ನಗರಸಭೆಯಲ್ಲಿ ಅಕ್ರಮ ಸಕ್ರಮಗೊಳಿಸುವ ಪ್ರಯತ್ನ!

blank

ಸ್ವಚ್ಛತಾ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ? ವರ್ಗಾವಣೆಯಾಗಿರುವ ಇಂಜಿನಿಯರ್​ ಬಿಡುಗಡೆಗೆ ಹಿಂದೇಟು

ಕೋಲಾರ:ನಗರಸಭೆಯ ಪರಿಸರ ವಿಭಾಗದ ಎಇಇ ಎನ್​.ಆರ್​.ದಿಲೀಪ್​ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿ 7 ತಿಂಗಳು ಕಳೆದರೂ ಸೇವೆಯಿಂದ ಬಿಡುಗಡೆಗೊಳ್ಳದೆ ಮುಂದುವರಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸ್ವಚ್ಛ ಭಾರತ್​ ಮಿಷನ್​&1.0 (ಎಸ್​ಬಿಎಂ) ಯೋಜನೆಯಡಿ ಸ್ವಚ್ಛತಾ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ಅಕ್ರಮಗಳ ಸಕ್ರಮ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಮಾತು ಮುನ್ನೆಲೆಗೆ ಬಂದಿದೆ.


ಸರ್ಕಾರ 2024ರ ಮಾರ್ಚ್​ 7ರಂದು ದಿಲೀಪ್​ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ಆದರೆ 7 ತಿಂಗಳು ಕಳೆದರೂ ಸೇವೆಯಿಂದ ಬಿಡುಗಡೆಗೊಳ್ಳದೆ ಇರುವುದರಿಂದ ಕಾರಣ ಕೇಳಿ ಯೋಜನಾಧಿಕಾರಿ ನೋಟಿಸ್​ ಜಾರಿ ಮಾಡಿದ್ದು, ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಆದರೂ ಇಂಜಿನಿಯರ್​ ಸರ್ಕಾರದ ಆದೇಶವನ್ನೂ ಲೆಕ್ಕಿಸದೆ ಇದ್ದ ಸ್ಥಳದಲ್ಲೇ ಮುಂದುವರಿದಿದ್ದಾರೆ.


ಅ.8ರಂದು ನಡೆದ ನಗರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ವರದಿಯ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ದರು. ಅಧಿಕಾರಿಗಳು ಹೇಗೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ನಗರಸಭೆ ಸದಸ್ಯರು ಸಭೆಯ ಗಮನಕ್ಕೆ ತಂದಿದ್ದರು. ಭ್ರಷ್ಟಾಚಾರದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ತೀರ್ಮಾನ ಕೈಗೊಂಡಿದ್ದರು. ಜತೆಗೆ ಇಂಜನಿಯರ್​ ದಿಲೀಪ್​ ಅವರು ವರ್ಗಾವಣೆ ಆಗಿದ್ದು, ಬಿಡುಗಡೆಗೊಳಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದರು.


ಸಭೆ ನಡೆದು ಎರಡು ವಾರಗಳು ಕಳೆದಿದ್ದು ನಗರಸಭೆ ಪ್ರಭಾರ ಪೌರಾಯುಕ್ತರು ಹಾಗೂ ನಗರ ಯೋಜನಾಧಿಕಾರಿ ಅಂಬಿಕಾ ಅವರು ಯಾವುದೇ ರೀತಿ ಕ್ರಮಕೈಗೊಳ್ಳದೆ ಇರುವುದು ನಗರಸಭೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸಿಸಿಟಿವಿ ಕ್ಯಾಮರಾಗಳ ದರ ಮಾಹಿತಿ ಪಡೆದುಕೊಂಡ ಶಾಸಕ ಕೊತ್ತೂರು ಜಿ.ಮಂಜುನಾಥ್​ ಅವರು, ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಪ್ರಕರಣವನ್ನು ಖುದ್ದು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಸಭೆಯ ಒಪ್ಪಿಗೆ ಪಡೆದುಕೊಂಡರು.


ಸದ್ದು ಮಾಡಿದ್ದ ವಿಜಯವಾಣಿ ವಿಶೇಷ ವರದಿ: ಎಸ್​ಬಿಎಂ ಅಡಿಯಲ್ಲಿ ಬಿಡುಗಡೆಯಾದ 2.40 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛತಾ ಸಲಕರಣೆ, ಯಂತ್ರಗಳು ಹಾಗೂ ಯಂತ್ರೋಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು.

3 ಸಾವಿರ ರೂ. ಬೆಲೆಯ ಕ್ಯಾಮರಾಗೆ 97 ಸಾವಿರ ರೂ.ಪಾವತಿಸಲು ಕಾರಣವೇನು?, ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು, ಇದನ್ನು ಬಿಡುವುದಿಲ್ಲ ಎಂದು ಶಾಸಕ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಅಧಿಕಾರಿಗಳು ತೆರೆ ಮರೆಯಲ್ಲಿ ಯತ್ನ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ನಾನು ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಬೇರೆ ಅಧಿಕಾರಿ ಬರುತ್ತಿಲ್ಲ. ಇದರಿಂದಾಗಿ ಇಲ್ಲೇ ಮುಂದುವರಿದಿದ್ದೇನೆ. ಯಾರಾದರು ಬಂದರೆ ಬಿಡುಗಡೆಗೊಂಡು ವರ್ಗಾವಣೆಯಾಗಿರುವ ಸ್ಥಳಕ್ಕೆ ತೆರಳುತ್ತೇನೆ.

ಎನ್​.ಆರ್​.ದಿಲೀಪ್​ ಪರಿಸರ ವಿಭಾಗದ ಎಇಇ

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…