ಬಿಜೆಪಿಯರು ಹತಾಶೆಯಿಂದ ಹೀಗೆ ಮಾಡ್ತಿದ್ದಾರೆ: ಡಿ.ಕೆ. ಶಿವಕುಮಾರ್​

<< ಡಿ.ಕೆ. ಶಿವಕುಮಾರ್​ರನ್ನು ಭೇಟಿ ಮಾಡಿದ ಶಾಸಕ ಆನಂದ್​ ಸಿಂಗ್​ >>

ಬೆಂಗಳೂರು: ಮೈತ್ರಿ ಸರ್ಕಾರ ಉರುಳಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಹೊಸಪೇಟೆ ಶಾಸಕ ಆನಂದ್​ ಸಿಂಗ್​ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಗರದ ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಮಂಗಳವಾರ ಬೆಳಗ್ಗೆ ಆಗಮಿಸಿದ ಆನಂದ್​ ಸಿಂಗ್​ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್​ ಬಿಜೆಪಿಯವರು ಹತಾಶೆಯಿಂದ ಹೀಗೆ ಮಾಡುತ್ತಿದ್ದಾರೆ. ಅವರು ಆಸೆ ಪಡುವುದು ಸಹಜ. ರಾಜಕಾರಣದಲ್ಲಿ ಎರಡು ತರಹದ ಆಟ ಇರುತ್ತದೆ. ನಾನು ಈಗ ಎಲ್ಲವನ್ನೂ ಬಿಡಿಸಿ ಹೇಳುವುದಿಲ್ಲ. ಅವರು ಶಾಸಕರ ಭವಿಷ್ಯವನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಬಿಜೆಪಿಯವರು ತಮ್ಮ ಶಾಸಕರನ್ನು ಕೂಡಿಹಾಕಿಕೊಳ್ಳಲಿ. ನಾವು ನಮ್ಮ ಶಾಸಕರನ್ನು ಕೂಡಿ ಹಾಕಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿ ತಿಳಿದು ವೇಣುಗೋಪಾಲ್​ ರಾಜ್ಯಕ್ಕೆ ಬಂದಿದ್ದಾರೆ. ಕಾಂಗ್ರೆಸ್​ನ ಶಾಸಕರನ್ನು ಬಿಜೆಪಿ ನಾಯಕರು ಎಲ್ಲೇ ಕೂಡಿಹಾಕಿರಲಿ. ಅವರನ್ನು ಕರೆದುಕೊಂಡುಬರುವ ಶಕ್ತಿ ನಮಗಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ್​ ಸಿಂಗ್​ ನಾನು ಕಾಂಗ್ರೆಸ್​ ಪಕ್ಷದಿಂದ ಗೆದ್ದಿದ್ದೇನೆ. ನಾನು ಈ ಪಕ್ಷದಲ್ಲೇ ಇರುತ್ತೇನೆ. ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *