ಪಾಂಡವಪುರ: ಶ್ರೀಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ರಥವನ್ನು ಪಟ್ಟಣದ ಬನ್ನಾರಿ ಮಾರಮ್ಮ ದೇವಸ್ಥಾನದ ಬಳಿ ರಾಮಯೋಗೀಶ್ವರ ಮಠದ ಶ್ರೀಗುರುಸಿದ್ದೇಶ್ವರಸ್ವಾಮೀಜಿ ಅವರ ನೇತೃತ್ವದಲ್ಲಿ ಬರಮಾಡಿಕೊಂಡು ತಾಲೂಕು ಆಡಳಿತದ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಕೆ.ಆರ್.ಪೇಟೆಯಿಂದ ಪಾಂಡವಪುರ ಪಟ್ಟಣಕ್ಕೆ ಸಂಜೆ 5 ಗಂಟೆಗೆ ಆಗಮಿಸಿದ ರಥಕ್ಕೆ ತಾಲೂಕಿನ ಭಕ್ತರು ಪೂಜೆ ಸಲ್ಲಿಸಿದರು.
ವೀರಶೈವ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಗ್ರಾಮೀಣ ಸೊಗಡಿನ ಸುತ್ತೂರು ಜಾತ್ರೆ ಜನವರಿ 20ರಿಂದ 26ರವರೆಗೆ ಒಂದು ವಾರ ಜರುಗಲಿದೆ. ಜನವರಿ 23ರಂದು ನಡೆಯಲಿರುವ ರಥೋತ್ಸವ ಹಾಗೂ ಜನವರಿ 25ರಂದು ನಡೆಯಲಿರುವ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ಸುಧಾಕರ್, ಜಿಪಂ ಸದಸ್ಯ ಸಾಮಿಲ್ ತಿಮ್ಮೇಗೌಡ, ತಾಲೂಕು ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಹಾಗನಹಳ್ಳಿ ನಿಂಗಪ್ಪ, ಸಾಹಿತಿ ಪ್ರೊ.ಬಿ.ನಾರಾಯಣಗೌಡ, ಮಕ್ಕಳ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ವೀರಶೈವ ಮುಖಂಡರಾದ ಜಗದೀಶ್, ಮಲ್ಲೇಶ್, ದಕ್ಷಿಣಾಮೂರ್ತಿ, ಬಿ.ಎಸ್.ಚಂದ್ರಶೇಖರ್ ಇತರರು ಇದ್ದರು.