ವೃದ್ಧ ಮಾವನಿಗೆ ಹಿಗ್ಗಾಮುಗ್ಗಾ ಥಳಿಸಿದ ಸೊಸೆ; ಕೈಮುಗಿದು ಪರಿಪರಿಯಾಗಿ ಬೇಡಿದ್ರು ಬಿಡಲಿಲ್ಲ ಕೆಇಬಿ ಅಧಿಕಾರಿ

ಮಂಗಳೂರು: ಸರ್ಕಾರಿ ಅಧಿಕಾರಿಯೊಬ್ಬರು ವೃದ್ಧ ಮಾವನಿಗೆ  ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. 87 ವರ್ಷದ ಪದ್ಮನಾಭ ಸುವರ್ಣ ಅವರು ಸೊಸೆಯಿಂದ ಹಲ್ಲೆಗೊಳಗಾದ ಮಾವ. ಆರೋಪಿ ಸೊಸೆಯನ್ನು ಉಮಾಶಂಕರಿ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ. ನಡೆದಿದ್ದೇನು?:  ಮಾರ್ಚ್ 9 ರಂದು ಮಾವನಿಗೆ ವಾಕ್ ಸ್ಟಿಕ್ ನಲ್ಲಿ ಸೊಸೆ ಮನಬಂದಂತೆ ಥಳಿಸಿದ್ದಾಳೆ. ಮಾವ ಕೈಮುಗಿದು ಬೇಡಿಕೊಂಡರೂ ಬಿಡದೇ ಥಳಿಸಿದ್ದಾಳೆ. ಈ ಪರಿಣಾಮ ವೃದ್ಧನ ಕೈ, ಮುಖಕ್ಕೆ ಗಾಯಗಳಾಗಿವೆ. … Continue reading ವೃದ್ಧ ಮಾವನಿಗೆ ಹಿಗ್ಗಾಮುಗ್ಗಾ ಥಳಿಸಿದ ಸೊಸೆ; ಕೈಮುಗಿದು ಪರಿಪರಿಯಾಗಿ ಬೇಡಿದ್ರು ಬಿಡಲಿಲ್ಲ ಕೆಇಬಿ ಅಧಿಕಾರಿ