Ananya Panday: ಬಾಲಿವುಡ್ ಅಂಗಳದಲ್ಲಿ ಒಂದಷ್ಟು ಸಿನಿಮಾಗಳ ಮೂಲಕ ಹಿಂದಿ ಸಿನಿಪ್ರಿಯರಿಗೆ ಚಿರಪರಿಚಿತರಾಗಿರುವ ಯುವನಟಿ ಅನನ್ಯ ಪಾಂಡೆ, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’, ‘ಪತಿ ಪತ್ನಿ ಔರ್ ವೋ’, ‘ಖಾಲಿ ಪೀಲಿ’, ‘ಗೆಹರೈಯಾನ್’, ‘ಡ್ರೀಮ್ ಗರ್ಲ್ 2’, ‘ಖೋ ಗಯೇ ಹಮ್ ಕಹಾನ್’, ‘ಬ್ಯಾಡ್ ನ್ಯೂಸ್’, ‘ಖೇಲ್ ಖೇಲ್ ಮೇ’, ‘ಲೈಗರ್’ ಚಿತ್ರಗಳಲ್ಲಿ ನಟಿಸಿ, ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಇದೀಗ ಆರಂಭದ ದಿನಗಳಲ್ಲಿ ತಾವು ಎದುರಿಸಿದ ಕೆಲವು ಕಹಿ ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ದೇವರಿಗೆ ಮತ್ತೊಂದು ಗೌರವ… ಬಿಸಿಸಿಐನಲ್ಲಿ ಸಚಿನ್ ತೆಂಡೂಲ್ಕರ್ ಗೌರವಿಸಲು ‘SRT 100’ ಕೊಠಡಿ.. Sachin Tendulkar
“ಚಿತ್ರನಟರು ಕೂಡ ಮನುಷ್ಯರೇ. ಅವರಿಗೂ ಮನಸ್ಸು ಇರುತ್ತೆ. ನೀವು ಅವರ ಬಗ್ಗೆ ಇಷ್ಟ ಬಂದಂತೆ ಕಾಮೆಂಟ್ ಮಾಡಿದಾಗ, ಆ ಮನಸ್ಸಿಗೂ ಘಾಸಿಯಾಗುತ್ತದೆ. ಕೆಲವರು, ಇನ್ನೊಬ್ಬರ ಭಾವನೆಗಳನ್ನು ಲೆಕ್ಕಿಸದೆ ಇಷ್ಟಬಂದಂತೆ ಕಮೆಂಟ್ ಮೂಲಕ ನಾಲಿಗೆ ಹರಿಬಿಡುತ್ತಾರೆ. ವಿಶೇಷವಾಗಿ ದೇಹದ ಆಕಾರದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ. ಇದೆಲ್ಲವನ್ನೂ ಸಹಿಸಿಕೊಂಡು, ಮುನ್ನುಗ್ಗಿದರೆ ಮಾತ್ರ ನಮ್ಮ ವೃತ್ತಿಜೀವನದಲ್ಲಿ ನಾವು ಯಶಸ್ವಿಯಾಗಲು ಸಾಧ್ಯ” ಎಂದು ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅನನ್ಯಾ ಹೇಳಿದ್ದಾರೆ.
“ಆರಂಭದ ದಿನಗಳಲ್ಲಿ ನಾನು ತೆಳ್ಳಗಿದ್ದೆ. ಈ ಸಮಯದಲ್ಲಿ ಹಲವರು ನನ್ನ ದೇಹದ ಆಕಾರ ಕುರಿತು ಚುಚ್ಚು ಮಾತುಗಳನ್ನಾಡಿದ್ದರು. ಟೀಕೆ, ವ್ಯಂಗ್ಯಗಳು ತೀರ ಸಾಮಾನ್ಯವಾಗಿದ್ದವು. ನನಗೆ ನೆನಪಿರುವಂತೆ ನಾನು 18ರಿಂದ 19ನೇ ವಯಸ್ಸಿನಲ್ಲಿ ಚಿತ್ರೋದ್ಯಮ ಪ್ರವೇಶಿಸಿದೆ. ಆಗ ಹಲವರು, ನನ್ನ ದೇಹದ ಆಕಾರ ನೋಡಿ, ಅವಳ ಕಾಲುಗಳು ಕೋಳಿಯಂತಿವೆ. ಎದೆ ಭಾಗ ದೊಡ್ಡದ್ದಿಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂದೆಲ್ಲ ಮಾತನಾಡಿದ್ದರು. ನಾವು ಹೇಗಿದ್ದರೂ, ಇಂಥಾ ಟೀಕೆಗಳು ಅನಿವಾರ್ಯ. ಇದನ್ನೆಲ್ಲ ನಿರ್ಲಕ್ಷಿಸಿ, ಕೇವಲ ನಮ್ಮ ಕೆಲಸದತ್ತ ಗಮನಹರಿಸಿದರೆ ಮಾತ್ರ ನಾವು ಬೆಳೆಯಲು ಸಾಧ್ಯ” ಎಂದು ಅನನ್ಯ ಮನಬಿಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).
ದೇವರೇ ಆ ಡೈರಿಯನ್ನು ಮುರಿದು ಹಾಕಿದ್ದಾನೆ! ‘ಕಿಂಗ್’ ಕೊಹ್ಲಿ ಕುರಿತು ಆಕಾಶ್ ಚೋಪ್ರಾ ಮನದಾಳ | Virat Kohli