ನ್ಯಾಮಗೌಡರಿಗೆ ಸಚಿವ ಸ್ಥಾನ ನೀಡಿ

ಸಾವಳಗಿ: ದಿ.ಸಿದ್ದು ನ್ಯಾಮಗೌಡ ಅವರ ಕನಸು ನನಸಾಬೇಕಾದರೆ ಅವರ ಪುತ್ರ ಶಾಸಕ ಆನಂದ ನ್ಯಾಮಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಸುಭಾಷ ಪಾಟೋಳಿ ಆಗ್ರಹಿಸಿದರು.

ದಿ.ಸಿದ್ದು ನ್ಯಾಮಗೌಡ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಆನಂದ ನ್ಯಾಮಗೌಡರನ್ನು ಗೆಲ್ಲಿಸಿದರೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ. ಜಮಖಂಡಿ ಕ್ಷೇತ್ರದ ಜನತೆ ಆನಂದ ನ್ಯಾಮಗೌಡರನ್ನು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಮುಖಂಡರು ಕೊಟ್ಟ ಭರವಸೆ ಈಡೇರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಮುಖಂಡ ಆದಿನಾಥ ಸಕಾಳೆ ಮಾತನಾಡಿ, ಜಿಲ್ಲೆಯ 5 ಕ್ಷೇತ್ರದಲ್ಲಿ ಬಿಜೆಪಿ ಆಯ್ಕೆಯಾಗಿದೆ. ಬಿಜೆಪಿ ವಿರುದ್ಧ ಹೋರಾಟ ಮಾಡಿ ಮತ್ತೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಬೇಕಾದರೆ ನ್ಯಾಮಗೌಡರ ಅವಶ್ಯಕತೆ ತುಂಬ ಮುಖ್ಯ. ಆನಂದ ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂದರು. ಸಂಜೀವ ಪಾಟೋಳಿ, ದುಂಡಪ್ಪ ಸಾವಳಗಿ, ಕಲ್ಲಪ್ಪ ಕೇಸ್ಕರ, ವಿಠ್ಠಲ ಉಮರಾಣಿ, ಪಿಂಟು ಸೂರ್ಯವಂಶಿ ಇತರರಿದ್ದರು.