ರಾಯಚೂರು: ಆಂಧ್ರದ ಕಡಪ ಜಿಲ್ಲೆ ಸಿದ್ಧಪಟ್ಟಣಂ ಬಳಿ ಪೆನ್ನಾರ್ ನದಿಯಲ್ಲಿ ಈಜಲು ಹೋಗಿ ರಾಯಚೂರು ಮೂಲದ ಮೂವರು ಬಾಲಕಿಯರು ಸೇರಿ ನಾಲ್ವರು ಗುರುವಾರ ಮೃತಪಟ್ಟಿದ್ದಾರೆ. ನಗರದ ಮೆಥೋಡಿಸ್ಟ್ ಚರ್ಚ್ ಬಳಿಯ ಬಡಾವಣೆ ನಿವಾಸಿ ಗೌಸ್ ಪಾಶಾ ಎಂಬುವರ ಮಕ್ಕಳಾದ ಮದಿಹಾ (12), ಫರೀಹಾ (10) ಮತ್ತು ಲೋಹಾ (8) ಮೃತಪಟ್ಟಿದ್ದು, ಇವರನ್ನು ರಕ್ಷಿಸಲು ಹೋದ ಅನ್ವರ್ (35) ಕೂಡಾ ಸಾವಿಗೀಡಾಗಿದ್ದಾರೆ. ಸೋದರ ಮಾವನ ಮನೆಗೆ ಈ ಬಾಲಕಿಯರು ಹೋದಾಗ ಈ ದುರ್ಘಟನೆ ನಡೆದಿದೆ. ಬಾಲಕಿಯರ ಮನೆಯಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಮೃತ ಬಾಲಕಿಯರ ಶವಗಳನ್ನು ರಾಯಚೂರಿಗೆ ಅಂತ್ಯಕ್ರಿಯೆಗಾಗಿ ತರಲಾಗುತ್ತಿದೆ.