ಅನಂತು vs ನುಸ್ರುತ್​ ಚಿತ್ರ ತಂಡದ ವಿರುದ್ಧ ಎಫ್​​ಐಆರ್​ ದಾಖಲು, ಹೈಕೋರ್ಟ್​ ನಿರ್ದೇಶನದಂತೆ ಕ್ರಮ

ಬೆಂಗಳೂರು: ಅನುಮತಿ ಇಲ್ಲದೇ ಚಿತ್ರೀಕರಣ ನಡೆಸಿದ ಆರೋಪದ ಮೇಲೆ ನಟ ವಿನಯ್​ ರಾಜ್​ಕುಮಾರ್​ ಅಭಿನಯದ ಅನಂತು ವರ್ಸಸ್​ ನುಸ್ರುತ್​ ಚಿತ್ರ ತಂಡದ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಅನುಮತಿ ಇಲ್ಲದೆ ಹೈಕೋರ್ಟ್ ಮುಂಭಾಗದ ಆವರಣ ಹಾಗೂ ವಕೀಲರ ಲೈಬ್ರರಿಯಲ್ಲಿ ಚಿತ್ರತಂಡ ಶೂಟಿಂಗ್ ಮಾಡಿತ್ತು. ದೊಡ್ಡ ದೊಡ್ಡ ಕ್ಯಾಮೆರಾ ಹಾಗೂ ಲೈಟಿಂಗ್ ಬಳಸಿ ಚಿತ್ರೀಕರಣ ಮಾಡಿದ್ದರು. ಇದನ್ನು ವಿರೋಧಿಸಿ ವಕೀಲ ಅಮೃತೇಶ್ ಕೋರ್ಟ್​ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆ ಮೇರೆಗೆ ಇಂದು ಎಫ್ಐಆರ್ ದಾಖಲಾಗಿದೆ.

ಚಿತ್ರವನ್ನು ಮಾಣಿಕ್ಯ ಪ್ರೊಡಕ್ಷನ್​ನಿಂದ ನಿರ್ಮಾಣ ಮಾಡಲಾಗಿತ್ತು. ನಿರ್ದೇಶಕ ಸುಧೀರ್ ಶಾನುಭೋಗ ಹಾಗೂ ಭಾಗ್ಯಲಕ್ಷ್ಮಿ ಕೆಂಪೇಗೌಡ ಎಂಬುವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *