Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಮಿಷನ್​ 365+ ಉದ್ಘಾಟನೆಗೆ ಬಂದ ಅನಂತ​ಕುಮಾರ್​ ಹೆಗಡೆಗೆ ಇರುಸುಮುರುಸು: ಅಸಲಿಗೆ ಆಗಿದ್ದೇನು?

Sunday, 22.07.2018, 6:52 PM       No Comments

ದಾವಣಗೆರೆ: ತಮ್ಮ ಹರಿತ ಮಾತುಗಳ ಮೂಲಕ ಸದಾ ಒಂದಿಲ್ಲೊಂದು ವಿವಾದಗಳಿಗೆ ಸಿಲುಕುವ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆಗೆ ಇಂದು ದಾವಣಗೆರೆಯಲ್ಲಿ ತೀವ್ರ ಇರುಸುಮುರು ಉಂಟಾಗಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ತಯಾರಾಗಲೆಂದು ದಾವಣಗೆರೆಯ ಎಸ್​ಎಸ್​ ಕಲ್ಯಾಣ ಮಂಪಟದಲ್ಲಿ “ನಮೋ ಭಾರತ ಮಿಷನ್​ 365+” ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಉದ್ಘಾಟನೆಗೆಂದು ಆಗಮಿಸಿದ ಅನಂತಕುಮಾರ್​ ಅವರನ್ನು ಸಮಾರಂಭದಲ್ಲಿ ಮೊದಲಿಗೆ ಸ್ವಾಗತಿಸಿದ್ದು ಖಾಲಿ ಖಾಲಿ ಕುರ್ಚಿಗಳು. ಸಭಾಂಗಣದಲ್ಲಿ ಸರಿಸುಮಾರು 1000 ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ, ಇದರ ಅರ್ಧಭಾಗವೂ ಜನ ಸೇರಿರಲಿಲ್ಲ. ಕಾರ್ಯಕರ್ತರಿಲ್ಲದೆ ಸಭಾಂಗಣ ಬಣಗುಡುತ್ತಿತ್ತು. ಇದರಿಂದ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ ತೀವ್ರ ಮುಜುಗರಕ್ಕೆ ಒಳಗಾದರು.

ಇದಕ್ಕೂ ಮೊದಲು ಅನಂತಕುಮಾರ್​ ಹೆಗಡೆ ಅವರು ದಾವಣಗೆರೆ ಪ್ರವೇಶಿಸುತ್ತಲೇ ಅವರಿಗೆ ಪ್ರತಿಭಟನೆಯ ಕಾವು ತಟ್ಟಿತು. ದಲಿತ ಸಂಘರ್ಷ ಸಮಿತಿಯ ಸಂಘಟನೆಯ ಸುಮಾರು 20 ಕಾರ್ಯಕರ್ತರು “ಸಂವಿಧಾನ ವಿರೋಧಿ ಅನಂತಕುಮಾರ್​ ಹೆಗಡೆ” ಎಂದು ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಸರ್ಕೀಟ್​ ಹೌಸ್​ ಬಳಿ ಡಿಎಸ್​ಎಸ್​ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಈ ಎರಡೂ ಘಟನೆಗಳಿಂದಾಗಿ ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆ ಅವರು ತೀವ್ರ ಇರುಸುಮುರುಸು ಅನುಭವಿಸಬೇಕಾಯಿತು.

 

Leave a Reply

Your email address will not be published. Required fields are marked *

Back To Top