ಅನನ್ಯಾ ಕಾಸರವಳ್ಳಿಗೆ ಕಂಕಣಭಾಗ್ಯ

ಹಿರಿಯ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯಾ ಕಾಸರವಳ್ಳಿ ಶುಕ್ರವಾರ (ಫೆ.22) ಬೆಳಗ್ಗೆ ಬಾಳಬಂಧನಕ್ಕೆ ಒಳಗಾದರು. ಅವರನ್ನು ಸಂತೋಷ್ ವರಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಹಲವು ಸೆಲೆಬ್ರಿಟಿಗಳು ಸಾಕ್ಷಿಯಾದರು. ತಂದೆ ರೀತಿಯೇ ಸಿನಿಮಾದಲ್ಲಿ ಆಸಕ್ತಿ ಹೊಂದಿರುವ ಅನನ್ಯಾ ‘ಹರಿಕಥಾ ಪ್ರಸಂಗ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.