ಮದುವೆಯಾದ ಹುಡುಗಿ ತವರಿಗೆ ಹಬ್ಬ ಇದ್ದಾಗ ಬರುತ್ತಾರೆ, ಎಂಪಿ ಎಂದರೂ ಅಷ್ಟೆ, ಸಾಮಾಜಿಕ ಜಾಲತಾಣದಲ್ಲಿ ಅನಂತ್‌ಕುಮಾರ್‌ ಹೆಗಡೆ ವಿರುದ್ಧ ಅಸಮಾಧಾನ

ಬೆಳಗಾವಿ: ಉತ್ತರಕನ್ನಡದ ನೂತನ ಸಂಸದ ಅನಂತಕುಮಾರ್ ಹೆಗಡೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆದ್ದಿದ್ದು, ಲೀಡ್ ಕೊಟ್ಟರೂ ಹೆಗಡೆ ಕ್ಷೇತ್ರದ ಕಡೆ ತಿರುಗಿ ನೋಡುವುದಿಲ್ಲ ಎಂದು ಕೆಲವರು ಆರೋಪ ಮಾಡಿ, ಸಾಮಾಜಿಕ ಜಾಲತಾಣದ ಗ್ರೂಪ್​ನಲ್ಲಿ ಮದುವೆಯಾದ ಹುಡುಗಿಗೆ ಹೋಲಿಸಿದ್ದಾರೆ.

ಬಿಜೆಪಿ ಸೋಶಿಯಲ್ ಮೀಡಿಯಾ ಗ್ರೂಪ್​ನಲ್ಲಿ ಸಂಸದರ ವಿರುದ್ಧ ಅಸಮಾಧಾನ ಬಹಿರಂಗ ಗೊಂಡಿದ್ದು, ಖಾನಾಪುರ ಗ್ರೂಪ್‌ ಒಂದರಲ್ಲಿ ಈ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಅನಂತಕುಮಾರ ಹೆಗಡೆಗೆ ಅತಿ ‌ಹೆಚ್ಚು ಲೀಡ್ ಕೊಟ್ಟಿರುವುದು ಖಾನಾಪುರ ಕ್ಷೇತ್ರ. ಲೀಡ್ ಕೊಟ್ಟರೂ ಹೆಗಡೆ ಕ್ಷೇತ್ರದ ಕಡೆ ನೋಡುವುದಿಲ್ಲ. “ಹುಡುಗಿಯನ್ನು ಮದುವೆ ಮಾಡಿ ಕೊಟ್ಟರೆ ಮುಗಿಯಿತು, ತವರು ಮನೆಗೆ ಹಬ್ಬ ಇದ್ದ ವೇಳೆ ಮಾತ್ರ ಬರುತ್ತಾರೆ. ಎಂಪಿ ಎಂದರೂ ಅಷ್ಟೇ” ಎಂದು ಟೀಕೆ ಮಾಡಿದ್ದಾರೆ.

ಈ ಬಾರಿಯಾದರೂ ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದಿರುವ ಸಂದೇಶಗಳು, ಬಿಜೆಪಿ ಕಾರ್ಯಕರ್ತರೇ ಇರುವಂತಹ ವಾಟ್ಸಾಪ್​ ಗ್ರೂಪ್​ನಲ್ಲಿ ಚರ್ಚೆಗೆ ಒಳಪಟ್ಟಿವೆ ಎಂದು ಹೇಳಲಾಗಿದೆ. ಈ ಹಿಂದೆಯೂ ಹೆಗಡೆ ಖಾನಾಪುರ ಕ್ಷೇತ್ರದತ್ತ ತಿರುಗಿಯೂ ನೋಡಿಲ್ಲ‌. ಈ ಭಾರಿಯಾದರೂ ನೋಡಲಿ ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *