ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭವಿಸಬೇಡಿ: ಅಸ್ನೋಟಿಕರ್​ ಹೀಗೆ ಹೇಳಿದ್ದೇಕೆ?

ಕಾರವಾರ: ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭಿವಿಸುವುದು ಬೇಡ. ಯಾರೂ ಆಪರೇಷನ್​ ಕಮಲಕ್ಕೆ ಒಳಗಾಗಬೇಡಿ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್​ ಮನವಿ ಮಾಡಿದ್ದಾರೆ.

ಮಾಧ್ಯಮಗಳ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದ ಅಸ್ನೋಟಿಕರ್​ ಕಾಂಗ್ರೆಸ್​ನ ಅತೃಪ್ತ ಶಾಸಕರು ಯಾರೂ ಆಪರೇಷನ್​ ಕಮಲಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು.

ಜತೆಗೆ ನಿಮಗೆ ಅಸಮಾಧಾನವಿದ್ದರೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬಳಿ ಹೇಳಿಕೊಳ್ಳಿ. ಬಿಜೆಪಿಗೆ ಮಾತ್ರ ಹೋಗಬೇಡಿ. ಕಾಂಗ್ರೆಸ್​ ಬಿಟ್ಟು ಬೇಕಾದರೆ ಜೆಡಿಎಸ್​ಗೆ ಬನ್ನಿ ಎಂದು ಅಸ್ನೋಟಿಕರ್​ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)