ನಾನು ಬ್ರೇನ್​​​​​ ಟ್ಯೂಮರ್​ನಿಂದ ಬಳಲುತ್ತಿದ್ದೇನೆ ಎಂದ ಖ್ಯಾತ ಗಣಿತಶಾಸ್ತ್ರಜ್ಞ ಆನಂದ್​​ ಕುಮಾರ್​

ನವದೆಹಲಿ: ಪಟನಾ ಮೂಲದ ಖ್ಯಾತ ಗಣಿತಶಾಸ್ತ್ರಜ್ಞ ಆನಂದ್​​ ಕುಮಾರ್​ ಜೀವನಾಧರಿತ, ಹೃತಿಕ್​​​ ರೋಷನ್​​​ ಅಭಿನಯದ ಸಿನಿಮಾ ಸೂಪರ್​​​​​​ 30 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

ಸದ್ಯ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಆಘಾತಕಾರಿ ವಿಷಯವೊಂದು ಹೊರಬಿಟ್ಟಿದ್ದಾರೆ. ಅವರು ಬ್ರೇನ್ ಟ್ಯೂಮರ್​​ನಿಂದ ಬಳಲುತ್ತಿದ್ದು ಆದಷ್ಟು ಬೇಗ ತಮ್ಮ ಬಯೋಪಿಕ್​ ಅನ್ನು ತೆರೆಯ ಮೇಲೆ ವೀಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಆನಂದ್​​ 2014 ರಲ್ಲಿ ನನ್ನ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಆಗ ನನ್ನ ಬಲ ಕಿವಿ ಕೇಳುತ್ತಿರಲಿಲ್ಲ. ಕಿವಿಯ ಸ್ಥಿತಿ ಸರಿಹೋಗಲು ಸಾಕಷ್ಟು ಬಾರಿ ಚಿಕಿತ್ಸೆಗೆ ಒಳಗಾದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ನನಗೆ ಬ್ರೈನ್​​​​​ ಟ್ಯೂಮರ್​ ಇರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅದಕ್ಕಾಗಿಯೇ ನನ್ನ ಬಯೋಪಿಕ್​​​​ ಸಿನಿಮಾವನ್ನು ಸಾಯುವ ಮುನ್ನ ನೋಡುವ ಆಸೆಯಾಗಿದೆ. ನನ್ನ ಬಯೋಪಿಕ್​ಗೆ ಹೃತಿಕ್ ರೋಷನ್ ಒಬ್ಬರೇ ನ್ಯಾಯ ಒದಗಿಸಲು ಸಾಧ್ಯ. ನಾನು ಬದುಕಿರುವವರೆಗೆ ನನ್ನ ಜೀವನದ ಆಗುಹೋಗುಗಳು ಸರಿಯಾದ ರೀತಿಯಲ್ಲಿ ತೆರೆ ಮೇಲೆ ಮೂಡಿಬರಬೇಕು. ಹಾಗಾಗಿ 13 ಬಾರಿ ಸಿನಿಮಾ ಕಥೆಯನ್ನು ಓದಿದ್ದೇನೆ ಎಂದು ಆನಂದ್​​ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *