
ಮಂಗಳೂರು: ಕಾವ್ಯ ಮತ್ತು ಜೀವನ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ವಿಚಾರ ಮತ್ತು ವಾಸ್ತವ ಯಾವತ್ತೂ ಭಿನ್ನವಾಗಿರುತ್ತವೆ. ಈ ಭಿನ್ನತೆಯನ್ನು ಅರಿಯಲು ಕಾವ್ಯ ಸಹಕಾರಿ. ಆದುದರಿಂದ ಕಾವ್ಯವನ್ನು ಒಂದು ಶೋಧವೆಂದು ಪರಿಗಣಿಸಬಹುದು ಎಂದು ಕೊಂಕಣಿ ಕವಿ ನೂತನ್ ಸಾಖರ್‌ದಾಂಡೆ ಅಭಿಪ್ರಾಯಪಟ್ಟರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೆಜಿನಲ್ಲಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ಕವಿಸಂಧಿ ಕಾರ್ಯಕ್ರಮದಲ್ಲಿ ಸ್ವರಚಿತ ಕವಿತೆಗಳನ್ನು ವಾಚಿಸಿ, ತಮ್ಮ ಕಾವ್ಯಪ್ರವಾಸವನ್ನು ಹಂಚಿಕೊಂಡರು.
ಜನಪ್ರಿಯ ಕವಿತೆಗಳಾದ – ಪಾಸ್‌ವರ್ಡ್, ಸ್ಮಾರ್ಟ್‌ಪೋನ್, ಅಧೊಳಿ ಒಳಗೊಂಡಂತೆ ಒಟ್ಟು ಏಳು ಕವಿತೆಗಳನ್ನು ಸಾದರಪಡಿಸಿದರು.
ನವದೆಹಲಿ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಸಮಿತಿ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಸಮಿತಿ ಸದಸ್ಯ ಹೆನ್ರಿ ಮೆಂಡೋನ್ಸಾ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸದಸ್ಯ ಸ್ಟ್ಯಾನಿ ಬೇಳ ವಂದಿಸಿದರು.
—-
ಅಸ್ವಸ್ಥತೆ ಕಾಡದೇ ಕವಿಯಾಗುವುದು ಕಷ್ಟ. ಕವಿಗಳು ರಮ್ಯಲೋಕದ ಆಚೆ, ಸಾಮಾಜಿಕ ಅಸಮಾನತೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪರಿಸರದ ಮೇಲಾಗುತ್ತಿರುವ ಹಾನಿ ಮುಂತಾದ ವಿಚಾರಗಳ ಮೇಲೆ ಕಾವ್ಯ ಕಟ್ಟಬೇಕು. ಕಾವ್ಯದ ತೌಲನಿಕ ಅಧ್ಯಯನ ನಡೆಯಬೇಕು.
ನೂತನ್ ಸಾಖರ್‌ದಾಂಡೆ ಕೊಂಕಣಿ ಕವಿ