Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಎಚ್​ಡಿಕೆ ಅಪ್ರಬುದ್ಧ ಮುಖ್ಯಮಂತ್ರಿ: ಅನಂತ್​ಕುಮಾರ್​ ಹೆಗಡೆ ಟ್ವೀಟ್​

Thursday, 14.06.2018, 4:24 PM       No Comments

ಬೆಂಗಳೂರು: ಪ್ರಧಾನಿ ಮೋದಿ ಅವರು ನೀಡಿದ್ದ ಫಿಟ್ನೆಸ್​ ಚಾಲೆಂಜ್​ ಅನ್ನು ನಿರಾಕರಿಸಿ ರಾಜ್ಯದ ಫಿಟ್​ನೆಸ್​ ಮುಖ್ಯ ಎಂದು ಹೇಳಿದ್ದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತ್​ಕುಮಾರ್​ ಹೆಗಡೆ ಟ್ವಿಟರ್​ನಲ್ಲಿ ಅಪ್ರಬುದ್ಧ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ.

ರಾಜ್ಯದ ಫಿಟ್ನೆಸ್​ ಬಗ್ಗೆ ಕಾಳಜಿ ವಹಿಸುವ ಮುಖ್ಯಮಂತ್ರಿಗಳು, ಬೆಂಗಳೂರಿಗರಿಗೆ ಗುಂಡಿ ಭಾಗ್ಯ ನೀಡಿದ ಈ ಹಿಂದಿನ ಸರ್ಕಾರದ ನಿಮ್ಮ ಮಿತ್ರ ಸಿದ್ದರಾಯ್ಯ ಅವರ ವಿರುದ್ಧ ತನಿಖೆ ನಡೆಸುವ ಸಾಹಸಕ್ಕೆ ಕೈ ಹಾಕುವಿರೇ ಎಂದು ಮಲ್ಲೇಶ್ವರಂ ಶಾಸಕ ಅಶ್ವತ್​ ಅವರು ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯೆ ರೂಪದಲ್ಲಿ ಅನಂತ್​ ಕುಮಾರ್​ ಹೆಗಡೆ ಅವರು ಟ್ವೀಟ್​ ಮಾಡಿದ್ದಾರೆ.

ಅದರಲ್ಲಿ “ಅಧಿಕಾರ ಸಿಗದ್ದಿದ್ದರೆ ನನಗೆ ಜಾಸ್ತಿ ಆಯುಷ್ಯವಿಲ್ಲ, ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡ ಅಪ್ರಬುದ್ಧ ಮುಖ್ಯಮಂತ್ರಿಗೆ fitness ಸವಾಲ್ ಚಾಲೆಂಜ್ ಅನ್ನು ಪ್ರಧಾನಿಯವರು ಸೂಕ್ತವಾಗಿಯೇ ನೀಡಿದ್ದಾರೆ. ದೇಹ ಹಾಗೂ ಮಾನಸಿಕ fitness ಇಲ್ಲದವರು ರಾಜ್ಯದ ಕಾಳಜಿ ಬಗ್ಗೆ ಮಾತನಾಡುತ್ತಿರುವುದು ಶುದ್ಧ ಹಾಸ್ಯಾಸ್ಪದ!,” ಎಂದು ಟ್ವೀಟ್​ ಸಂದೇಶ ಹಂಚಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

Back To Top