25.1 C
Bangalore
Friday, December 6, 2019

ರಾಷ್ಟ್ರೀಯ ಸುರಕ್ಷೆಗೆ ಬೇಕಿದೆ ಬಲವಾದ ಕಾನೂನು

Latest News

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

ಭಯೋತ್ಪಾದನೆ ನಿಗ್ರಹದ ನಿಟ್ಟಿನಲ್ಲಿ ಪೋಟಾ ಪ್ರಬಲ ಕಾನೂನಾಗಿತ್ತು. ಆದರೆ, ರಾಜಕೀಯ ಗುಂಪಿನ ಒತ್ತಡಕ್ಕೆ ಮಣಿದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಆ ಕಾನೂನನ್ನೇ ರದ್ದುಗೊಳಿಸಿತು. ಇಂದಿನ ಭಯೋತ್ಪಾದನೆಯ ಹೊಸ ಮುಖಗಳನ್ನು ಹಿಮ್ಮೆಟ್ಟಿಸಲು ಪೋಟಾದಂಥ ಬಲವಾದ ಕಾನೂನಿನ ಅವಶ್ಯಕತೆ ಇದೆ ಎಂಬುದನ್ನು ಆಳುಗರು ಅರಿಯಬೇಕಿದೆ.

ಬ್ರಿಟಿಷರು ಭಾರತ ಬಿಟ್ಟು ತೊಲಗಿದರೂ ಅವರು ರಚಿಸಿರುವ ಶಿಕ್ಷಣ ಪದ್ಧತಿ, ಕಾನೂನು ವ್ಯವಸ್ಥೆಗಳು, ಆಡಳಿತಾತ್ಮಕ ವ್ಯವಸ್ಥೆಗಳು ಇನ್ನೂ ನಮ್ಮ ದೇಶದಲ್ಲಿ ಮುಂದುವರಿದಿವೆ. ಹಲವಾರು ಸರ್ಕಾರಗಳು ಬಂದು ಹೋದರೂ ದೇಶದ ಸುರಕ್ಷತೆಗೆ ಬೇಕಾದ ಸಮರ್ಪಕ ಕಾನೂನುಗಳು ಬರಲೇ ಇಲ್ಲ. ಪ್ರಪಂಚದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿದ್ದರೂ ಎಲ್ಲ ದೇಶಗಳೂ ಒಟ್ಟಾಗಿ ಈ ಸವಾಲನ್ನು ಸ್ವೀಕರಿಸಲು ಇನ್ನೂ ಸಿದ್ಧರಾಗಿಲ್ಲ. ಭಯೋತ್ಪಾದನೆ ಇತ್ತೀಚಿನ ವರ್ಷಗಳ ತನಕ ಕೇವಲ ಭಾರತದ ಸಮಸ್ಯೆಯಾಗಿತ್ತು. ಆದರೆ 2001ರಲ್ಲಿನ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ (World Trade Center) ಮೇಲೆ ನಡೆದ ವೈಮಾನಿಕ ಬಾಂಬ್ ದಾಳಿಯಿಂದ ಹಿಡಿದು ಫ್ರಾನ್ಸ್, ನ್ಯೂಜಿಲೆಂಡ್, ಶ್ರೀಲಂಕಾ ದೇಶಗಳ ಮೇಲೆ ನಡೆದ ಬಾಂಬ್ ದಾಳಿಗಳವರೆಗಿನ ಭಯೋತ್ಪಾದನಾ ಕೃತ್ಯಗಳು ಪ್ರಪಂಚವನ್ನು ಭಯಭೀತಗೊಳಿಸಿವೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಭಾರತ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಕಾಲಕ್ಕೆ ತಕ್ಕಂತೆ ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ಕಾನೂನಿಗೆ ಸೂಕ್ತ ತಿದ್ದುಪಡಿ ಆಗಬೇಕು ಮತ್ತು ಈ ನಿಟ್ಟಿನಲ್ಲಿ ಹೊಸ ಕಾನೂನನ್ನು ತರುವುದು ಅಷ್ಟೇ ಅವಶ್ಯಕ.

ಸ್ಪೋಟಕ ವಿಷಯಕ್ಕೆ ಸಂಬಂಧಪಟ್ಟಂತೆ ‘ಸ್ಪೋಟಕಗಳ ಕಾಯ್ದೆ 1884’ (THE EXPLOSIVES ACT 1884) ಎನ್ನುವ ಕಾನೂನು ಬ್ರಿಟಿಷ್ ಕಾಲದಲ್ಲಿ ಜಾರಿಗೆ ಬಂದಿದ್ದು, ಕಾಲಾನುಕ್ರಮವಾಗಿ ಸೂಕ್ತ ತಿದ್ದುಪಡಿ ಕಾಣದಿರುವುದು ವಿಪರ್ಯಾಸ. 1884ರಲ್ಲಿ ಬಂದ ಈ ಕಾನೂನಿನಲ್ಲಿ ಇರುವಂತಹ ಶಿಕ್ಷೆಯ ಪ್ರಮಾಣ ಮತ್ತು ಕಾನೂನಿನ ವ್ಯಾಖ್ಯಾನ ಆಗಿನ ಕಾಲಕ್ಕೆ ತಕ್ಕುದ್ದಾಗಿದೆ. ಆದರೆ ಇಂದಿನ ಆಧುನಿಕ ಪ್ರಪಂಚಕ್ಕೆ ಬೇಕಾದ ವ್ಯಾಖ್ಯಾನವಾಗಲಿ, ಹಿಡಿತವಾಗಲಿ ಇಲ್ಲ. ಕಾನೂನುಬಾಹಿರವಾಗಿ ಸ್ಪೋಟಕ ವಸ್ತುಗಳನ್ನು ಹೊಂದುವುದು/ ಸಾಗಿಸುವ ಸಂಬಂಧ ವ್ಯವಹಾರ ಇತ್ಯಾದಿಗಳನ್ನು ಪರವಾನಗಿ ರಹಿತವಾಗಿ ನಡೆಸಿದರೆ ‘ಗರಿಷ್ಠ 3 ವರ್ಷ ಸಜೆ ಮತ್ತು -ಠಿ; 5,000 ದಂಡ’ ಇದು ಈ ಕಾನೂನಿನ ಪರಿಸ್ಥಿತಿ. ಒಂದು ಪ್ರದೇಶದಲ್ಲಿ ಅಥವಾ ವ್ಯಕ್ತಿಯ ಬಳಿ ಸ್ಪೋಟಕಗಳು ಪತ್ತೆಯಾದಲ್ಲಿ ಅದನ್ನು ಸಾಮಾನ್ಯ ಪೊಲೀಸ್ ಇಲಾಖಾ ಸಿಬ್ಬಂದಿಯಿಂದ ತನಿಖೆ ನಡೆಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಏಕೆಂದರೆ ಈ ವಿಚಾರದಲ್ಲಿ ಅವರಿಗೆ ತರಬೇತಿ ಅಥವಾ ಪರಿಣತಿಯ ಕೊರತೆ ಇದ್ದು, ಜೊತೆಗೆ ಕಾನೂನಿನ ವ್ಯಾಪ್ತಿ ಕೂಡ ತುಂಬ ಕಡಿಮೆ ಇದೆ. ಇದರಿಂದಾಗಿ ಸ್ಪೋಟಕಗಳಿಗೆ ಸಂಬಂಧಪಟ್ಟ ಪ್ರಕರಣಗಳು ಸರಿಯಾಗಿ ತನಿಖೆಯಾಗದೆ, ಸಮರ್ಪಕವಾಗಿ ನ್ಯಾಯಾಲಯಗಳಲ್ಲಿ ಮಂಡಿಸದೆ ಇರುವುದರಿಂದ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ/ಬಿಡುಗಡೆ ಹೊಂದುವಂತಾಗುತ್ತದೆ. 135 ವರ್ಷಗಳ ಇತಿಹಾಸವುಳ್ಳ ಈ ಕಾನೂನಿನಲ್ಲಿ ನ್ಯಾಯಾಲಯ ಅಥವಾ ತನಿಖಾ ಸಂಸ್ಥೆಗಳಿಗೆ ಸರಿಯಾದ ಅಧಿಕಾರವೇ ಇಲ್ಲ. ಇದರಿಂದಾಗಿ ದುಷ್ಕರ್ವಿುಗಳು ರಾಜಾರೋಷವಾಗಿ ಕಾನೂನಿನ ಚೌಕಟ್ಟಿನಿಂದ ಪಾರಾಗುತ್ತಿದ್ದಾರೆ.

‘ಸ್ಪೋಟಕ ವಸ್ತು ಕಾಯ್ದೆ 1908’ (The Explosive Substances Act) ಎಂಬ ಹೊಸ ಕಾನೂನು ಬಂದಿದ್ದೇನೋ ಹೌದು. ಆದರೂ ಅಲ್ಲಿ ಕೂಡ ಸ್ಪೋಟಕಗಳ ಬಗ್ಗೆ ಸಮರ್ಪಕವಾದ ಪ್ರಾಧಿಕಾರ, ತನಿಖಾ ಸಂಸ್ಥೆಗಳಿಗೆ, ನ್ಯಾಯಾಲಯಗಳಿಗೆ ಇರಲೇಬೇಕಾದ ಅಧಿಕಾರವ್ಯಾಪ್ತಿ, ಶಿಕ್ಷೆಪ್ರಮಾಣ ಇತ್ಯಾದಿಗಳಿಲ್ಲ. ಮತ್ತು ಸ್ಪೋಟಕಗಳ ಬಗ್ಗೆ ಈ ರೀತಿ 2 ಕಾನೂನು ಇರುವುದರಿಂದ ತನಿಖಾ ಸಂಸ್ಥೆಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಗೊಂದಲ ಏರ್ಪಟ್ಟಿದೆ. ‘ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಷಾ ಸಂಸ್ಥೆ’ (Petroleum and Explosives Safety Organisation) ಎಂಬ ಪ್ರಾಧಿಕಾರ ಒಂದೇನೊ ಇದೆ, ಆದರೆ ಸ್ಪೋಟಕಗಳ ನಿಯಂತ್ರಣ ಹತೋಟಿಗೆ ಬೇಕಾದ ಅಧಿಕಾರ ವ್ಯಾಪ್ತಿ ಇಲ್ಲದೆ ಇದೊಂದು ಕಾಗದದ ಹುಲಿಯಂತಾಗಿದೆ. ಕಾಲಕಾಲಕ್ಕೆ ಈ ಎರಡು ಕಾನೂನುಗಳ ಬಗ್ಗೆ ಸರ್ಕಾರ ಅಧಿಸೂಚನೆಗಳಲ್ಲಿ ನಿಯಮಾವಳಿಗಳನ್ನು ರೂಪಿಸುತ್ತ ಬಂದರೂ, ಕಾಯ್ದೆಯ ಕಾರ್ಯವ್ಯಾಪ್ತಿಗಿಂತ ಹೆಚ್ಚಿನ ವ್ಯಾಪ್ತಿ ಅಧಿನಿಯಮ ಅಥವಾ ಅಧಿಸೂಚನೆಗಳಿಗೆ ಇರುವುದಿಲ್ಲ.

ಇಂದಿನ ತಾಂತ್ರಿಕ, ಯಾಂತ್ರಿಕ ಯುಗಕ್ಕೆ ರಾಷ್ಟ್ರೀಯ ಸ್ಪೋಟಕ ನಿಯಂತ್ರಣ ದಳಕ್ಕೂ (National Explosive Control Bureau) ತತ್ಸಮಾನ ಪ್ರಾಧಿಕಾರದ ಅವಶ್ಯಕತೆ ಇದ್ದು, ಅತ್ಯಾಧುನಿಕ ಸ್ಪೋಟಕಗಳ ಬಗ್ಗೆ ಹಾಗೂ ಅವುಗಳ ನಿಯಂತ್ರಣ, ಹತೋಟಿ ವಿಚಾರವಾಗಿ ಪರಿಣಿತ ಸಂಸ್ಥೆ ರಚನೆಯಾಗಬೇಕಿದೆ. ಈ ರೀತಿ ಸುಸಜ್ಜಿತವಾದ ಸಂಸ್ಥೆಗೆ ಶಕ್ತಿ ತುಂಬಲು ಹೊಸದಾಗಿ ಕಾನೂನು ಜಾರಿಯಾಗಬೇಕು ಅಥವಾ ಈಗಿರುವ ಕಾನೂನಿಗೆ ತಿದ್ದುಪಡಿ ಮಾಡಬೇಕು. ಹಳೆಯ ಕಾನೂನಿಗೆ ತಿದ್ದುಪಡಿ ತರುವ ಬದಲು ಇಂದಿನ ಕಾಲಮಾನಕ್ಕೆ, ತಂತ್ರಜ್ಞಾನಕ್ಕೆ, ವೈಜ್ಞಾನಿಕತೆಗೆ ಬೇಕಾದ ಹೊಸ ಕಾನೂನು ತರುವುದೆ ಸೂಕ್ತ ಹಾಗೂ ರಾಷ್ಟ್ರೀಯ ಸುರಕ್ಷತೆಗೆ ಇಂತಹ ಕಾನೂನಿನ ಅವಶ್ಯಕತೆ ಹಾಗೂ ಅನಿವಾರ್ಯತೆ ಎರಡೂ ಬಂದೊದಗಿದೆ.

ಇನ್ನು ಭಯೋತ್ಪಾದಕ ಕೃತ್ಯಗಳ ವಿರುದ್ಧ ಬಂದಂತಹ ಕಾನೂನುಗಳಲ್ಲಿ Terrorist and Disruptive Activities (Prevention) Act (TADA), National Securities Act and Unlawful Prevention Act, Prevention of Terrorism Act, 2002 (POTA) ಪ್ರಮುಖವಾದವು.

ಇವೆಲ್ಲವೂ ನನೆಗುದಿಗೆ ಬಿದ್ದಿವೆ. ರಾಜಕೀಯ ಶಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ಕಾನೂನುಗಳನ್ನು ದುರ್ಬಲಗೊಳಿಸಿವೆ. ಕಣಖಅ ಕಾನೂನನ್ನು ಮೊದಲ ಬಾರಿಗೆ ಪರಿಚಯಿಸಿದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಪ್ರಪಂಚದಾದ್ಯಂತ ಸುದ್ದಿ ಮಾಡಿತು. ಏಕೆಂದರೆ ಕಣಖಅ ಭಾರತಕ್ಕೆ ಅನಿವಾರ್ಯವಾಗಿದ್ದರೂ, ಪ್ರಪಂಚಕ್ಕೆ ಅದರ ಅರಿವಿರಲಿಲ್ಲ. ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತೊಗೆಯಬೇಕಾದ ವಿವಿಧ ಆಯಾಮಗಳ ಸಮಗ್ರ ಕಾನೂನು ‘ಪೋಟಾ’ ಆಗಿತ್ತು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ, ಅರಿವಿಲ್ಲದ ಅಥವಾ ಉದ್ದೇಶಪೂರ್ವಕವಾಗಿ ವಿರೋಧಿಸುತ್ತ ಬಂದ ಒಂದು ಗುಂಪು ಒತ್ತಡ ಹೇರಿದ ಪರಿಣಾಮ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಪೋಟಾ ಕಾನೂನನ್ನು ರದ್ದುಗೊಳಿಸಿತು. ಪೈಶಾಚಿಕವಾದ ಇಂದಿನ ಭಯೋತ್ಪಾದಕ ಕೃತ್ಯಗಳನ್ನು ನೋಡಿದರೆ ಪೋಟಾ ಅವಶ್ಯಕತೆ ಎದ್ದು ಕಾಣುತ್ತಿದೆ.

ಭಯೋತ್ಪಾದನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ಸೂಚಿಸುವುದು, ಭಯೋತ್ಪಾದನೆಯಲ್ಲಿ ನೇರವಾಗಿ ಭಾಗವಹಿಸುವುದು ಗಂಭೀರ ಅಪರಾಧವಾಗಿತ್ತು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ನಿಷೇಧ ಹೇರಲು ಪೋಟಾದಡಿ ಅವಕಾಶಗಳಿತ್ತು. ಮುಂಜಾಗ್ರತಾ ಕ್ರಮವಾಗಿ ಭಯೋತ್ಪಾದಕರನ್ನು ಯಾವುದೇ ವಿಚಾರಣೆ ಇಲ್ಲದೆ ಬಂಧನದಲ್ಲಿ ಇರಿಸಲು ಕೂಡ ಅವಕಾಶವಿತ್ತು. ಭಯೋತ್ಪಾದನೆಗೆ ಸಂಬಂಧಪಟ್ಟ ಪ್ರಕರಣಗಳ ವಿಶೇಷ ತನಿಖಾ ತಂಡ, ಅಭಿಯೋಜನೆ, ನ್ಯಾಯಾಲಯ ಕಲ್ಪಿಸಲಾಗಿತ್ತು. ಇತ್ತೀಚಿಗಿನ ಪುಲ್ವಾಮಾ ದಾಳಿ ಸೇರಿದಂತೆ ಹತ್ತು ಹಲವು ಭಯೋತ್ಪಾದಕ ಕೃತ್ಯಗಳನ್ನು ನೋಡಿದರೆ ಪೋಟಾ ಕಾನೂನನ್ನು ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಮತ್ತೆ ಜಾರಿಗೆ ತರಬೇಕಾದ ಅನಿವಾರ್ಯತೆ ಎದುರಾಗಿದೆ. ರಾಷ್ಟ್ರೀಯ ಸುರಕ್ಷೆಯ ವಿಚಾರದಲ್ಲಿ ಬಹಳಷ್ಟು ಭಾಷಣ, ಘೊಷಣೆಗಳನ್ನು ಮಾಡಿದ್ದೂ ಆಯಿತು, ಕೇಳಿದ್ದೂ ಆಯಿತು. ಆದರೆ ಸ್ಪೋಟಕಗಳ ವಿಚಾರದಲ್ಲಿ ಮತ್ತು ಭಯೋತ್ಪಾದನೆ ನಿಗ್ರಹಕ್ಕಾಗಿ ಸಮರ್ಪಕವಾದ ಸದೃಢ ಕಾನೂನು ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಬಗ್ಗೆ ಯೋಚಿಸಿದರೆ ನಮ್ಮನ್ನು ಕಾಡುವ ಪ್ರಶ್ನೆಯೆಂದರೆ ನಾವೆಷ್ಟು ಸುರಕ್ಷಿತರು?!

(ಲೇಖಕರು ನ್ಯಾಯವಾದಿ)

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...