ಸಿದ್ದಾಪುರ: ಶಿರಸಿ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಮಾನಿ ಹೊಳೆ (ಅಘನಾಶಿನಿ) ತುಂಬಿ ಹರಿಯುತ್ತಿದೆ. ತಾಲೂಕಿನ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ಪೂರೈಕೆಗೆ ಸಮಸ್ಯೆ ಉಂಟಾಗಿದೆ. ದುರಸ್ತಿಗಾಗಿ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ-ಗಾಳಿ ಜೋರಾಗಿರುವುದರಿಂದ ಹಲವೆಡೆ ಎಚ್‌ಟಿ ಹಾಗೂ ಎಲ್‌ಟಿ ಲೈನ್ ಮೇಲೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದಿರುವುದರಿಂದ ಹಾಗೂ ಗಾಳಿಯಿಂದಾಗಿ ಹಲವೆಡೆ ಒಂದಕೊಂದು ವಿದ್ಯುತ್ತ ತಂತಿ ತಾಗಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಹಾರ್ಸಿಕಟ್ಟಾ ಸಮೀಪದ ಹಾರ್ಸಿಮನೆಯ ವಿಶ್ವೇಶ್ವರ ರಾಮಚಂದ್ರ ಹೆಗಡೆ ಅವರ ಅಡಕೆ ತೋಟದ ಮೇಲೆ ಕಾಡು ಜಾತಿಯ ಮರವೊಂದು ಬಿದ್ದು ಅಡಕೆ ಮರ, ಅಡಕೆ ಸಸಿಗಳಿಗೆ ಹಾನಿ ಆಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.