ಬಾಗಲಕೋಟೆ: ನೋಡು ನೋಡುತ್ತಲೇ ಹೊತ್ತಿ ಉರಿದ ಆ್ಯಂಡ್ರಾಯ್ಡ್ ಮೊಬೈಲ್ನಿಂದ ಮೊಬೈಲ್ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ.
- Advertisement -
ನಗರದ ಕಿಲ್ಲಾ ಗಲ್ಲಿಯಲ್ಲಿ ರಾಘವೇಂದ್ರ ಕುಲಕರ್ಣಿ ಎಂಬುವವರ ಎಂಐ ನೋಟ್ ತ್ರೀ ಮೊಬೈಲ್ ಸಂಪೂರ್ಣ ಸುಟ್ಟು ಕರಕರಲಾಗಿದೆ. ಜೇಬಿನಲ್ಲಿದ್ದ ಮೊಬೈಲ್ ತೆಗೆದು ಕರೆ ಮಾಡಲೆಂದು ನಂಬರ್ ಒತ್ತಿದ್ದಾಗ ಇದ್ದಂಕ್ಕಿದಂತೆ ಹೆಚ್ಚು ಬಿಸಿಯಾಗಿ ಹೊಗೆ ಬರಲು ಶುರುವಾಯಿತು. ಇದನ್ನು ಗಮನಿಸಿದ ರಾಘವೇಂದ್ರ ಭಯದಿಂದ ಮೊಬೈಲ್ ಪಕ್ಕಕ್ಕೆ ಎಸೆದಿದ್ದರೆ. ಈ ಹಿನ್ನೆಲೆ ಮೊಬೈಲ್ನಲ್ಲಿದ್ದ ಸಿಮ್ ಎಲ್ಲ ಸುಟ್ಟು ಭಸ್ಮವಾಗಿದೆ.
ಒಂದು ವರ್ಷದ ಹಿಂದೆ ಆನ್ಲೈನ್ನಲ್ಲಿ ಮೊಬೈಲ್ ಪರಿಚಯಿಸಿದ್ದರು. ಈ ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ. ಆದರೆ ಮೊಬೈಲ್ ಬಳಕೆದಾರರು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. (ದಿಗ್ವಿಜಯ ನ್ಯೂಸ್ )