ಕಳಸ: ಎಲ್ಲಿಯೋ ಬಿಸಾಡಿ ಹೋಗುವ, ಒಲೆ ಸೇರಿ ಬೂದಿಯಾಗುವ ತೆಂಗಿನ ಕಾಯಿ ಚಿಪ್ಪಿಗೆ ಕಲಾತ್ಮಕತೆಗೆ ಕೊಟ್ಟರೆ ಅದು ಹೇಗೆ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಸಲಿದೆ ಎಂಬುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಕಳಸ ಸಮೀಪದ ಹಂದಿಗೋಡಿನ ಕೃಷಿಕರೊಬ್ಬರು ತೆಂಗಿನಕಾಯಿ ಗೆರೆಟೆಯಿಂದ ಏನೆಲ್ಲ ಆಕರ್ಷಕ ವಸ್ತುಗಳನ್ನು ಮಾಡಬಹುದು ಎಂಬುವುದನ್ನು ತೋರಿಸಿದ್ದಾರೆ.
ಎಲೆ ಮರೆಯ ಕಾಯಿಯಂತಿರುವ ಕಳಸ ಸಮೀಪದ ಹಂದಿಗೋಡು ಪೂರ್ಣಚಂದ್ರ ಅವರು ಕೃಷಿಕರಾಗಿ ಇದ್ದುಕೊಂಡು ಕಲೆಯನ್ನು ಭಿನ್ನವಾಗಿ ಚಿಂತಿಸಿ ತನ್ನ ಕಲಾ ಪ್ರೌಢಿಮೆಯನ್ನು ಸೇರಿಸಿ ತೆಂಗಿನ ಕಾಯಿಯ ಗೆರಟೆಯನ್ನು ಆಕರ್ಷಣೀಯವಾಗಿಸಿದ್ದಾರೆ. ತೆಂಗಿನ ಕಾಯಿಯನ್ನು ಉಪಯೋಗಿಸಿದ ನಂತರ ಚಿಪ್ಪನ್ನು ಕಸಕ್ಕೆ ಹಾಕದೇ ಅವು ಹೇಗೆ ನಮ್ಮೊಂದಿಗೆ ಸದಾ ಇರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪೂರ್ಣಚಂದ್ರ ಅವರು ತೆಂಗಿನ ಚಿಪ್ಪಿನಿಂದ ದಿನ ಬಳಕೆ ಸೇರಿದಂತೆ ಅಲಂಕಾರಿಕಾ ವಸ್ತುಗಳನ್ನು ತಯಾರಿಸಿದ್ದಾರೆ. ಈ ಮೂಲಕ ಮೂಲೆ ಸೇರುತ್ತಿದ್ದ ತೆಂಗಿನ ಚಿಪ್ಪಿನಿಂದ ವಿಭಿನ್ನ ರೂಪ ನೀಡಿದ್ದಾರೆ.
ಬಾಲ್ಯದಲ್ಲಿಯೇ ಕಲೆ ಮೇಲೆ ಒಲವಿದ್ದ ಪೂರ್ಣಚಂದ್ರ ಮೂಲತಃ ಕೃಷಿಕರಾಗಿರಾಗಿದ್ದೂ ತನ್ನ ದಿನ ನಿತ್ಯದ ಕೃಷಿ ಕಾರ್ಯಚಟುವಟಿಕೆ ಮುಗಿದ ನಂತರ ಬಿಡುವಿನ ವೇಳೆ ಸಮಯ ಸದ್ಬಳಕೆ ಮಾಡಿಕೊಂಡು ಒಲೆ ಸೇರಿ ಬೂದಿಯಾಗುವ ತೆಂಗಿನ ಕಾಯಿ ಚಿಪ್ಪನ್ನು ಯಾಕೆ ಸದ್ಬಳಕೆ ಮಾಡಿಕೊಳ್ಳಬಾರದು ಎಂದು ಯೋಚಿಸಿದ ಅವರು, ಪ್ರಾರಂಭದಲ್ಲಿ ಸೌಟು, ಸ್ಪೂನ್‌ನಂತಹ ಸಣ್ಣ ಮಟ್ಟದ ಕಲಾಕೃತಿಯನ್ನು ಮಾಡಿ ನಂತರ ಅದನ್ನೇ ಮುಂದುವರಿಸಿಕೊಂಡು ಹೋಗಿ ಈಗ ಮೊಸಳೆ, ಚೇಳುನಂಹ ಕ್ಲಿಷ್ಟಕರ ಕಲಾಕೃತಿಯನ್ನು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ.
