿದೆ. ಸೈಕ್ಲೋನ್, ಚಂಡಮಾರುತಗಳು ಹೆಚ್ಚಾಗಿವೆ. ಬರ ಮೇಲಿಂದ ಮೇಲೆ ಎರಗುತ್ತಿದೆ. ಮರುಭೂಮಿಯ ವಿಸ್ತಾರ ಹೆಚ್ಚುತ್ತಿದೆ. ಇವೆಲ್ಲವೂ ಹವಾಮಾನದಲ್ಲುಂಟಾದ, ಆಗುತ್ತಿರುವ ಬದಲಾವಣೆಗಳು. ಈ ಬದಲಾವಣೆಯ ಮೊದಲ ದುಷ್ಪರಿಣಾಮ ಆಗೋದು ಕೃಷಿಕ್ಷೇತ್ರದ ಮೇಲೆ. ಜತೆಗೆ ಆರೋಗ್ಯ, ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ.

ಏರುತ್ತಿರುವ ಜಾಗತಿಕ ತಾಪಮಾನ, ಬದಲಾಗುತ್ತಿರುವ ಕೃಷಿಚಕ್ರ, ಹೆಚ್ಚುತ್ತಿರುವ ಹವಾಮಾನ ಬದಲಾವಣೆ, ಇವಕ್ಕೆಲ್ಲ ಮೂಲ ಇಂಗಾಲದ ಬಳಕೆ ಹೆಚ್ಚುತ್ತಿರುವುದು. ಅದಕ್ಕಾಗಿ, ಪ್ರತಿವರ್ಷ ನಡೆಯುವ ಈ ಶೃಂಗಸಭೆಯಲ್ಲಿ, ಇಂಗಾಲದ ಬಳಕೆಯನ್ನು ಪ್ರತಿ ದೇಶವೂ ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ರ್ಚಚಿಸುವುದಲ್ಲದೆ, ಇಂತಿಷ್ಟೇ ಬಳಸಬೇಕೆಂದು ಅದರ ಪ್ರಮಾಣವನ್ನೂ ನಿಶ್ಚಯಿಸುತ್ತವೆ.

ಆದರೆ, ಬಡರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ ಎಂದು ಯೋಚಿಸುತ್ತಿವೆ. ಶೇಕಡ 25ರಷ್ಟು ವಾಯುಮಾಲಿನ್ಯ ಅಮೆರಿಕದಿಂದ ಆಗುತ್ತದೆ ಎಂದಾದರೆ, ಭಾರತದ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ. ಆದರೆ, ಭಾರತ ವೇಗವಾಗಿ ಬೆಳೆಯುತ್ತಿದೆ. 2 ಡಿಗ್ರಿ ಸೆಲ್ಷಿಯಸ್ ತಾಪಮಾನ ಜಾಸ್ತಿ ಆದರೂ ನಾವು ತೊಂದರೆಗೆ ಸಿಲುಕುತ್ತೇವೆ. ಅಂಟಾರ್ಟಿಕ, ಆರ್ಕ್ಟಿಕಗಳು ಕರಗಿದರೆ, ಆಗ ಸಮುದ್ರ ಮೇಲೇರಿ ದ್ವೀಪರಾಷ್ಟ್ರಗಳೆಲ್ಲ ಮುಳುಗಿಹೋಗುವ ಅಪಾಯಗಳಿವೆ.

ಭಾರತಕ್ಕೇನು ಧಕ್ಕೆ?: ಈ ಹವಾಮಾನ ಬದಲಾವಣೆ ಮತ್ತು ಬಡತನಕ್ಕೆ ನೇರ ಸಂಬಂಧವಿದೆ. ಕೃಷಿಚಕ್ರದ ಬದಲಾವಣೆಯಿಂದಾಗಿ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಈಗ ಮಾನ್ಸೂನ್ ಯಾವಾಗ ಬರುತ್ತದೆಂದು ಅಂದಾಜಿಸಲು ಸಾಧ್ಯವೇ ಇಲ್ಲದಂಥ ಕಾಲದಲ್ಲಿದ್ದೇವೆ. ಇಂಥ ಸಮಯದಲ್ಲಿ ಇತರ ಶಕ್ತಿಯ ಆಧಾರಗಳಾದ ಸೋಲಾರ್, ಬಯೋಗ್ಯಾಸ್ ಮುಂತಾದ ಹೊಸಶೋಧಗಳಿಂದ ಆದಾಯ ಬರುವಂಥ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದರೆ ರೈತರ ಜೀವನಕ್ಕೊಂದು ಆಧಾರವಾಗುವುದು. ಸೆಲ್ಕೋದಂಥ ಸುಸ್ಥಿರ ಪರಿಹಾರದ ಹಾದಿಯಲ್ಲಿರುವ ಸಂಸ್ಥೆಗಳು ಮಾಡಬೇಕಾದ್ದು ಇದನ್ನೇ. ಸೌರಶಕ್ತಿ ಚಾಲಿತ ಹೊಲಿಗೆಯಂತ್ರ, ರೊಟ್ಟಿಯಂತ್ರ, ಕಮ್ಮಾರಿಕೆಗೆ ಬೇಕಾದ ಗಾಳಿಯೂದುವ ಯಂತ್ರ, ಹಾಲುಕರೆಯುವ ಯಂತ್ರ ಹೀಗೆ ಯಾವುದೇ ಜೀವನಾಧಾರದ ಯಂತ್ರಗಳನ್ನು ವಿದ್ಯುತ್ ಇಲ್ಲದೆಯೇ ಯಾವುದೇ ಪ್ರದೇಶದಲ್ಲೂ, ಯಾವಾಗ ಬೇಕಾದರೂ ಬಳಸಬಹುದು ಮತ್ತು ಅವುಗಳ ಬಳಕೆಯಿಂದ ಉದ್ಯಮ ನಡೆಸಿ ಬದುಕು ಕಟ್ಟಿಕೊಳ್ಳಲು ಸಾಧ್ಯ.

ಕಾಪ್​ನಲ್ಲಿ ಈ ಬಾರಿ ಬ್ರೆಜಿಲ್ ಮತ್ತು ಟರ್ಕಿ ಎರಡು ದೇಶಗಳು ಬಿಟ್ಟರೆ ಮಿಕ್ಕ 200 ದೇಶಗಳು ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದು, 2015ರ ಕಾಪ್ ಸಮಾವೇಶದ ಒಪ್ಪಂದಕ್ಕೆ ಸಮ್ಮತಿ ವ್ಯಕ್ತಪಡಿಸಿವೆ.

ಬ್ರೆಜಿಲ್ ಜನಸಂಖ್ಯೆ 10 ಕೋಟಿಯಷ್ಟಿದೆ. ಆದರೆ ಬ್ರೆಜಿಲ್ ಇಡೀ ವಿಶ್ವದ ಶ್ವಾಸಕೋಶ (ಲಂಗ್ಸ್ ಆಫ್ ದ ವರ್ಲ್ಡ್). ಅಲ್ಲಿರುವುದು ಇಡೀ ವಿಶ್ವದ ಹಸಿರು ಸರಪಳಿಯನ್ನು ಹಿಡಿದಿಡುವ ಅಮೇಜಾನ್ ಕಾಡು. ಅಮೆಜಾನ್ ಕಾಡುಗಳನ್ನು ಕತ್ತರಿಸಿದರೆ ಅದರ ನೇರ ಪರಿಣಾಮ ಆಫ್ರಿಕಾ, ಭಾರತ ಮುಂತಾದ ದೇಶಗಳ ಮೇಲಾಗುತ್ತದೆ. ಆದರೆ ಬ್ರೆಜಿಲ್, ‘ಇದು ನಮ್ಮ ಜಾಗ, ನಾವು ಮರ ಕತ್ತರಿಸುತ್ತೇವೆ’ ಎಂಬ ಧಾಷ್ಟ್ಯ ತಳೆದಿದೆ.

ಈ ವಿಪ್ಲವವನ್ನು ಎದುರಿಸುವ ಬಗೆ ಹೇಗೆ?: ನಿಧಾನಕ್ಕೆ ಏರುತ್ತಿರುವ ಈ ತಾಪಮಾನದ ಬಗ್ಗೆ, ವಿಸ್ತರಿಸಿಕೊಳ್ಳುತ್ತಿರುವ ಮರುಭೂಮಿಯ ಬಗ್ಗೆ ನಮಗೆ ಅರಿವಾಗುತ್ತಿಲ್ಲ. ಹಾಗಾಗಿ ವಾತಾವರಣದ ಕುರಿತಾಗಿ ನಮ್ಮಲ್ಲಿ ದೂರದೃಷ್ಟಿತ್ವ ಇರಬೇಕು. ಮಹಾರಾಷ್ಟ್ರದಲ್ಲಿ ಬರಬಂದಾಗ ನೀರಿಲ್ಲದೆ ರೈತ ಆತ್ಮಹತ್ಯೆ ಮಾಡಿಕೊಳ್ತಾನೆ ಎಂದರೆ, ಅದೇ ರೀತಿ ಕರ್ನಾಟಕದಲ್ಲಿ ಆದರೆ ಏನು ಮಾಡಬೇಕು? ಮಳೆ ಬರದಿದ್ದರೆ ಅವರ ಜೀವನಕ್ಕೆ ಏನು? ಎಂಬುದರ ಕುರಿತು ತಂತ್ರಗಾರಿಕೆಯನ್ನು ನಾವು ಮೊದಲೇ ಸಿದ್ಧಪಡಿಸಿಕೊಳ್ಳಬೇಕು.

ಪರಿಸರಕ್ಕೆ ಸಂಬಂಧಿಸಿದಂತೆ ಆಗಬೇಕಾದ್ದು ಇನ್ನೂ ತುಂಬ ಇದೆ. ಈ ನಿಟ್ಟಿನಲ್ಲಿ ಕಾನೂನು ಇನ್ನಷ್ಟು ಬಿಗಿ ಆಗಬೇಕು. ದೇಶ, ರಾಜ್ಯ, ಜಿಲ್ಲೆ, ತಾಲೂಕು ಸೇರಿದಂತೆ ಪ್ರತಿ ಪಂಚಾಯ್ತಿಯಲ್ಲೂ ವಾತಾವರಣ ಬದಲಾವಣೆ ಕುರಿತು ಒಂದು ತಂತ್ರಗಾರಿಕೆಯ ಯೋಜನೆ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವಜನತೆ ಆಸ್ಟ್ರೇಲಿಯಾದ ಆ ಮಕ್ಕಳಂತೆ, ಸ್ವೀಡನ್​ನ ಆ ಹುಡುಗಿಯಂತೆ ವಾತಾವರಣದ ಕುರಿತು ಕಾಳಜಿಯಿಂದ ಪ್ರತಿಭಟಿಸುವಂತಾಗಬೇಕು. ಮುಂದಿನ ಕಾಪ್ ಸಮಾವೇಶಕ್ಕೆ ಭಾರತ ನಮ್ಮ ಯುವಕರನ್ನು ಕಳಿಸಬೇಕು. ಏಕೆಂದರೆ, ಇವತ್ತಿನ ನಮ್ಮ ಯಾವುದೇ ನಿರ್ಧಾರದಲ್ಲಿ ಅವರ ಮುಂದಿನ ಭವಿಷ್ಯ ಅಡಗಿದೆ. ನಾಳಿನ ನಮ್ಮ ಮಕ್ಕಳ ಕಣ್ಣಿನಲ್ಲಿ ನಾವು ಅಪರಾಧಿಗಳಾಗಬಾರದು. ಆ ಎಚ್ಚರ ಇಂದಿನ ಎಲ್ಲ ನೀತಿ ನಿರೂಪಕರಲ್ಲಿರಬೇಕಾಗಿದೆ.

(ಲೇಖಕರು ಸೌರವಿಜ್ಞಾನಿ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು)

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...