ಅಪರಿಚಿತವ್ಯಕ್ತಿ ಸಾವುವಿಜಯವಾಣಿ ಸುದ್ದಿಜಾಲ ಪಿರಿಯಾಪಟ್ಟಣ
ಪಟ್ಟಣದ ಬಸ್ ನಿಲ್ದಾಣದ ಬಳಿ ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಗುರುವಾರ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾನೆ.
3 ದಿನದ ಹಿಂದೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ಪಟ್ಟಣದ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಗುರುವಾರ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ.
ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿಯ ಚಹರೆ: ಅಂದಾಜು 40 ವರ್ಷ, ಎದೆಯ ಬಲಭಾಗದಲ್ಲಿ ಮಂಜ, ದರ್ಶನ್ ಎಂದು, ಎಡಭಾಗದಲ್ಲಿ ದುನಿಯಾ ವಿಜಯ್ ಎಂದು ಹಸಿರು ಹಚ್ಚೆ ಇದೆ.

Leave a Reply

Your email address will not be published. Required fields are marked *