Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಅಭಿಮಾನಿಗಳ ಕೋಪಕ್ಕೆ ಕಾರಣವಾಯ್ತು ಹಾರ್ದಿಕ್​ ಪಾಂಡ್ಯರ ಈ ಫೋಟೋ

Friday, 14.09.2018, 9:24 AM       No Comments

ನವದೆಹಲಿ: ಆತಿಥೇಯ ಇಂಗ್ಲೆಂಡ್​ ವಿರುದ್ಧ 4-1 ಅಂತರದಲ್ಲಿ ಸರಣಿ ಸೋತ ಟೀಂ ಇಂಡಿಯಾ ಅಭಿಮಾನಿಗಳನ್ನು ಹತಾಸೆಗೆ ದೂಡಿದೆ. ಇದಕ್ಕೆ ಉದಾಹರಣೆ ಎಂಬಂತೆ ಅಭಿಮಾನಿಗಳು ಹಾರ್ದಿಕ್​ ಪಾಂಡ್ಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸರಣಿ ಮುಗಿದ ನಂತರ ಹಾರ್ದಿಕ್​ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ರ್ಯಾಪರ್​ ಗೆಟಪ್​ನಲ್ಲಿರುವ ಫೋಟೋವೊಂದನ್ನು ಅಪ್​ಲೊಡಿ ಮಾಡಿ, ನಾವು ಸರಣಿಯನ್ನು ಸೋತಿದ್ದರು, ಸರಿ ಸಮವಾಗಿ ಹೋರಾಡಿದ್ದೇವೆ. ಕೆಚ್ಚೆದೆಯದಿಂದಲೇ ಟೀಂ ಇಂಡಿಯಾ ತವರಿಗೆ ಮರಳಲಿದೆ. ಕೆಲವು ದಿನಗಳ ನಂತರ ಏಷ್ಯಾ ಕಪ್​ ಶುರುವಾಗಲಿದ್ದು, ಈ ಬಿಡುವಿನಲ್ಲಿ ನಾವು ನಮ್ಮ ಮನೆಗೆ ವಾಪಸಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಕೋಪಗೊಂಡಿರುವ ಅಭಿಮಾನಿಗಳು ಪಾಂಡ್ಯ ಅವರಿಗೆ ವೃತ್ತಿ ಜೀವನದ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಕ್ರಿಕೆಟ್​ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದೇ, ರ್ಯಾಪರ್​ ರೀತಿ ಶೋ ಆಫ್​ ಕೊಡುತ್ತೀಯ ಎಂದು ಅಭಿಮಾನಿಯೊಬ್ಬ ವ್ಯಂಗ್ಯವಾಡಿದ್ದಾನೆ. ಮತ್ತೊಬ್ಬ ಬಾರ್​ ಸಪ್ಲೈಯರ್​ ಎಂದರೆ, ಇನ್ನೊಬ್ಬ ಗ್ಯಾಂಗ್​ಸ್ಟರ್​ ರೀತಿ ಕಾಣುತ್ತಿದ್ದೀಯಾ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ.

ಮೊದಲು ಒಳ್ಳೆಯ ಕ್ರಿಕೆಟ್​ ಆಡು, ಇಲ್ಲದಿದ್ದರೆ ನೀನು ಇದೇ ಸ್ಟೈಲ್​ನಲ್ಲಿ ಉಳಿದುಬಿಡುತ್ತೀಯ. ನಿನಗೆ ಕ್ರಿಕೆಟ್​ನಲ್ಲಿ ಜಾಗವಿರುವುದಿಲ್ಲ ಎಂದು ಅಭಿಮಾನಿಯೊಬ್ಬ ಪಾಂಡ್ಯ ಕಾಲೆಳೆದಿದ್ದಾರೆ.

ಅಂದಹಾಗೆ ಹಾರ್ದಿಕ್​ ಪಾಂಡ್ಯ ಆಂಗ್ಲರ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿ ಹರ್ಭಜನ್​ ಸಿಂಗ್​ ಅವರ ಕೆಂಗಣ್ಣಿಗೂ ಗುರಿಯಾಗಿದ್ದರು. ಈಗ ಅಭಿಮಾನಿಗಳ ಬಾಯಿಗೆ ಆಹಾರವಾಗಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top