ಟಿವಿ, ಪತ್ರಿಕೆಯನ್ನು ಓದುವವರು ತಲೆ ಸರಿ ಇಲ್ಲದವರು: ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ

ಅಂಕೋಲಾ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕೇಂದ್ರ ಸಚಿವ ಅಂನತಕುಮಾರ್​ ಹೆಗಡೆ ಅವರು ಈ ಬಾರಿ ಮಾಧ್ಯಮಗಳನ್ನು ಟೀಕಿಸಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ.

ಅಂಕೋಲಾದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಟಿವಿ ಮತ್ತು ಪತ್ರಿಕೆಯನ್ನು ಓದುವವರು ತಲೆ ಸರಿ ಇಲ್ಲದವರು. ರಕ್ತದೊತ್ತಡ ಹಾಗೂ ರಕ್ತದಲ್ಲಿ ಶುಗರ್ ಮಟ್ಟ ​ಸರಿ ಇರಬೇಕೆಂದರೆ ಪತ್ರಿಕೆ ಓದಬಾರದು ಹಾಗೂ ಟಿವಿಯನ್ನು ನೋಡಬಾರದು. ಸುಮಾರು ಹತ್ತು ವರ್ಷಗಳಿಂದ ಈ ಎರಡು ಕೆಲಸವನ್ನು ನಾನು ಮಾಡುತ್ತಿಲ್ಲ. ಹೀಗಾಗಿ ನನ್ನ ತಲೆ ಸರಿಯಾಗಿದೆ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪತ್ರಿಕೆ ಹಾಗೂ ಟಿವಿಯವರು ನಮ್ಮ ಪರವಾಗಿ ಬರೆಯುವುದಿಲ್ಲ. ಅವರು ಬೇಕಾದುದ್ದನ್ನು ಬರೆದುಕೊಳ್ಳುತ್ತಾರೆ. ನೀವು ತಲೆಕೆಡಿಸಿಕೊಳ್ಳಬೇಡಿ. ತಲೆಕೆಡಿಸಿಕೊಂಡರೆ ನಿಮ್ಮ ಆರೋಗ್ಯ ಕೆಡುತ್ತದೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)