blank

ಗ್ರಾಪಂ ಮೇಲಿನ ಸಿಟ್ಟಿಗೆ ಅಂಗನವಾಡಿಗೆ ಬೇಲಿ!

blank

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಪಂನ ಕಾರಗೋಡಿನಲ್ಲಿ ಇ-ಸ್ವತ್ತು ನೀಡಿಲ್ಲವೆಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ತನ್ನೂರಿನ ಅಂಗನವಾಡಿ ಕಟ್ಟಡಕ್ಕೆ ಯಾರೂ ಸಹ ತೆರಳದಂತೆ ಬೇಲಿ ನಿರ್ಮಿಸಿ ಬಾಗಿಲಿಗೆ ಮತ್ತೊಂದು ಬೀಗ ಹಾಕಿದ್ದಾನೆ.
ರಿಪ್ಪನ್‌ಪೇಟೆ ನಿವಾಸಿ ನೇತ್ರಾವತಿ ಗಣೇಶ್ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಮೂಗುಡ್ತಿಯಲ್ಲಿ ಜಾಗ ಹೊಂದಿದ್ದು, ಈ ಜಾಗಕ್ಕೆ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇ-ಸ್ವತ್ತಿಗೆ ಬೇಕಾದ ಮೂಲ ದಾಖಲಾತಿ ಲಗತ್ತಿಸದೇ ಇರುವುದರಿಂದ ಗ್ರಾಮಾಡಳಿತವು 11ಬಿ ನೀಡಿದೆ. ಇದರಿಂದ ತೃಪ್ತರಾಗದ ನೇತ್ರಾವತಿ, ಗಣೇಶ ಕಾರಗೋಡು ಗ್ರಾಮದ ತಮ್ಮ ಜಮೀನಿನ ಪಕ್ಕದಲ್ಲಿರುವ ಅಂಗನವಾಡಿಗೆ ಕೇಂದ್ರಕ್ಕೆ ಬೇಲಿ ನಿರ್ಮಿಸಿ ಪಂಚಾಯಿತಿ ವಿರುದ್ಧದ ಹಗೆ ಸಾಧಿಸಿದ್ದಾನೆ.
ಮಂಗಳವಾರ ಅಂಗನವಾಡಿಗೆ ರಜೆಯಿದ್ದು, ಬುಧವಾರ ಎಂದಿನಂತೆ ಕಾರ್ಯಕರ್ತೆ ಹಾಗೂ ಮಕ್ಕಳು ಅಂಗನವಾಡಿಗೆ ಬಂದಾಗ ಸುತ್ತಲೂ ಬೇಲಿ ನಿರ್ಮಿಸಿ, ಒಳಗೆ ಹೋಗದಂತೆ ತಡೆಯೊಡ್ಡಿರುವುದು ಬೆಳಕಿಗೆ ಬಂದಿದೆ. ಕಾರ್ಯಕರ್ತೆ ವಿಚಾರಿಸಿದಾಗ ಪಕ್ಕದಲ್ಲಿಯೇ ಇದ್ದ ನೇತ್ರಾವತಿ ಎಂಬುವರು ಅಂಗನವಾಡಿ ಜಾಗವು ನಮ್ಮ ಖಾತೆ ಜಮೀನಿಗೆ ಸೇರಿದ್ದರಿಂದ ಬೇಲಿ ಹಾಕಿದ್ದೇವೆ. ಇಲ್ಲಿ ಅಂಗನವಾಡಿ ನಡೆಸಲು ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಕಾರ್ಯಕರ್ತೆಯು ಗ್ರಾಪಂ ಹಾಗೂ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕ್ಕಾಗಿ ಕೋರಿದ್ದಾರೆ. ಕಾರಗೋಡು ಗ್ರಾಮದಲ್ಲಿ ಮೂರು ದಿನಗಳಿಂದ ಅಂಗನವಾಡಿ ತೆರೆಯದೆ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ತೊಂದರೆ ಆಗುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಪಿಡಿಒ ರಾಘವೇಂದ್ರ ಸ್ಥಳಕ್ಕೆ ಭೇಟಿನೀಡಿ ಬೇಲಿ ತೆರವುಗೊಳಿಸುವಂತೆ ನೇತ್ರಾವತಿ ಅವರಿಗೆ ತಿಳಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಟ್ಟಡಕ್ಕೆ ಅಕ್ರಮವಾಗಿ ಬೇಲಿ ನಿರ್ಮಿಸಿ, ಬೀಗ ಹಾಕಿದ ನೇತ್ರಾವತಿ, ಗಣೇಶ ಮತ್ತು ಪಾರ್ವತಿ ಎಂಬುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಪಟ್ಟಣದ ಪೊಲೀಸ್ ಠಾಣೆ ಹಾಗೂ ಹೊಸನಗರ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅವರು ಬೇಲಿ ತೆರವುಗೊಳಿಸಿ, ಬೀಗ ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವುಮಾಡಿಕೊಟ್ಟಿದ್ದಾರೆ.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…