ಆನೇಕಲ್: ಒಂದು ಲೋಡ್ ಹೂ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಉಡುಗೂರೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾಸಕ ಶಿವಣ್ಣರಿಗೆ ಸೂಚನೆ ನೀಡಿದರು.
ಆನೇಕಲ್ನಲ್ಲಿ ರೈತರ ಜಮೀನುಗಳಿಗೆ ಡಿಕೆಶಿ ಹಾಗೂ ಸಂಸದ ಡಿ.ಕೆ. ಸುರೇಶ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಶಾಸಕ ಶಿವಣ್ಣ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಡಿಕೆಶಿ ಹೂದೋಟಗಳಲ್ಲಿ ಹೂಗಳು ನಿಂತಲೇ ನಿಂತಿವೆ. ಹೂ ಬೆಳೆದ ಬೆಳೆಗಾರರ ಬದುಕು ಅತಂತ್ರವಾಗಿದೆ. ತಕ್ಷಣವೇ ಜಿಲ್ಲಾ ಉಸ್ತುವಾರಿ ಮತ್ತು ತೋಟಗಾರಿಕೆ ಮಂತ್ರಿಗಳು ರೈತರ ತೋಟಗಳಿಗೆ ಭೇಟಿ ನೀಡುವಂತೆ ಡಿಕೆಶಿ ಸರ್ಕಾರವನ್ನು ಆಗ್ರಹಿಸಿದರು.
ನಷ್ಟವುಂಟಾದ ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡಿ, ನಷ್ಟದ ಅಂದಾಜು ಮಾಡಿ ಪರಿಹಾರದ ಮೊತ್ತವನ್ನು ಸರ್ಕಾರ ಹೊರಡಿಸಬೇಕೆಂದು ಡಿ.ಕೆ.ಸುರೇಶ್ ಆಗ್ರಹಿಸಿದರು.
ಶಾಸಕ ಶಿವಣ್ಣ ಮಾರುಕಟ್ಟೆಯ ದರದಲ್ಲಿ ರೈತರ ಜಮೀನಿನಿಂದ ತರಕಾರಿ ಖರೀದಿ ಮಾಡಿದ್ದ. ಆದರೆ, ಹೂ ಖರೀದಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರವೇ ಹೂ ಬೆಳೆಗಾರರ ಬೆನ್ನಿಗೆ ನಿಲ್ಲಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ಆನೆಕಲ್ಲಿನ ಕೂನಿಮಡಿವಾಳ, ಎಲ್ಲಮ್ಮನ ಪಾಳ್ಯ ದೊಡ್ಡಹಾಗಡೆ ಹಾಗೂ ಹುಸ್ಕೂರಿನ ರೈತರ ತೋಟಗಳಿಗೆ ಡಿಕೆಶಿ, ಡಿ.ಕೆ. ಸುರೇಶ್ ಭೇಟಿ ನೀಡಿದರು. ಈ ವೇಳೆ ಹುಸ್ಕೂರಿನಲ್ಲಿ ರೈತರೊಬ್ಬರು ಬೆಳೆದ ಕ್ಯಾಪ್ಸಿಕಂ ಬೆಳೆಯನ್ನು ಸ್ವತಃ ಸಂಸದ ಡಿಕೆ ಸುರೇಶ್ ಅವರು ಖರೀದಿ ಮಾಡುವ ಮೂಲಕ ಮಾನವೀಯತೆ ಮೆರೆದರು. (ದಿಗ್ವಿಜಯ ನ್ಯೂಸ್)
ಕರೊನಾ ಸೋಂಕಿತರ ಪೈಕಿ ಶೇ.80 ಜನರಲ್ಲಿ ಆರಂಭಿಕ ಲಕ್ಷಣಗಳು: ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ