More

    ಅಖಂಡ ಭಾರತ ಪ್ರಜ್ಞಾವಂತ ಪ್ರಪಂಚ

    ಸದ್ಗುರು, ಈಶ ಫೌಂಡೇಶನ್

    ಭಾರತ ಎಂಬುದು ಮೂರು ಪದಗಳ ಸಮ್ಮಿಲನವಾಗಿದೆ. ಭಾ, ಇದು ಭಾವ, ರ, ರಾಗ ಮತ್ತು ತ, ತಾಳವನ್ನು ಸೂಚಿಸುತ್ತದೆ. ಭಾವ ಎಂದರೆ ಸಂವೇದನೆ, ಇದು ಎಲ್ಲಾ ಮಾನವ ಅನುಭವದ ಆಧಾರವಾಗಿದೆ. ರಾಗವು ಎಲ್ಲಾ ಸೃಷ್ಟಿಗೆ ಆಧಾರವಾಗಿರುವ ರಾಗವನ್ನು ಸೂಚಿಸುತ್ತದೆ. ತಾಳ ಎಂದರೆ, ಎಲ್ಲರೂ ಕಂಡುಕೊಳ್ಳಬೇಕಾದದ್ದು. ಅಸ್ತಿತ್ವಕ್ಕೆ ತನ್ನದೇ ಆದ ಸಹಜ ರಾಗವಿದೆ. ಈ ರಾಗದಲ್ಲಿ ಲಯವನ್ನು ಕಂಡುಹಿಡಿಯಲು ಕಲಿಯುವುದು ಮಾನವ ಅನುಭವದ ಸಂತೋಷ ಮತ್ತು ಉತ್ಕೃಷ್ಟತೆಯನ್ನು ಉತ್ತಮಗೊಳಿಸುವ ಮಾರ್ಗವಾಗಿದೆ. ಇದು ಭಾರತ ಎಂಬ ಪದದ ಸಾರವಾಗಿದೆ. ನಮ್ಮ ಸಂಸ್ಕೃತಿಯು ಯುಗಗಳ ಹಿಂದೆಯೇ ಯೋಗಕ್ಷೇಮಕ್ಕೆ ಈ ಮಾರ್ಗವನ್ನು ರೂಪಿಸಿತು ಮತ್ತು ಜೀವನದೊಂದಿಗೆ ಹೊಂದಾಣಿಕೆಯಲ್ಲಿ ಬದುಕಲು ಅತ್ಯಾಧುನಿಕ ವಿಜ್ಞಾನ ಮತ್ತು ಬಹು ತಂತ್ರಜ್ಞಾನಗಳನ್ನು ವಿಕಸನಗೊಳಿಸಿತು. ಬಹುಶಃ ಈ ಒಳನೋಟವು ಪ್ರಪಂಚಕ್ಕೆ ನಮ್ಮ ವಿಶಿಷ್ಟ ಕೊಡುಗೆಯಾಗಿದೆ.

    ಮಹಾ ಅಖಂಡ ಭಾರತವು ಇಡೀ ಪ್ರಪಂಚವು, ಮಿಕ್ಕ ಅಸ್ತಿತ್ವದೊಂದಿಗೆ ಹೊಂದಾಣಿಕೆಯಲ್ಲಿ ಬದುಕುವ ದೊಡ್ಡ ಸಾಧ್ಯತೆಯನ್ನು ಹೊಂದಿದೆ. ‘ಅಖಂಡ’ ಎಂಬ ಪದವು ಭೌಗೋಳಿಕ ವಿಸ್ತರಣೆಯನ್ನು ಸೂಚಿಸುವುದಿಲ್ಲ. ಇದರರ್ಥ ಮಹಾಶಕ್ತಿಯಾಗುವುದು ಅಥವಾ ಪ್ರಪಂಚವನ್ನು ಗೆಲ್ಲುವುದು ಎಂದಲ್ಲ. ಜೀವನದ ಆ ಹಂತವು ನಮ್ಮ ಪ್ರಪಂಚದಲ್ಲಿ ಸದ್ಯಕ್ಕೆ ಮುಗಿದಿದೆ. ಮಹಾ ಅಖಂಡ ಭಾರತವು ಎಲ್ಲವನ್ನು ಒಳಗೊಳ್ಳುವುದರ ಬಗ್ಗೆಯೇ ಹೊರತು ಯಾವುದನ್ನೂ ಪ್ರತ್ಯೇಕವಾಗಿಡುವುದರ ಬಗ್ಗೆಯಲ್ಲ. ಜೀವನದೊಂದಿಗೆ ಹೊಂದಿಕೊಂಡು ಬದುಕುವುದು ಎಂದರೆ ಏನಾದರೂ ಮಾಡುವುದರ ಬಗ್ಗೆಯಲ್ಲ. ಇದು ಮಣ್ಣು, ನೀರು, ಗಾಳಿ, ಬೆಂಕಿ ಮತ್ತು ಬಾಹ್ಯಾಕಾಶ ಸೇರಿದಂತೆ, ಅಸ್ತಿತ್ವದ ಜೀವ ಮತ್ತು ನಿರ್ಜೀವ ಅಂಶಗಳೊಂದಿಗೆ ಸಾಮರಸ್ಯದಿಂದ ಎಲ್ಲವನ್ನೂ ಒಳಗೊಳ್ಳುವ ಸ್ಥಿತಿಯಲ್ಲಿ ಬದುಕುವುದನ್ನು ಸೂಚಿಸುತ್ತದೆ. ಪ್ರತ್ಯೇಕತೆಯ ಸ್ಥಿತಿಯಲ್ಲಿ ಬದುಕುವುದು ಎಂದರೆ- ‘ಇತರ’ರ ವಿರುದ್ಧ ‘ನಾವು’, ಅದು ಇನ್ನೊಬ್ಬ ವ್ಯಕ್ತಿ, ಜೀವಿ ಅಥವಾ ವಸ್ತುವಿನ ವಿರುದ್ಧವಾಗಿರಬಹುದು – ಅನ್ಯೋನ್ಯತೆಯಿಲ್ಲದೆ ಬದುಕುವುದು.

    ಯೋಗವಿಜ್ಞಾನದಿಂದ ಸಾಧ್ಯವಾಗುವ ಐಕ್ಯತೆಯ ಸಾಮೂಹಿಕ ಅನ್ವಯವೇ ಸನಾತನ ಧರ್ಮವಾಗಿದೆ. ನಮ್ಮ ಆಧ್ಯಾತ್ಮಿಕ ಸಂಸ್ಕೃತಿಯು ಐಕ್ಯತೆಯ ಮೂಲಭೂತ ಸತ್ಯವನ್ನು ಗ್ರಹಿಸಿತು ಮತ್ತು ಅದನ್ನು ವಿಸ್ತಾರವಾದ ವ್ಯಕ್ತಿನಿಷ್ಠ ತಂತ್ರಜ್ಞಾನಗಳ ಮೂಲಕ ಮಾನವ ಜೀವನದಲ್ಲಿ ತರುವ ಪ್ರಯತ್ನ ಮಾಡಿತು. ಇದಕ್ಕೆ ವಿರುದ್ಧವಾಗಿ ಇತರ ಸಂಸ್ಕೃತಿಗಳು ಒಳಿತನ್ನು ಸೃಷ್ಟಿಸಲು ಸಮಗ್ರವಾಗಿ ಪ್ರತ್ಯೇಕತೆ ಮತ್ತು ಪ್ರಾಬಲ್ಯವನ್ನು ನೆಚ್ಚಿಕೊಂಡಿತು. ಪ್ರತ್ಯೇಕತೆಯ ಯುಗ ಕೊನೆಯಾಗಿ, ನಾವಿಂದು ಒಳಗೂಡಿಸಿಕೊಳ್ಳುವಿಕೆಯ ಯುಗದಲ್ಲಿದ್ದೇವೆ. ಇದು ಮಾನವ ಇತಿಹಾಸದಲ್ಲೇ ಮಹತ್ವಪೂರ್ಣವಾದ ಕ್ಷಣ.

    ಇಡೀ ಪ್ರಪಂಚಕ್ಕೆ ಮಹಾ ಅಖಂಡ ಭಾರತವು ಈ ಉಪಖಂಡದ ಒಳಗೊಳ್ಳುವಿಕೆಯ ಮಹಾನ್ ದೃಷ್ಟಿಯ ಕೊಡುಗೆಯಾಗಿದೆ. ಇದು ಭೌತಿಕ ಗಡಿಗಳನ್ನು ಮೀರಿ ವೈಯಕ್ತಿಕ ಪ್ರಜ್ಞೆಯನ್ನು ಹೆಚ್ಚಿಸುವುದು ಮತ್ತು ರಾಷ್ಟ್ರೀಯ ಗಡಿಗಳನ್ನು ಮೀರಿ ಸಾಮೂಹಿಕ ಪ್ರಜ್ಞೆಯನ್ನು ಹೆಚ್ಚಿಸುವುದರ ಬಗ್ಗೆಯಾಗಿದೆ. ನಮ್ಮ ದೇಶವು ಈ ವರ್ಷ ಜಿ20 ಗಾಗಿ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವುದರಿಂದ, ನಾವು ಪ್ರಪಂಚಕ್ಕೆ ವಿಶ್ವ ನಾಯಕತ್ವವನ್ನು ಒಳಗೊಳ್ಳುವಿಕೆಯ ಆಧಾರದ ಮೇಲೆ ಒದಗಿಸುವ ಸ್ಥಾನದಲ್ಲಿದ್ದೇವೆ, ಪ್ರಾಬಲ್ಯದ ಮೇಲೆ ಅಲ್ಲ. ಒಂದು ಪ್ರಜ್ಞಾವಂತ ಪ್ರಪಂಚ – ಇದೀಗ ಅದನ್ನು ನಿರ್ವಿುಸುವ ಸಮಯ. ಬನ್ನಿ, ಇದನ್ನು ಸಾಕಾರಗೊಳಿಸೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts