More

    ಸೂರು ವಂಚಿತರಾದವರಿಂದ ಅನಿರ್ದಿಷ್ಟಾವಧಿ ಧರಣಿ

    ಮೈಸೂರು: ನರ್ಮ್ ಯೋಜನೆಯಡಿ ಮನೆಗಳ ಆಯ್ಕೆ ಪಟ್ಟಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಏಕಲವ್ಯ ನಗರದ ನರ್ಮ್ ಮನೆ ವಂಚಿತ ನೂರಾರು ಜನರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿರುವವರಿಗೆ, ಶ್ರೀಮಂತರಿಗೆ, ಹಣವಂತರಿಗೆ, ರಾಜಕೀಯ ಪ್ರಭಾವ ಉಳ್ಳವರಿಗೆ, ಕೊಳಚೆ ಪ್ರದೇಶದಲ್ಲಿ ವಾಸಿಸದೆ ಇರುವ ಕುಟುಂಬಗಳನ್ನು ನರ್ಮ್ ಮನೆಗಳ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿ ಪಟ್ಟಿ ಅಂತಿಮಗೊಳಿಸಲಾಗಿದೆ. ಆದರೆ, ಏಕಲವ್ಯ ನಗರದ ಗುಡಿಸಲುಗಳಲ್ಲಿ ವಾಸವಿರುವ ನಿರ್ಗತಿಕ ಅಲೆಮಾರಿ ಕುಟುಂಬಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ದೂರಿದರು.

    ಈಗಾಗಲೇ ಸಿದ್ಧಗೊಂಡಿರುವ ಪಟ್ಟಿಯನ್ನು ಕೈಬಿಟ್ಟು ಏಕಲವ್ಯ ನಗರದ ನಿರ್ಗತಿಕ ಅಲೆಮಾರಿ ಕುಟುಂಬ ಸೇರಿದಂತೆ ಎಲ್ಲ ಜಾತಿಯ ಬಡ ಕುಟುಂಬಗಳಿಗೆ ನರ್ಮ್ ಮನೆಗಳನ್ನು ಮಂಜೂರು ಮಾಡಬೇಕು. ಇಲ್ಲವಾದರೆ ಹಾಲಿ ವಾಸ ಮಾಡುತ್ತಿರುವ ನರ್ಮ್ ಮನೆಗಳನ್ನೇ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ವೆಂಕಟೇಶ, ಶ್ರೀಧರ, ಗೋಕಾಕ್ ಮಂಜಪ್ಪ, ರಂಗಮ್ಮ, ಚಂದ್ರ, ಮಹಾದೇವ, ಉದಯ, ಸ್ವಾಮಿ, ಲೋಕೇಶ, ಕುಮಾರ, ಶಶಿ, ಮಾರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts