ಕನ್ನಡಿಗ ಅನಿಲ್​ ಕುಂಬ್ಳೆ ದಾಖಲೆ ಮುರಿದ ಜೇಮ್ಸ್​ ಆಂಡರ್​ಸನ್​

ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್​ ಮತ್ತು ಭಾರತದ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಅನಿಲ್​ ಕುಂಬ್ಳೆ ಅವರ ದಾಖಲೆಯೊಂದು ಮುರಿದು ಬಿದ್ದಿದೆ.

ಇಂಗ್ಲೆಂಡ್​ನ ವೇಗಿ ಜೇಮ್ಸ್​ ಆಂಡರ್​ಸನ್ ಅವರು ತವರು ನೆಲದಲ್ಲಿ 353 ವಿಕೆಟ್​ ಗಳಿಸುವ ಮೂಲಕ ಇದುವರೆಗೆ ಕುಂಬ್ಳೆ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಇದಕ್ಕೂ ಮೊದಲು ಕುಂಬ್ಳೆ ಅವರು ತವರು ನೆಲದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಎರಡನೇ ಬೌಲರ್​ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಕುಂಬ್ಳೆ ಭಾರತದ ಪಿಚ್​ಗಳಲ್ಲಿ ಒಟ್ಟಾರಿ 350 ವಿಕೆಟ್​ಗಳನ್ನು ಪಡೆದಿದ್ದಾರೆ.

ಶ್ರೀಲಂಕಾದ ಸ್ಪಿನ್ನರ್​ ಮುತ್ತಯ್ಯ ಮುರಳಿಧರನ್​ ಅವರು ಶ್ರೀಲಂಕಾದ ನೆಲದಲ್ಲಿ ಒಟ್ಟಾರೆ 493 ವಿಕೆಟ್​ಗಳನ್ನು ಪಡೆಯುವ ತವರು ನೆಲದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

 

ಇಲ್ಲಿದೆ ವಿಕೆಟ್​ ಮಾಹಿತಿ