ಬಿಜೆಪಿಗೆ ಸೇರುವಂತೆ ನನಗೆ ಆಫರ್​ ಬಂದಿದ್ದು ನಿಜ: ಅನಿಲ್​ ಚಿಕ್ಕಮಾದು

ಮೈಸೂರು: ಬಿಜೆಪಿ ಪಕ್ಷಕ್ಕೆ ಸೇರುವಂತೆ ನನಗೆ ಆಫರ್​ ಬಂದಿದ್ದು ನಿಜ, ಸಿ.ಪಿ. ಯೋಗೇಶ್ವರ್​ ಅವರೇ ನನಗೆ ಆಹ್ವಾನ ನೀಡಿದ್ದರು ಎಂದು ಎಚ್.ಡಿ. ಕೋಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅನಿಲ್​ ಚಿಕ್ಕಮಾದು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಮಾದು ಆಪರೇಷನ್​ ಕಮಲದಲ್ಲಿ ಸಿ.ಪಿ. ಯೋಗೇಶ್ವರ್​ ಸಕ್ರಿಯರಾಗಿದ್ದಾರೆ. ನಿಮ್ಮ ಕ್ಷೇತ್ರದ ಕೆಲಸ ಮಾಡಿಕೊಡುತ್ತೇವೆ ಎಂದು ಆಮಿಷವೊಡ್ಡಿದ್ದರು. ಜತೆಗೆ ಅವರು ನನಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್​ ನೀಡುವ ಆಫರ್​ ನೀಡಿದ್ದರು ಎಂದು ಆರೋಪ ಮಾಡಿದರು.

ನಾನು ಕಷ್ಟದಲ್ಲಿದ್ದಾಗ ನನ್ನನ್ನು ಗುರುತಿಸಿ ಅವಕಾಶ ಕೊಟ್ಟಿದ್ದು ಕಾಂಗ್ರೆಸ್​ ಪಕ್ಷ. ಹಾಗಾಗಿ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅನಿಲ್​ ಚಿಕ್ಕಮಾದು ಸ್ಪಷ್ಟನೆ ನೀಡಿದ್ದಾರೆ.