More

    ರೈತರಿಗೆ ಬೇಕು ಶಾಶ್ವತ ಯೋಜನೆ ಚಾಕೋಲೇಟ್ ಅಲ್ಲ: ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್

    ಮಧುಗಿರಿ: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ತುಮಕೂರಿನ ರೈತ ಸಮ್ಮಾನ್ ಸಮಾರಂಭಕ್ಕೆ ತೆರಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದ ರೈತ ಮುಖಂಡರನ್ನು ಕುಣಿಗಲ್ ಟೋಲ್ ಬಳಿ ಬಂಧಿಸಲಾಗಿತ್ತು. ಹೀಗಾಗಿ ರೈತರನ್ನು ಗೃಹ ಬಂಧನದಲ್ಲಿ ಇರಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ರೈತ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಪ್ರಧಾನಿ ಮೋದಿ ಅವರು ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರಿಗೆ ಶಾಶ್ವತ ಯೋಜನೆಗಳನ್ನು ನೀಡುವ ಬದಲು ಚಾಕೋಲೇಟ್‌ನಂತಹ ತಾತ್ಕಾಲಿಕ ಯೋಜನೆ ನೀಡಲು ಮುಂದಾಗಿದ್ದಾರೆ. ಇದರಿಂದ ರೈತರ ಕಲ್ಯಾಣ ಸಾಧ್ಯವಿಲ್ಲ ಎಂದು ರೈತ ಸಂದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಕಿಡಿಕಾರಿದರು.

    ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದ್ದು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿ ವಾಡುವುದಾಗಿ ನೀಡಿದ್ದ ಭರವಸೆ ಮರೆತು ರೈತರ ಹಿತವನ್ನು ಕಡೆಗಣಿಸಿ, ರೈತರ ಸವಾವೇಶ ವಾಡಲು ಹೊರಟಿದೆ ಎಂದು ಕುಟುಕಿದರು. ರಾಜ್ಯದಲ್ಲಿ ಬರವಿದ್ದು ನೆರೆ ಸಂತ್ರಸ್ತ ರೈತರು ಬೀದಿಗೆ ಬಿದ್ದರೂ ಕ್ಯಾರೆ ಅಂದಿಲ್ಲ. ಕಲ್ಪತರು ನಾಡಿನ ಕೊಬ್ಬರಿ ರೈತರಿಗೆ ನಷ್ಟವಾಗುತ್ತಿದ್ದರೂ ಗಮನ ಹರಿಸುತ್ತಿಲ್ಲ. ಕೈಗಾರಿಕೆಗೆ ವಿನಾಯಿತಿ ನೀಡುವ ನೀವು ರೈತರ ಸಂಪೂರ್ಣ ಸಾಲಮನ್ನಾ ವಾಡಲು ಆಗುತ್ತಿಲ್ಲ. ಈವೆಲ್ಲ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಹೋದರೆ ಹಸಿರು ಶಾಲು ತೊಟ್ಟ ಎಲ್ಲರ ಮೇಲೂ ಪೊಲೀಸರು ಹಲ್ಲೆ ವಾಡಿ ಬಂಧಿಸಿ ಪಟ್ಟಣದ ಶಾದಿಮಹಲ್‌ನಲ್ಲಿ ಗೃಹ ಬಂಧನದಲ್ಲಿರಿಸಿರುವುದು ಯಾವ ನ್ಯಾಯ ಎಂದು ಟೀಕಿಸಿದರು.

    ಕೇವಲ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿರುವ ಮೋದಿಗೆ, ರೈತರ ಕಷ್ಟ ಕಾಣುತ್ತಿಲ್ಲ. ರೈತರು ಬೀದಿಗೆ ಬಿದ್ದಿದ್ದು, ಡಿಜಿಪಿ ಪಾತಾಳಕ್ಕೆ ಕುಸಿದಿದೆ. ಸಾವಿರಾರು ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಇಂತಹ ಸಮಯದಲ್ಲೂ ಪ್ರಧಾನಿಯವರು ಡಿಜಿಟಲ್ ಇಂಡಿಯಾ ಬಗ್ಗೆ ವಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ರಾಜ್ಯ ರೈತ ಸಂದ ಪ್ರಧಾನ ಕಾರ್ಯದರ್ಶಿ ಬೈರೇಗೌಡ, ಕುಣಿಗಲ್ ತಾಲೂಕು ಸಂಘದ ಅಧ್ಯಕ್ಷ ಅನಿಲ್ ಕುವಾರ್, ಧಾರವಾಡ ಜಿಲ್ಲಾಧ್ಯಕ್ಷ ದಳ್ಳಪ್ಪ, ಹಾಸನ ಜಿಲ್ಲಾಧ್ಯಕ್ಷೆ ಗೌರಮ್ಮ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ, ಹಾವೇರಿಯ ತಾಲೂಕು ಕಾರ್ಯದರ್ಶಿ ಕರಿಗಾಳ್ ಗೋಣಪ್ಪ, ರೈತ ಮುಖಂಡರಾದ ಪ್ರಕಾಶ್, ಗೌರೀಶ್, ಬಾಬು, ಸಿದ್ಧರಾಜು, ಲಕ್ಷ್ಮಣ್ ಸ್ವಾಮಿ, ಉವಾ ಮತ್ತಿತರರು ಇದ್ದರು.

    ಹುಳಿಯಾರಿನಲ್ಲಿ ರೈತರ ಬಂಧನ

    ಹುಳಿಯಾರು: ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ನೀಡದ ಕಾರಣ ರೈತ ಸಮ್ಮಾನ್ ಕಾರ್ಯಕ್ರಮದಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲು ತುಮಕೂರಿಗೆ ತೆರಳುತ್ತಿದ್ದ ರೈತರನ್ನು ಗುರುವಾರ ಪೊಲೀಸರು ಪಟ್ಟಣದ ಪ್ರವಾಸಿ ಮಂದಿರದ ಬಳಿ ವಶಕ್ಕೆ ಪಡೆದರು.

    ಮೋದಿ ಜತೆ ಚರ್ಚಿಸಲು ಸಮಯಾವಕಾಶ ಕೋರಿ ರಾಜ್ಯ ರೈತಸಂ ಹಾಗೂ ಹಸೀರು ಸೇನೆ ಉಪಾಧ್ಯಕ್ಷ ಕೆಂಕೆರೆ ಸತೀಶ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಅವಕಾಶ ನೀಡದಿದ್ದರಿಂದ ತುಮಕೂರಿಗೆ ತೆರಳಲು ಮುಂದಾಗಿದ್ದ ರೈತರನ್ನು ಪೊಲೀಸರು ಬಂಧಿಸಿ ಕಾರ್ಯಕ್ರಮ ಮುಗಿದ ನಂತರ ಬಿಡುಗಡೆ ಮಾಡಲಾಗಿದೆ. ಊರುಗಳಲ್ಲಿ ಬಸ್ ನಿಲ್ಲಿಸಿಕೊಂಡು ಜನರನ್ನು ಬಿಜೆಪಿಯವರು ಒತ್ತಾಯಪೂರ್ವಕವಾಗಿ ಪ್ರಧಾನಿ ಕಾರ್ಯಕ್ರಮಕ್ಕೆ ಕರೆತಂದಿದ್ದಾರೆ. ಇದು ರೈತರ ಸಭೆಯಾಗಿರಲಿಲ್ಲ. ಬಿಜೆಪಿ ಕಾರ್ಯಕರ್ತ ಸಭೆ ಅನ್ನುವಂತಿತ್ತು. ನಮ್ಮ ಹೋರಾಟವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರ ಗಮನಕ್ಕೆ ತರಬಹುದಿತ್ತು. ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದಾರೆ ಎಂದು ಕೆಂಕೆರೆ ಸತೀಶ್ ಬೇಸರಿಸಿದರು.

    ರೈತ ಸಂದ ಪದಾಧಿಕಾರಿಗಳಾದ ಚಂದ್ರಣ್ಣ ಹೊಸಳ್ಳಿ, ಲೋಕಣ್ಣ, ಮಲ್ಲಿಕ್, ಮಲ್ಲಿಕಾರ್ಜುನಯ್ಯ. ಶಿವಣ್ಣ, ಪಾತ್ರೆ ಸತೀಶ್, ಚನ್ನಬಸವಯ್ಯ, ಜಯಣ್ಣ. ಕಾಡಿನ ರಾಜ ನಾಗಣ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts