18 ಸಾವಿರ ರೂಪಾಯಿಗಳಲ್ಲಿ ಮಗನ ಮದುವೆ ಮಾಡಲು ನಿರ್ಧರಿಸಿದ್ದಾರೆ ಈ ಐಎಎಸ್‌ ಅಧಿಕಾರಿ

ವಿಶಾಕಪಟ್ಟಣಂ: ಅದ್ಧೂರಿಯಾಗಿ ವಿವಾಹ ನೇರವೇರಿಸುವುದು ಇಂದಿನ ಮಟ್ಟಿಗೆ ವಿಶೇಷವೇನಲ್ಲ. ಎಲ್ಲ ಕುಟುಂಬಗಳು ಮದುವೆ ಸಮಾರಂಭಗಳಿಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಬ್ಬರು ಐಎಎಸ್‌ ಅಧಿಕಾರಿ ಇತರರಿಗೆ ಮಾದರಿಯಾಗಿದ್ದಾರೆ.

ಹೌದು, ಆಂಧ್ರಪ್ರದೇಶದ ಪಟ್ನಾಳ ಬಸಂತ್‌ ಕುಮಾರ್‌ ವಿಶಾಖಪಟ್ಟಣಂನ ಮಹಾನಗರ ಪ್ರವೇಶಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತಮ್ಮ ಮಗನ ಮದುವೆಗೆ ಖರ್ಚು ಮಾಡಲಿರುವುದು ಕೇವಲ 18 ಸಾವಿರ ರೂ. ಮಾತ್ರ ಎಂದರೆ ನೀವಿದನ್ನು ನಂಬಲೇಬೇಕು.

ಫೆ. 10 ರಂದು ವಿವಾಹ ನಡೆಯಲಿದ್ದು, ಮಧುಮಗ ಮತ್ತು ವಧುವಿನ ಕುಟುಂಬವು ಅತಿಥಿ, ಊಟದ ಖರ್ಚು ಸೇರಿದಂತೆ ಎಲ್ಲ ಸಮಾರಂಭಕ್ಕೂ ತಲಾ 18,000 ರೂ. ಮಾತ್ರ ವ್ಯಯಿಸಲಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಶುಕ್ರವಾರ ವಿವಾಹದಲ್ಲಿ ಪಾಲ್ಗೊಂಡು ದಂಪತಿಗಳನ್ನು ಹರಸಲಿದ್ದಾರೆ.

2017ರಲ್ಲಿ ಬಸಂತ್‌ಕುಮಾರ್‌ ಎನ್ನುವವರು ಕೂಡ ತಮ್ಮ ಮಗಳ ಮದುವೆಯನ್ನು ಕೇವಲ 16,100 ರೂ.ಗಳಲ್ಲಿ ಮಾಡಿ ಸರಳತೆಯನ್ನು ಮೆರೆದಿದ್ದರು. ಇವರು ಕೂಡ 2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದರು. ಇದಕ್ಕೂ ಮುನ್ನ ವಿಶೇಷ ಕರ್ತವ್ಯ ಮತ್ತು ರಾಜ್ಯಪಾಲ ನರಸಿಂಹನ್‌ ಅವರ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. (ಏಜೆನ್ಸೀಸ್)