ಏಕತಾ ಪ್ರತಿಮೆಗೆ ಆಂಧ್ರ ಸಿಎಂ ನಾಯ್ಡು ಸೆಡ್ಡು

ವಿಜಯವಾಡ: ಬಿಜೆಪಿ ವಿರೋಧಿ ಒಕ್ಕೂಟ ರಚನೆಗೆ ನೇತೃತ್ವ, ಸಿಬಿಐಗೆ ಆಂಧ್ರ ಪ್ರವೇಶಿಸದಂತೆ ನಿರ್ಬಂಧ ಹೇರುವ ಮೂಲಕ ಸುದ್ದಿಯಲ್ಲಿದ್ದ ಸಿಎಂ ಚಂದ್ರಬಾಬು ನಾಯ್ಡು, ಈಗ ಏಕತಾ ಪ್ರತಿಮೆಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ನೂತನ ರಾಜಧಾನಿ ಅಮರಾವತಿಯಲ್ಲಿ ನಿರ್ವಣವಾಗಲಿರುವ ವಿಧಾನಸಭೆ ಕಟ್ಟಡವನ್ನು ಏಕತಾ ಪ್ರತಿಮೆಗಿಂತಲೂ 68 ಮೀ. ಹೆಚ್ಚು ಎತ್ತರ ನಿರ್ವಿುಸಲು ಮುಂದಾಗಿದ್ದಾರೆ. ನವೆಂಬರ್ ಅಂತ್ಯಕ್ಕೆ ಟೆಂಡರ್ ಕರೆಯಲಾಗುವುದು. ಎರಡು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಆಂಧ್ರ ಪೌರಾಡಳಿತ ಸಚಿವ ಪಿ. ನಾರಾಯಣ ಹೇಳಿದ್ದಾರೆ. ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿರುವ ಗುಜರಾತ್​ನ ಸಾಧುಬೆಟ್​ನಲ್ಲಿರುವ ಸರ್ದಾರ್ ಪಟೇಲರ ಏಕತಾ ಪ್ರತಿಮೆ 182 ಮೀ. ಎತ್ತರವಿದೆ.

ತಲೆಯೆತ್ತಲಿರುವ ಪ್ರತಿಮೆಗಳು…

  • ಉತ್ತರ ಪ್ರದೇಶದಲ್ಲಿ 201 ಮೀ. ಎತ್ತರದ ಶ್ರೀರಾಮನ ಪ್ರತಿಮೆ
  • ಕರ್ನಾಟಕ ಸರ್ಕಾರದಿಂದ 125 ಮೀ. ಎತ್ತರದ ಕಾವೇರಿ ಪ್ರತಿಮೆ
  • ಮುಂಬೈ ಬಳಿ ಅರಬ್ಬಿ ಸಮುದ್ರದಲ್ಲಿ 212 ಮೀ. ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ

ಬ್ರಿಟನ್​ವಾಸ್ತುಶಿಲ್ಪಿಗಳು

‘ನೋರ್ವ ಫಾಸ್ಟರ್ಸ್’ ಎಂಬ ಬ್ರಿಟನ್ ಮೂಲದ ವಾಸ್ತುಶಿಲ್ಪ ಕಂಪನಿಯ ತಜ್ಞರು ರೂಪಿಸಿರುವ ವಿಧಾನಸಭೆ ಕಟ್ಟಡದ ನೀಲಿನಕ್ಷೆಗೆ ನಾಯ್ಡು ಸಮ್ಮತಿ ನೀಡಿದ್ದಾರೆ. ಮೂರು ಮಹಡಿಗಳ ವಿಧಾನಸಭೆ ಕಟ್ಟಡದ ಒಟ್ಟು ಎತ್ತರ 250 ಮೀ.ಗೂ ಹೆಚ್ಚಿರಲಿದೆ.

ವಿಧಾನಸಭೆ ವಿಶೇಷ

  • ಲಿಲ್ಲಿ ಹೂವನ್ನು ಉಲ್ಟಾ ಇಟ್ಟಿರುವಂತೆ ಕಾಣುವ ಕಟ್ಟಡ ವಿನ್ಯಾಸ
  • ಎರಡು ಗ್ಯಾಲರಿ: 80 ಮೀ. ಎತ್ತರದಲ್ಲಿ 300 ಜನರಿಗೆ ಆಸನ ವ್ಯವಸ್ಥೆ, 250 ಮೀ. ಎತ್ತರದಲ್ಲಿ 20 ಜನರಿಗೆ ಆಸನ ವ್ಯವಸ್ಥೆ. ಇಲ್ಲಿಂದಲೇ ಪೂರ್ಣ ಅಮರಾವತಿ ಗೋಚರ.
  • ಗಾಜಿನಲ್ಲಿ ಗ್ಯಾಲರಿ ಮತ್ತು ಅದಕ್ಕೆ ತಲುಪುವ ಎಲಿವೇಟರ್​ಗಳ ನಿರ್ಮಾಣ.
  • ಚಂಡಮಾರುತ, ಭೂಕಂಪನ ನಿರೋಧಕ ಸಾಮರ್ಥ್ಯದ ಕಟ್ಟಡಗಳು.

Leave a Reply

Your email address will not be published. Required fields are marked *