ಅಂತ್ಯದ ಸಮಯ ಕಳೆಯಲು ವೃದ್ಧಾಶ್ರಮ ಸಹಕಾರಿ

blank

ಹಿರೇಕೆರೂರ: ಪ್ರತಿ ತಾಲೂಕಿನಲ್ಲಿ ವೃದ್ಧಾಶ್ರಮ ಸ್ಥಾಪನೆಯಾಗುವ ಮೂಲಕ ನೊಂದ ಹಿರಿಯ ಜೀವಿಗಳಿಗೆ ಅಂತ್ಯದ ಸಮಯ ಕಳೆಯಲು ಸಹಾಯವಾಗುತ್ತದೆ ಎಂದು ಸೊರಬ ತಾಲೂಕಿನ ಶಿಗ್ಗಾ ಗ್ರಾಮದ ಮೂರುಜವಧೀಶ್ವರ ಮಠದ ಗುರು ಪಣಿಭೂಷಣ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಘವೇಂದ್ರ ವೃದ್ಧಾಶ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  ಕೆಲವು ಮಕ್ಕಳು ಇಂದು ತಮ್ಮ ತಂದೆ-ತಾಯಂದಿರನ್ನು, ಗುರು ಹಿರಿಯರನ್ನು ತಮ್ಮ ಬಳಿ ಇಟ್ಟುಕೊಳ್ಳುವ ಕಾಲ ದೂರವಾಗುತ್ತಾ ಸಾಗುತ್ತಿದ್ದು, ಇದು ಹೀಗೆ ಮುಂದುವರಿದರೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಯುತ ಜೀವನಕ್ಕೆ ಬಹುದೊಡ್ಡ ಕೊಡಲಿ ಪೆಟ್ಟು ಬೀಳಲಿದೆ. ಇದರಿಂದ ಗಂಡಾಂತರ ತಪ್ಪಿದ್ದಲ್ಲ. ಜಗತ್ತಿಗೆ ಮಾದರಿಯಾದ ನಮ್ಮ ಭಾರತದಲ್ಲಿ ಇಂದು ಅನಾಚಾರ, ತಂದೆ, ತಾಯಂದಿರಿಗೆ, ಗುರು ಹಿರಿಯರ ಮೇಲೆ ಶ್ರದ್ಧೆ, ಪ್ರೀತಿ ಹಾಗೂ ಗೌರವ ಕೊಡುವುದು ಕಡಿಮೆಯಾಗುತ್ತಾ ಸಾಗಿದ್ದು, ಯುವ ಪೀಳಿಗೆಗೆ ಇದು ಮಾರಕವಾಗಲಿದೆ. ವೃದ್ಧಾಶ್ರಮ ಸ್ಥಾಪನೆಯಿಂದ ನೊಂದ ಹಿರಿಯ ಜೀವಿಗಳಿಗೆ ಅಂತಿಮ ಜೀವನ ಸಾಗಿಸಲು ತುಂಬಾ ಉಪಕಾರಿಯಾಗಲಿದ್ದು, ಇದಕ್ಕೆ ಎಲ್ಲರ ಸಹಾಯ, ಸಹಕಾರ ಅತಿ ಅಗತ್ಯವಿದೆ ಎಂದರು.

ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಸಂಸ್ಥಾಪಕ ಡಾ. ವಿನಾಯಕ ಬಡಿಗೇರ, ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಯ ಅಧ್ಯಕ್ಷ ನಾಗನಗೌಡ ಬೆಳ್ಳುಳ್ಳಿ, ನಿವೃತ್ತ ಐಎಫ್​ಎಸ್ ಅಧಿಕಾರಿ ಮಂಜುನಾಥ್ ತಂಬಾಕದ, ಪಪಂ ಸದಸ್ಯರಾದ ಮಹೇಂದ್ರಣ್ಣ ಬಡಳ್ಳಿ, ಹರೀಶ್ ಕಲಾಲ, ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ, ಪ್ರಕಾಶ್ ನಿಟ್ಟೂರು, ರಾಜಶೇಖರ್ ಬಳ್ಳಾರಿ, ಡಾ.ಬಸವರಾಜ್ ಪೂಜಾರ, ಸಿದ್ದಲಿಂಗೇಶ ತಂಬಾಕದ, ಮಾರುತಿ ಮಧೂರಕರ ಹಾಗೂ ಗಣ್ಯರು ಇದ್ದರು.

 

Share This Article

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…

ಮೊಬೈಲ್​​ ಪಕ್ಕದಲ್ಲಿಟ್ಟು ಮಲಗಿದ್ರೆ ಏನಾಗುತ್ತೆ? ಇಷ್ಟು ದಿನ ಅಂದುಕೊಂಡಿದ್ದೆಲ್ಲ ಸುಳ್ಳಾ? ಇಲ್ಲಿದೆ ಅಸಲಿ ಸಂಗತಿ! Mobile Addiction

Mobile Addiction : ಪ್ರಸ್ತುತ ಜೀವನಶೈಲಿಯಲ್ಲಿ ಮೊಬೈಲ್ ಫೋನ್‌ಗಳು ಹಲವರಿಗೆ ಅವಿಭಾಜ್ಯ ಅಂಗವಾಗಿದೆ. ಕೂತರು, ನಿಂತರು…

ನಿಮ್ಮ ದೇಹದ ಈ ಭಾಗಗಳಿಗೆ ಪರ್ಫ್ಯೂಮ್​ ಹಾಕ್ತಿದ್ರೆ ಇಂದೇ ನಿಲ್ಲಿಸಿ ಇಲ್ಲದಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ! Perfume

Perfume : ಸುಗಂಧ ದ್ರವ್ಯವನ್ನು ( ಪರ್ಫ್ಯೂಮ್​ ) ಸಾಮಾನ್ಯವಾಗಿ ಬಹುತೇಕರು ಬಳಸುತ್ತಾರೆ. ದೇಹವು ಸುವಾಸನೆ…