ಕಳಪೆ ಆಹಾರ ಸರಬರಾಜಿಗೆ ಕಿಡಿ

ಬೀದರ್: ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕತೆಯರ ಹಾಗೂ ಸಹಾಯಕಿಯರ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಜಿಪಂ ಕಚೇರಿ ಎದುರು ಧರಣಿ ನಡೆಸಿದ ಅಂಗನವಾಡಿ ನೌಕರರು, ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಕಳಪೆ ಆಹಾರ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ತಕ್ಷಣವೇ ಗುಣಮಟ್ಟದ ಆಹಾರ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಂಗನವಾಡಿಗಳಿಗೆ ಅಗತ್ಯಕ್ಕನುಗುಣ ಆಹಾರ ನೀಡಬೇಕು. ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಯಕತರ್ೆಯರು, ಸಹಾಯಕಿಯರಿಗೆ ಬಾಕಿ ಇರುವ ಮೂರು ತಿಂಗಳ ಗೌರವ ಧನ, ನನೆಗುದಿಗೆ ಬಿದ್ದಿರುವ ಬಾಡಿಗೆ ಮಂಜೂರು ಮಾಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಿಲಿಂಡರ್ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ಜಿಪಂ ಸಿಇಒಗೆ ಸಲ್ಲಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷೆ ಲಕ್ಷ್ಮೀ ದಂಡಿ, ಜಿಲ್ಲಾ ಸಂಚಾಲಕ ಬಾಬುರಾವ ಹೊನ್ನಾ, ಚಂದ್ರಕಲಾ ನಜರತ್, ನಜೀರ್ ಅಹ್ಮದ್ ಚೊಂಡಿ, ಬಸಮ್ಮ ಮಿಠಾರೆ, ಶಕುಂತಲಾ, ಸರೋಜನಿ, ಭಾರತಿ, ಇಂದುಮತಿ, ಪುಷ್ಪಾ, ರೇಖಾ, ಮಂಗಲಾ, ವಿಜಯಲಕ್ಷ್ಮಿ, ಚೆನ್ನಮ್ಮ, ಇಂದುಮತಿ, ಇಶಾಲಕ್ಷ್ಮಿ, ಭಾರತಿ ನಾವದಗೇರಿ, ಸರುಬಾಯಿ ಘೋಡಂಪಳ್ಳಿ, ಮನೋರಂಜನಿ ಇತರರಿದ್ದರು