ಭತ್ತ ನಾಟಿ ಮಾಡದಂತೆ ಆಂಧ್ರ ಪೊಲೀಸರಿಂದ ಬಳ್ಳಾರಿ ರೈತರಿಗೆ ಎಚ್ಚರಿಕೆ

ಬಳ್ಳಾರಿ: ಭತ್ತ ನಾಟಿ ಮಾಡದಂತೆ ಆಂಧ್ರ ಪ್ರದೇಶದ ಪೊಲೀಸರು ಬಳ್ಳಾರಿ ರೈತರಿಗೆ ಎಚ್ಚರಿಕೆ ನೀಡಿದ್ದು, ಆಂಧ್ರ ಪೊಲೀಸರ ನಡೆಯಿಂದ ರೈತರು ಕಂಗಾಲಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ನಾಲ್ಕು ತಾಲೂಕುಗಳ ಮುಖಾಂತರ ಎಲ್​ಎಲ್​ಸಿ ಕಾಲುವೆ ನೀರು ಆಂಧ್ರಕ್ಕೆ ಹರಿಯುತ್ತದೆ. ಮುಂದೆ ಬೇಸಿಗೆ ಬರುವುದರಿಂದ ಕಾಲುವೆ ನೀರು ಬಳಸಿ ಭತ್ತ ನಾಟಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಭತ್ತ ನಾಟಿ ಮಾಡಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಕಂಪ್ಲಿ, ಕುರುಗೋಡು ಹಾಗೂ ಸಿರಗುಪ್ಪ ಗ್ರಾಮಗಳಿಗೆ ಪೊಲೀಸರೇ ತೆರಳಿ ಡಂಗೂರ ಸಾರಿಸಿ ಎಚ್ಚರಿಕೆ ನೀಡಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ತುಂಗಭದ್ರ ನೀರು ನಿರ್ವಹಣಾ ಮಂಡಳಿ ಇತ್ತೀಚೆಗೆ ಕೆಳ ಮಟ್ಟದ ಕಾಲುವೆಗೆ ಏಪ್ರಿಲ್ 1 ರವರೆಗೆ ನೀರು ಬಿಡುವುದಾಗಿ ಪ್ರಕಟಿಸಿದೆ. ಆದರೀಗ ಕಾಲುವೆ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಆಂಧ್ರ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. (ದಿಗ್ವಿಜಯ ನ್ಯೂಸ್​)