ಶೂಟಿಂಗ್​ ಬಿಡುವಿನ ವೇಳೆ ಸ್ನಾನಕ್ಕೆಂದು ಹೋದ ಮಲಯಾಳಂ ಖ್ಯಾತ ನಟ ದುರಂತ ಸಾವು!

ಕೊಚ್ಚಿ: ಮಲಯಾಳಂನ ಖ್ಯಾತ ನಟ ಅನಿಲ್ ನೆಡುಮಂಗಾಡ್,​ ಡ್ಯಾಂ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ. ಕೇರಳದ ತೊಡುಪುಳದಲ್ಲಿರುವ ಮಲಂಕರ ಡ್ಯಾಂನಲ್ಲಿ ಸ್ನಾನಕ್ಕೆಂದು ಸ್ನೇಹಿತರೊಟ್ಟಿಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಅಯ್ಯಪನುಮ್​ ಕೋಶಿಯುಮ್​, ಕಮಟ್ಟಿಪಾದಮ್​ ಮತ್ತು ಪಾವಡ ಸೇರಿದಂತೆ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾಗಿದ್ದ ಅನಿಲ್ ನೆಡುಮಂಗಾಡ್​, ತಮ್ಮ ಮುಂದಿನ ಜೊಜು ಜಾರ್ಜ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದ ಶೂಟಿಂಗ್​ ತೊಡುಪುಳದಲ್ಲಿ ನಡೆಯುತ್ತಿತ್ತು. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಡ್ಯಾಂಗೆ ತೆರಳಿದ್ದರು. … Continue reading ಶೂಟಿಂಗ್​ ಬಿಡುವಿನ ವೇಳೆ ಸ್ನಾನಕ್ಕೆಂದು ಹೋದ ಮಲಯಾಳಂ ಖ್ಯಾತ ನಟ ದುರಂತ ಸಾವು!