20.3 C
Bangalore
Sunday, December 15, 2019

ಹಳ್ಳಿಗಳ ಉತ್ಥಾನವಾಗದೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ಭಾರತ ಪರಂಪರಾಗತವಾಗಿ ಹಳ್ಳಿಗಳ ದೇಶ. ಕೃಷಿಯೇ ನಮ್ಮಲ್ಲಿ ಬಹುಜನರ ಬದುಕಿಗೆ ಆಧಾರಸ್ತಂಭ. ಹೀಗಿದ್ದರೂ ಸ್ವಾತಂತ್ರ್ಯಾನಂತರದ ಯಾವ ಸರ್ಕಾರಗಳೂ ಗ್ರಾಮ ಜೀವನದ ಆರ್ಥಿಕತೆಯನ್ನು ಕೇಂದ್ರೀಕರಿಸಿ ಆಮೂಲಾಗ್ರವಾದ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದಿಲ್ಲ.

ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ-‘ಕೋಟಿ ಧನವಿದ್ದರೂ ಪಟ್ಟಣವು ಗೋಳು. ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು’. ಎಷ್ಟು ಅರ್ಥಪೂರ್ಣ! ಪ್ರಸಕ್ತ ಅನೇಕ ಸ್ನಾತಕೋತ್ತರ ಪದವೀಧರರು ಲಕ್ಷಾಂತರ ಸಂಬಳದ ನಗರದ ಊಳಿಗವನ್ನು ನೆಮ್ಮದಿಗಾಗಿ ತೊರೆದು ಸ್ವಗ್ರಾಮಕ್ಕೆ ತೆರಳಿ ಕೃಷಿಯತ್ತ ಮರಳುತ್ತಿರುವುದನ್ನು ಒಂದೆಡೆ ನೋಡುತ್ತಿದ್ದರೆ, ಅದರ ಹತ್ತಿಪ್ಪತ್ತು ಪಟ್ಟು ಯುವಜನರು ಹಳ್ಳಿಗಳನ್ನು ತೊರೆದು ಪಟ್ಟಣಗಳತ್ತ ವಲಸೆ ಹೋಗುತ್ತಿರುವುದು 21ನೇ ಶತಮಾನದ ದೊಡ್ಡ ವಿಪರ್ಯಾಸ. 1947ರಲ್ಲಿ ಕೃಷಿಯು ದೇಶದ ಜಿಡಿಪಿಯ 54% ಇದ್ದದ್ದು ಈಗ ಕೇವಲ 18%ಕ್ಕೆ ಇಳಿದಿರುವುದು, ಅಂದು ಶೇಕಡ 80 ಜನರಿಗೆ ಉದ್ಯೋಗ ನೀಡಿದ್ದ ಕೃಷಿ ಪ್ರಸಕ್ತ ಶೇ.50ಕ್ಕೂ ಕಡಿಮೆ ಜನರಿಗೆ ಆಧಾರವಾಗಿರುವುದು ಮತ್ತು ಸರಾಸರಿ ನಿಮಿಷಕ್ಕೊಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಏನನ್ನು ಸೂಚಿಸುತ್ತಿದೆ?

ನಮಗೆ ಸ್ಮಾರ್ಟ್ ಪಟ್ಟಣಗಳಷ್ಟೇ ಅಲ್ಲ, ಸ್ಮಾರ್ಟ್ ಹಳ್ಳಿಗಳ ಅಗತ್ಯ ಹೆಚ್ಚಿದೆ. ಹಳ್ಳಿಗಳು ಸಂಸ್ಕೃತಿಯ ಪ್ರತೀಕ. ಅದು ಅವಿನಾಶಿ. ಅದುವೇ ಭಾರತದ ಬೆನ್ನೆಲುಬು. ವೇದಕಾಲೀನ ಸಂಸ್ಕೃತಿ, ಪುರಾಣ, ಇತಿಹಾಸಗಳಲ್ಲಿಯೂ ನಾವು ಹೆಚ್ಚಾಗಿ ಕಾಣುವುದು ಹಳ್ಳಿಜೀವನದ ಸೊಬಗನ್ನೇ ಅಲ್ಲವೇ? ಗುಡಿಕೈಗಾರಿಕೆಗಳೇ ಗ್ರಾಮ ಜೀವನದ ಮುಖ್ಯ ವಾಣಿಜ್ಯ ಉಪವೃತ್ತಿ. ಪರಸ್ಪರ ಸಹಕಾರಗಳೇ ಹಳ್ಳಿಜೀವನದ ಉಸಿರು. ಸರಳಜೀವನ, ಶಿಸ್ತು ಹಾಗೂ ಪರಂಪರೆಗಳಿಗೆ ಇಲ್ಲಿ ಅತ್ಯುನ್ನತ ಮಹತ್ವ. ತಲೆತಲಾಂತರದಿಂದ ಬಂದ ಕಟ್ಟುಪಾಡುಗಳಿಂದ ಸ್ವನಿಯಂತ್ರಿತವಾದ ಮಧ್ಯವರ್ತಿರಹಿತ ಆರ್ಥಿಕ, ವ್ಯಾವಹಾರಿಕ ರೀತಿನೀತಿಗಳು, ನ್ಯಾಯ ವ್ಯವಸ್ಥೆಗಳೇ ಹಳ್ಳಿ ಜೀವನದ ಸುಸ್ಥಿತಿಗೆ ಕಾರಣ. ಆದರೆ ಗಾಂಧಿ ಹೆಸರಿನಲ್ಲಿ ನಮ್ಮನ್ನು ಆಳಿದವರು ಅವರ ಆದರ್ಶಗಳಿಗೆ ಎಳ್ಳುನೀರು ಬಿಟ್ಟು ದಶಕಗಳೇ ಕಳೆದಿವೆ. ಸದುದ್ದೇಶದಿಂದ ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯುೂ ಅಸಮರ್ಪಕ ನಿರ್ವಹಣೆಯಿಂದಾಗಿ ಹಳ್ಳಹಿಡಿದಿದೆ.

ಇದಕ್ಕೆ ಪರಿಹಾರ ಬೇಕಾದಲ್ಲಿ ನಾವು ಪಾಶ್ಚಾತ್ಯರಿಂದ ಎರವಲು ಪಡೆದ ಕೆಲವು ಭ್ರಮೆ/ವಿರೋಧಾಭಾಸಗಳಿಂದ ಮೊದಲು ಮುಕ್ತರಾಗಬೇಕು. ಪರಕೀಯರ ಅಂಧಾನುಕರಣೆ ಸಲ್ಲದು. ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆಲುಬೇ ಗ್ರಾಮೀಣ ಅರ್ಥವ್ಯವಸ್ಥೆ. ಹಳ್ಳಿಯ ಜಮೀನನ್ನು ಬೀಳುಬಿಟ್ಟು ಪಟ್ಟಣಗಳಿಗೆ ಬಿಡಿಗಾಸಿಗಾಗಿ ಹಿಂಡುಹಿಂಡಾಗಿ ತೆರಳುವ ಯುವ ಹಳ್ಳಿಗರ ವಲಸೆಯನ್ನು ಮೊದಲು ತಡೆಯಬೇಕು. ಕೃಷಿಕರು, ಹಳ್ಳಿಗಳು ಸ್ವಾವಲಂಬಿಗಳಾಗಬೇಕು.

‘ಸರಳ ಜೀವನ, ಕನಿಷ್ಠ ಖರ್ಚು, ಗರಿಷ್ಠ ಉತ್ಪನ್ನ’ ಇದು ನಮ್ಮ ಆರ್ಥಿಕ ಚಿಂತನೆಯ ಜಾಡು. ಸಮಾಜಕ್ಕಾಗಿ ತ್ಯಾಗ, ದೇಶಹಿತಕ್ಕಾಗಿ ದಾನ ನಮ್ಮ ಪರಂಪರೆಯ ವೈಶಿಷ್ಟ್ಯ. ಚತುರ್ವಿಧ ಪುರುಷಾರ್ಥಗಳೇ ನಮ್ಮ ಶ್ರದ್ಧೆಯ ಬೇರುಗಳು. ಧರ್ಮವೇ ನಮಗೆ ಪರಮಾರ್ಥ. ಪರಸ್ಪರ ಅವಲಂಬನೆ ನಮಗೆ ಪರಾವಲಂಬನೆಗಿಂತ ಸಾವಿರ ಪಾಲು ಮೇಲು. ಪ್ರಕೃತಿಪರ ಸಹಬಾಳ್ವೆಯ ತತ್ತ್ವಗಳು ಮಾತ್ರ ಶಾಶ್ವತ ಪ್ರಗತಿಗೆ ಹೆದ್ದಾರಿ. ಇದನ್ನು ನಾವು ಗ್ರಾಮಜೀವನದಲ್ಲಿ ಮಾತ್ರ ಕಾಣಲು ಸಾಧ್ಯ. ಸಮಾಜದಿಂದ ವ್ಯಕ್ತಿಯೇ ಹೊರತು ವ್ಯಕ್ತಿಯಿಂದ ಸಮಾಜವಲ್ಲ.

21ನೇ ಶತಮಾನದ ಹೊತ್ತಿಗೆ ಹಳ್ಳಿಗಳ ಸ್ಥಿತಿ ದಯನೀಯವಾಗಿದೆ. ಹಳ್ಳಿಗಳಲ್ಲಿ ಶುದ್ಧ ನೀರು ಸಿಗುವುದೂ ಕಷ್ಟ. ಆದರೆ ಕೋಲ್ಡ್ ಡ್ರಿಂಕ್ಸ್​ಗಳು ಸಿಗುತ್ತವೆ. ಬಿಸಿಊಟ ಸಿಗದಿದ್ದರೂ ಜಂಕಫುಡ್ ಸಿಗುತ್ತದೆ. ರೈತರ ಆಹಾರ ಉತ್ಪನ್ನಗಳಿಗೆ ಹಳ್ಳಿಯಲ್ಲೇ ಬೆಲೆಯಿಲ್ಲ. ವಾಣಿಜ್ಯೋತ್ಪನ್ನಗಳಿಗೆ ಮಾತ್ರ ಯುಕ್ತ ಮಾರುಕಟ್ಟೆಯಿದೆ. ಎಂಥ ವಿಡಂಬನೆ! ಯಾವುದಾದರೂ ಕಳೆದುಕೊಂಡ ಮೇಲೆ ಮಾತ್ರ ಅದರ ಬೆಲೆ ಅರಿವಾಗುತ್ತದಂತೆ. ಇಲ್ಲಿಯೂ ಹಾಗೇನೇ. ಜೀವನದ ಪೂರ್ವಾರ್ಧದಲ್ಲಿ ಹಣಕ್ಕಾಗಿ ಆರೋಗ್ಯವನ್ನು ಕಳೆದುಕೊಂಡು, ಉತ್ತರಾರ್ಧದಲ್ಲಿ ಅದನ್ನು ಮರಳಿ ಪಡಕೊಳ್ಳಲು ಪ್ರಯತ್ನಿಸುವವರು ನಾವು. ಕಳೆದುಕೊಂಡಲ್ಲೇ ಸ್ವಲ್ಪ ಹುಡುಕಿದರೆ ಸಿಕ್ಕೀತೇನೋ!

ನಗರದ ಕಿತ್ತುತಿನ್ನುವ ಸ್ವಾರ್ಥ ಹಳ್ಳಿಜೀವನಕ್ಕೂ ಕಾಲಿಟ್ಟಿದೆ. ಅವಿಭಕ್ತ ಕುಟುಂಬಗಳು ಮರೆಯಾಗಿವೆ. ಸಹಕಾರದ ಬದಲು ಸ್ಪರ್ಧೆ ಹೆಚ್ಚುತ್ತಿದೆ. ಕೃಷಿ ಬಗ್ಗೆ ಯುವಕರಲ್ಲಿ ನಿರಾಸಕ್ತಿ ಕಂಡುಬರುತ್ತಿದೆ. ಯುವಕರು ಪಟ್ಟಣಗಳಿಗೆ ವಲಸೆ ಹೋಗಿರುವುದರಿಂದ ಹಳ್ಳಿಗಳಲ್ಲಿ ಕೇವಲ ವಯಸ್ಕರು, ಮಕ್ಕಳೇ ತುಂಬಿದ್ದಾರೆ. ಆರೋಗ್ಯ ಸೇವೆಯಂಥ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಅಳಿದುಳಿದ ಕೃಷಿಕರು ಸೂಕ್ತ ಮಾರುಕಟ್ಟೆಯಿಲ್ಲದೆ ಸಾಂಪ್ರದಾಯಿಕ ಬೆಳೆಗಳಿಗೆ ಬದಲಾಗಿ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಗಳಿಗೆ (ಯಾರಿಗೋ) ಬೇಕಾಗಿದ್ದನ್ನು ನಾವು ಹಣದ ಆಸೆಗಾಗಿ (ರಫ್ತಿಗಾಗಿ) ಬೆಳೆದು ಪರಾವಲಂಬಿಗಳಾಗಿದ್ದೇವೆ. ಮಣ್ಣಿನ ಜೀವಸತ್ವವನ್ನು ಹೀರಿ ಹಾಳುಗೆಡವಿದ್ದೇವೆ. ವಾಯು, ಜಲ, ನೆಲ, ಆಕಾಶ, ಆಹಾರ, ಪರಿಸರವನ್ನೆಲ್ಲ ರಾಸಾಯನಿಕಗಳಿಂದ ವಿಷಮಯವಾಗಿಸಿ ರೋಗಗಳ ಗುಡಿಯಾಗಿಸಿದ್ದೇವೆ. ವಿನಾಶಕ್ಕೆ ಇಷ್ಟು ಸಾಲದೇ?

ಹೀಗೆ ಅಸಮತೋಲನದಿಂದ ಕುಂಟುತ್ತಿರುವ ನಮ್ಮ ದೇಶದ ಪ್ರಗತಿಯ ಓಟಕ್ಕೆ ಸೂಕ್ತ ದಿಕ್ಕು ಕಲ್ಪಿಸಬೇಕಿದೆ. ಹಳ್ಳಿಗಳ ಪುನರುತ್ಥಾನವಾಗದೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ. ಇದು ಸಾಧ್ಯವಾಗಬೇಕೆಂದರೆ ನಮ್ಮ ಹಳ್ಳಿಗಳು ಮೊದಲು ಸ್ಮಾರ್ಟ್ ಆಗಬೇಕು. ಅಲ್ಲಿಗೆ ಮೂಲಭೂತ ನಾಗರಿಕ ಸೌಲಭ್ಯಗಳಾದ ನೀರು, ವಿದ್ಯುತ್, ರಸ್ತೆ, ಆಸ್ಪತ್ರೆ, ಶಾಲೆ ಇತ್ಯಾದಿ ತಲುಪಬೇಕು. ಆದರೆ ಪರಿಸರದ ಸಮತೋಲನಕ್ಕೆ, ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವುದೇ ಅಡ್ಡಿಯಾಗಬಾರದು.

ಹಳ್ಳಿಗಳಲ್ಲಿ ರೈತರಿಗೆ ಬೇಕಿರೋದು ಇಷ್ಟೇ, ಸಾವಿರ ಕಾಯ್ದೆಗಳ ಹೆಸರಲ್ಲಿ ಸರ್ಕಾರಿ ಕಚೇರಿ ಅಲೆಯುವುದರಿಂದ ವಿನಾಯಿತಿ, ನೀರಾವರಿ ಸೌಲಭ್ಯ, ವಿದ್ಯುತ್ ಸಂಪರ್ಕ, ಬೆಳೆದ ಉತ್ಪನ್ನಗಳ ಸಂಗ್ರಹಕ್ಕೆ ಉಗ್ರಾಣ, ಸಂಸ್ಕರಣಾ ಘಟಕ, ಸರಕು ಸಾಗಣೆ ವ್ಯವಸ್ಥೆ, ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ, ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ, ಪ್ರಕೃತಿ ವಿಕೋಪಗಳ ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಪರಿಹಾರ. ಯಾವ ಸಾಲಮನ್ನಾವೂ ಅವರಿಗೆ ಬೇಕಿಲ್ಲ. ಹಳ್ಳಿಗರ ಸ್ವಾವಲಂಬಿ ಬದುಕಿಗೆ ಕಿಂಚಿತ್ತು ಸಹಕಾರ ಮಾತ್ರ ಬೇಕಿದೆ. ಸ್ಮಾರ್ಟ್ ವಿಲೇಜ್ ಎನ್ನಲು ಇಷ್ಟು ಸಾಕು.

(ಲೇಖಕರು ನವಜಾತಶಿಶು ಮತ್ತು ಮಕ್ಕಳ ತಜ್ಞರು)

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...