ಮಹಾರಾಷ್ಟ್ರ: ಮಹಾರಾಷ್ಟ್ರದ ಕೊಲ್ಹಪುರದಲ್ಲಿ ತನ್ನ ಸೊಸೆ ಮದುವೆಯ ಆರಕ್ಷತೆಗೆ(Reception) ಬಂದಿದ್ದ ಅತಿಥಿಯರ(ನೆಂಟರಿಗೆ) ಕೊಲೆ ಅಥವಾ ಮಾನ ಹರಾಜು ಹಾಕುವ ಉದ್ದೇಶದಿಂದ ಮದುವೆಗೆ ತಯಾರಿದ ಅಡುಗೆಯಲ್ಲಿ ವಿಷ ಬೆರಸಿ ಪರಾರಿಯಾದ ಘಟನೆ ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭೂ ದಾಖಲೆ ಗಣಕೀಕರಣ ಸಮರ್ಪಕವಾಗಲಿ – ಸಚಿವ ಶಿವರಾಜ ತಂಗಡಗಿ ಸೂಚನೆ
ವಿಷ ಬೆರಸಿದ ಊಟವನ್ನು ಯಾರು ಸೇವಿಸಿಲ್ಲ. ಆದರೆ, ಕೆಲವರು ಸೇವಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಅವರ ರಕ್ತದ ಮಾದರಿಯನ್ನು ಟೆಸ್ಟ್ಗೆ ಕಳುಹಿಸಲಾಗಿದೆ. ಜೊತೆಗೆ ಅಡುಗೆಯ ಊಟದ ಸ್ಯಾಂಪಲ್ಸ್ ಕೂಡ ಟೆಸ್ಟ್ಗೆ ಕಳುಹಿಸಲಾಗಿದೆ. ವರದಿ ಬವರುವವರೆಗೂ ಕಾಯಬೇಕಾಗಿದೆ. ಇಲ್ಲಿನ ಉತ್ರೆ ಗ್ರಾಮದ ನಿವಾಸಿ ಮಹೇಶ್ ಪಾಟೀಲ್ ಆರೋಪಿ ಎಂದು ಗುರುತಿಸಲಾಗಿದೆ. ಅಡುಗೆಯಲ್ಲಿ ವಿಷ ಬೆರಸುವುದರ ಜತೆಯ ಕಲ್ಯಾಣ ಮಂಟಪ ಕಾಪೌಂಡ್ ಗೋಡೆ ಹೊಡೆದು ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಷ ಬೆರೆಸಲು ಕಾರಣ?
ಇತ್ತೀಚಿಗೆ ಗ್ರಾಮದ ವ್ಯಕ್ತಿಯೊಬ್ಬನೊಂದಿಗೆ ಓಡಿಹೋಗಿ ಆತನನ್ನು ಪಾಟೀಲ್ ಸೊಸೆ ಮದುವೆಯಾಗಿದ್ದು, ಇದು ಪಾಟೀಲ್‌ಗೆ ಒಪ್ಪಿಗೆಯಾಗದ ಕಾರಣ ಮಂಗಳವಾರ ಮದುವೆ ಮಂಟಪದಲ್ಲಿ ನಡೆದ ಮದುವೆ ಆರತಕ್ಷತೆ ಸಮಾರಂಭಕ್ಕೆ ಬಂದು ಆಹಾರ ಪದಾರ್ಥಗಳಲ್ಲಿ ವಿಷ ಬೆರೆಸಿ ಪರಾರಿಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
ಕರ್ನಾಟಕದ ಪ್ರೊ.ಯಜ್ಞೇಶ್ವರ ಶಾಸ್ತ್ರಿ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕ | Chancellor