More

    ಈ 86 ವರ್ಷದ ವೃದ್ಧ ಮುಸುಕು ಹಾಕಿಕೊಂಡು ಯಾಕೆ ಇಂಥ ಕೆಲಸ ಮಾಡಬೇಕಿತ್ತು? ಸುಮ್ಮನೆ ಜೈಲು ಸೇರಬೇಕಾಯಿತು…

    ಗ್ರೀನ್​ವಿಲ್ಲೆ: 86 ವರ್ಷದ ವೃದ್ಧ. ಮುಖಕ್ಕೆ ಮುಸುಕು ಹಾಕಿಕೊಂಡು, ಸಶಸ್ತ್ರ ಸಹಿತನಾಗಿ ಬ್ಯಾಂಕ್​ವೊಂದಕ್ಕೆ ನುಗ್ಗಿದ. ಅಲ್ಲಿರುವ ಸಿಬ್ಬಂದಿಯನ್ನೆಲ್ಲ ಗನ್​ಪಾಯಿಂಟ್​ನಲ್ಲಿ ಇಟ್ಟು ದರೋಡೆ ಮಾಡಲು ಶುರುವಿಟ್ಟುಕೊಂಡ. ಆದರೆ ಕನ್ನ ಹಾಕೋ ಪ್ರಯತ್ನ ಫಲಿಸದೆ ಈಗ ಪೋಲೀಸರ ವಶದಲ್ಲಿ ಇದ್ದಾನೆ…!

    ದಕ್ಷಿಣ ಕೆರೋಲಿನಾದ ಗ್ರೀನ್​ವಿಲ್ಲೆಯಲ್ಲಿ ಘಟನೆ ನಡೆದಿದೆ. ಬೆಳಗ್ಗೆ 9.30ರ ಹೊತ್ತಿಗೆ ಬ್ಯಾಂಕ್​ಗೆ ನುಗ್ಗಿದ ಗಿಲ್ಬರ್ಟ್​ ಪೌಲ್​ ವೇರ್​ ಹೆಸರಿನ ಈ ಮುಸುಕುಧಾರಿ ವೃದ್ಧ ಉದ್ಯೋಗಿಗಳೆಡೆಗೆ ಬಂದೂಕು ತೋರಿಸಿದ್ದಾನೆ. ನೀವೆಲ್ಲ ನಿಮ್ಮ ಸ್ವಂತ ಹಣದ ಜತೆ ಬ್ಯಾಂಕ್​ನಲ್ಲಿರುವ ಹಣವನ್ನೂ ನೀಡಬೇಕು. ಇಲ್ಲದಿದ್ದರೆ ಶೂಟ್ ಮಾಡಿಬಿಡ್ತೀನಿ ಎಂದು ಹೆದರಿಸಿದ್ದಾನೆ. ಆತ ಮುದುಕ ಆದ್ರೆ ಏನು, ಅವನ ಕೈಲಿರೋ ಗನ್​ಗೆ ಶಕ್ತಿ ಇದ್ಯಲ್ಲ..! ಹೆದರಿದ ಬ್ಯಾಂಕ್​ ಸಿಬ್ಬಂದಿ ಇರೋಬರೋ ಹಣನೇಲ್ಲ ಅವನಿಗೆ ಕೊಟ್ಟರು.

    ಆದರೆ ಆತ ಬ್ಯಾಂಕ್​ನಿಂದ ಹೊರಹೋಗೋಷ್ಟರಲ್ಲಿ ಪೊಲೀಸರು ಆಗಮಿಸಿ ಬಂಧಿಸಿದ್ದಾರೆ. ಕಾರಣ ಇಷ್ಟೇ ವೇರ್​ ತನ್ನ ಕಾರಿನ ಬಳಿ ಹಿಂದಿರುಗಲು ತುಂಬ ತಡ ಮಾಡಿದರು. ವಯಸ್ಸಾಗಿದೆಯಲ್ಲ, ಹಣದ ಗಂಟು ಹೊತ್ತು ವೇಗವಾಗಿ ಓಡಿ ಹೋಗಿ ಕಾರಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಾಗಲೇ ಬ್ಯಾಂಕ್​ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸ್​ ಸ್ಟೇಶನ್​ ಕೂಡ ಬ್ಯಾಂಕ್​ನಿಂದ ಹತ್ತಿರವೇ ಇತ್ತು. ಕೂಡಲೇ ಆಗಮಿಸಿ ವೇರ್​ನನ್ನು ಬಂಧಿಸಿದ್ದಾರೆ.

    ಆತ ಕದ್ದೊಯ್ದಿದ್ದ ಹಣ ಹಾಗೂ ಅವನ ಬಳಿ ಇದ್ದ ಶಸ್ತ್ರಗಳನ್ನೆಲ್ಲ ವಶಪಡಿಸಿಕೊಂಡಿದ್ದಾರೆ. ಸದ್ಯ ವೃದ್ಧ ಪೊಲೀಸ್​ ಕಸ್ಟಡಿಯಲ್ಲೇ ಇದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts