ಸುಗಮ ಹೂಡಿಕೆಯ ಹಿತಾನುಭವಕ್ಕಾಗಿ ಸರ್ವ ಸುರಕ್ಷಿತ ಹೂಡಿಕೆ ನೀತಿ

ಹೆಚ್ಚಿನ ಲಾಭಾಂಶ ನಿರೀಕ್ಷಿಸಿ ಯಾವುದಾದರೂ ಒಂದು ಷೇರಿನ ಮೇಲೆ ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ಅದರ ಬೆಲೆಯಲ್ಲಿ ಇಳಿಕೆಯಾಗಿ ಹೂಡಿಕೆದಾರರಿಗೆ ನಷ್ಟದ ಭೀತಿ ಕಾಡಲಾರಂಭಿಸುತ್ತದೆ. ಈ ರೀತಿಯ ಬೆಲೆಯ ಏರಿಳಿತದಿಂದಾಗಿ ಜನರು ಷೇರುಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಲಾಭಾಂಶ ಕೂಡ ಮಾರುಕಟ್ಟೆಯ ಏರಿಳಿತಕ್ಕೆ ಸಮನಾಗಿ ಏರಿಳಿತ ಕಾಣುವುದರಿಂದ ಹೂಡಿಕೆ ಮೇಲಿನ ಲಾಭ ಗಳಿಕೆ ಅನಿಶ್ಚಿತತೆಯಿಂದ ಕೂಡಿರುತ್ತದೆ. ಹಾಗಾಗಿ ದೀರ್ಘಾವಧಿ ಹೂಡಿಕೆಗೆ ಹಿಂಜರಿಯುವ ಜನರು ತಮ್ಮ ಆರ್ಥಿಕ ಗುರಿಸಾಧನೆಯಲ್ಲೂ ವಿಫಲರಾಗಿ ಕೈಕೈ ಹಿಸುಕಿಕೊಳ್ಳತ್ತಾರೆ. ಇಂಥ ಭೀತಿಯಿಂದಾಗಿ ಹೂಡಿಕೆಗೆ ಇರುವ ಅವಕಾಶವನ್ನು ಕಳೆದುಕೊಳ್ಳುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನಿಲ್ಲ.

ಆದರೆ, ಇಂಥ ತಾರತಮ್ಯಗಳ ಸಂಕೋಲೆಯಿಂದ ಬಿಡುಗಡೆ ಹೊಂದಿ, ಜಯಶಾಲಿಯಾಗಲು ಸಾಕಷ್ಟು ಅವಕಾಶಗಳಿವೆ. ಅದುವೇ ಅಸೆಟ್​ ಅಲೋಕೇಷನ್​. ಅಂದರೆ, ಹೂಡಿಕೆಯನ್ನು ವಿವಿಧ ಭಾಗಗಳನ್ನಾಗಿ ವಿಂಗಡಿಸಿ, ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ಎಂಬ ನಾಣ್ಣುಡಿಗೆ ತಕ್ಕಂತೆ ದೀರ್ಘಕಾಲದಲ್ಲಿ ಹೆಚ್ಚಿನ ಲಾಭಾಂಶ ತಂದುಕೊಡುವಂಥ ಷೇರಿನಲ್ಲಿ ಹೂಡಿಕೆ ಮಾಡುವುದಾಗಿದೆ.

ಹೂಡಿಕೆಗಳು ಬೇರೆ ಬೇರೆ, ಆದರೆ ಗುರಿಯೊಂದೇ…
ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ಎಂದರೆ ಅರ್ಥವೇನು? ಹೂಡಿಕೆ ವಿಷಯಕ್ಕೆ ಇದು ಅನ್ವಯವೇ? ಎಂಬ ಪ್ರಶ್ನೆಗೆ ಹೌದು, ಇದು ಹೆಚ್ಚು ಅನ್ವಯವಾಗುತ್ತದೆ ಎಂಬ ಉತ್ತರ ಬರುತ್ತದೆ. ಲಭ್ಯವಿರುವ ವಿವಿಧ ಹೂಡಿಕೆಗಳ ಅವಕಾಶಗಳಿಗೆ ತಕ್ಕುದಾಗಿ ಹೂಡಿಕೆಯನ್ನು ವಿಂಗಡಿಸಿ ಸಮರ್ಥವಾದ ಪೋರ್ಟ್​ಫೋಲಿಯೋ (ಮಾದರಿ ಹೂಡಿಕೆಯ ಪಟ್ಟಿ) ಹೊಂದುವುದು ರೂಪಿಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ, ಉತ್ತಮ ಪ್ರದರ್ಶನ ತೋರುತ್ತಿರುವ ಷೇರುಗಳಲ್ಲಿ ಹಣ ತೊಡಗಿಸಿ, ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗುತ್ತದೆ. ಕಳಪೆ ಪ್ರದರ್ಶನ ತೋರುತ್ತಿರುವ ಷೇರುಗಳಲ್ಲಿನ ಲಾಭಾಂಶದ ಏರಿಳಿತದ ಬಿಸಿಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ.

ನಮ್ಮ ಪೋರ್ಟ್​ಫೋಲಿಯೋದಲ್ಲಿರುವ ಷೇರುಗಳೆಲ್ಲದರ ಗುರಿಯೂ ಹೆಚ್ಚಿನ ಲಾಭಾಂಶ ತಂದುಕೊಡುವುದೇ ಆಗಿದೆ. ಆದರೆ, ಆಯಾ ಕಾಲಘಟ್ಟದಲ್ಲಿನ ಆರ್ಥಿಕ ಪರಿಸ್ಥಿತಿ, ಮೂಲಭೂತ ಮತ್ತು ತಾಂತ್ರಿಕ ಅಂಶಗಳನ್ನು ಆಧರಿಸಿ ವಿವಿಧ ಹೂಡಿಕೆಗಳು ವಿವಿಧ ಸಮಯದಲ್ಲಿ ವಿವಿಧ ರೀತಿಯಲ್ಲಿ ವರ್ತಿಸುತ್ತವೆ ಎಂಬುದನ್ನು ಗಮನಿಸಬೇಕು. ವಿವಿಧ ಹೂಡಿಕೆಗಳು ವಿವಿಧ ರೀತಿಯ ಸಾಧನೆ ತೋರುತ್ತವೆ. ಉದಾಹರಣೆಗೆ, 2008ರಲ್ಲಿ ಈಕ್ವಿಟಿ ಹೂಡಿಕೆಗಳು ಶೇ.51 ಇಳಿಕೆ ಕಂಡಾಗ ಸರ್ಕಾರಿ ಡೆಟ್​ ಷೇರುಗಳ ಬೆಲೆ ಶೇ. 28 ಏರಿಕೆ ಕಂಡಿದ್ದವು. 2013ರಲ್ಲಿ ಸರ್ಕಾರಿ ಡೆಟ್​ ಷೇರುಗಳ ಬೆಲೆ ಶೇ.1ಕ್ಕೆ ಕುಸಿದಾಗ ಈಕ್ವಿಟಿ ಷೇರುಗಳ ಬೆಲೆಯಲ್ಲಿ ಶೇ.8 ಹೆಚ್ಚಳವಾಗಿತ್ತು. 2018ರಲ್ಲಿ ಈಕ್ವಿಟಿ ಮತ್ತು ಡೆಟ್​ ಷೇರುಗಳ ಬೆಲೆ ಸಮನಾಗಿ ಅಂದಾರ ಅಂದಾಜು ಶೇ.8 ಇಳಿಕೆ ಕಂಡಿದೆ.

ಮಾರುಕಟ್ಟೆಯ ಏರಿಳಿತವನ್ನು ಆಧರಿಸಿ ಹೂಡಿಕೆಗಳ ಲಾಭಾಂಶವೂ ಏರಿಳಿಯುತ್ತದೆ. ಅದರಂತೆ, ವಿಸ್ತೃತ ಆರ್ಥಿಕತೆ ವ್ಯವಸ್ಥೆ ಇರುವಲ್ಲಿ ಈಕ್ವಿಟಿ ಮಾರುಕಟ್ಟೆ ಉತ್ತಮ ಪ್ರದರ್ಶನ ತೋರಿದರೆ, ಸಂಕುಚಿತ ಆರ್ಥಿಕತೆ ವ್ಯವಸ್ಥೆ ಇರುವಲ್ಲಿ ಸರ್ಕಾರಿ ಷೇರುಗಳು ಉತ್ತಮ ಪ್ರದರ್ಶನ ತೋರುತ್ತವೆ. ಹಾಗಾಗಿ, ಸಕಾಲಿಕವಾಗಿ ಹೂಡಿಕೆಗಳನ್ನು ವರ್ಗಾಯಿಸುವ ಬಗ್ಗೆ ಜಾಣ್ಮೆ ತೋರಿದರೆ, ಹೂಡಿಕೆಯ ಪ್ರಯಾಣ ಸುಖಕರವಾಗಿಯೂ, ಸುಗಮವಾಗಿಯೂ ಇರುತ್ತದೆ. ಪೋರ್ಟ್​ಫೋಲಿಯಾದಲ್ಲಿ ಸಮತೋಲನ ಕಾಯ್ದುಕೊಂಡರೆ, ವಿವಿಧ ಬಗೆಯ ಆರ್ಥಿಕ ಸ್ಥಿತಿಗತಿಗಳಲ್ಲಿ ಹೂಡಿಕೆದಾರರ ಬಂಡವಾಳ ಕೂಡ ಸದಾ ಬಲಿಷ್ಠವಾಗಿ ಉಳಿಯುತ್ತದೆ.
ಪೋರ್ಟ್​ಫೋಲಿಯೋ ಮೇಲೆ ಪ್ರಭಾವ ಬೀರುವ ಅಂಶಗಳು

ಎಲ್ಲ ಪೋರ್ಟ್​ಫೋಲಿಯೋಗಳೂ ಉತ್ತಮವಾಗಿಯೇ ತೋರುತ್ತವೆ. ಆದರೆ, ಕೆಲವು ಮಾತ್ರ ಶ್ರೇಷ್ಠ ಎಂದು ಅನಿಸಿಕೊಳ್ಳುತ್ತವೆ. ಅದೆಷ್ಟೋ ಪೋರ್ಟ್​ಫೋಲಿಯೋಗಳು ಅಸೆಟ್​ ಅಥವಾ ಧ್ಯೇಯಕ್ಕೆ ಅಂಟಿಕೊಂಡಿರುವುದು ಇದಕ್ಕೆ ಕಾರಣ. ಏರಿಳಿತವೇ ಸಾಮಾನ್ಯವಾಗಿರುವ ಪ್ರಪಂಚದಲ್ಲಿ ಪೋರ್ಟ್​ಫೋಲಿಯೋ ಹೇಗೆ ವರ್ತಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಹೂಡಿಕೆಯಲ್ಲಿ ಯಾವುದೇ ತಪ್ಪು ಮಾಡದಿರುವಾಗ ಹೂಡಿಕೆದಾರರಿಗೆ ಏರಿಳಿತ ಆಪ್ಯಾಯಮಾನವೆನಿಸುತ್ತದೆ. ಒಳ್ಳೆಯ ಏರಿಳಿತ ಹೂಡಿಕೆ ಮೇಲಿನ ಲಾಭಾಂಶವನ್ನು ಹೆಚ್ಚಿಸಿ ಸಂತಸವನ್ನುಂಟು ಮಾಡಿದರೆ, ಕೆಟ್ಟ ಏರಿಳಿತ ಹೃದಯದ ಬಡಿತವನ್ನು ಏರುಪೇರು ಮಾಡುತ್ತದೆ ಎಂಬುದನ್ನು ಗಮನಿಸಬೇಕು.

ದೀರ್ಘಾವಧಿಯಲ್ಲಿ ಪೋರ್ಟ್​ಫೋಲಿಯೋಗಳು ತೋರುವ ಪ್ರದರ್ಶನದ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ತಮಗೆ ಹೆಚ್ಚಿನ ಲಾಭಾಂಶ ತಂದುಕೊಡುವ ಅಂಶಗಳು ಯಾವುವು? ಸಕಾಲಿಕ ಹೂಡಿಕೆಯೇ ಅಥವಾ ಸೂಕ್ತ ಷೇರುಗಳ ಆಯ್ಕೆಯೇ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. ಆಗ ಇವು ಯಾವುವೂ ಅಲ್ಲ. ಬದಲಿಗೆ ಸರಿಯಾದ ಅಸೆಟ್​ನಲ್ಲಿ ಹೂಡಿಕೆ ಮಾಡಿದ್ದು ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಗ್ಯಾರಿ ಬ್ರಿನ್​ಸ್ಟನ್​, ಬ್ರಿಯಾನ್​ ಡಿ. ಸಿಂಗರ್​ ಮತ್ತು ಗಿಲ್ಬರ್ಟ್​ ಎಲ್​ ಬೀಬೋವರ್​ ಅವರ ಡಿಟೆರ್ಮಿನೆಂಟ್ಸ್​ ಆಫ್​ ಪೋರ್ಟ್​ಫೋಲಿಯೋ ಪರ್ಫಾರ್ಮೆನ್ಸ್​ II, ಆ್ಯನ್​ ಅಪ್ಡೇಟ್​ ಎಂಬ ಮೂಲಭೂತ ಸಂಶೋಧನಾ ವರದಿಯ ಪ್ರಕಾರ ಹೂಡಿಕೆಯನ್ನು ವಿಂಗಡಿಸಿ ವಿವಿಧ ಅಸೆಟ್​ಗಳಲ್ಲಿ ತೊಡಗಿಸುವ ಕ್ರಮದಿಂದ ಪೋರ್ಟ್​ಫೋಲಿಯೋದ ಪ್ರದರ್ಶನ ಶೇ.91.5 ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಮಾರುಕಟ್ಟೆಯಲ್ಲಿನ ಪರಿಸ್ಥಿತಿ ಆಧರಿಸಿ ಮಾಡುವ ಹೂಡಿಕೆಗಳ ಪ್ರಭಾವ ಶೇ.1.8 ಆಗಿದ್ದರೆ, ಷೇರುಗಳ ಆಯ್ಕೆಯಿಂದ ಆಗುವ ಪ್ರಭಾವ ಶೇ.4.6 ಆಗಿರುತ್ತದೆ. ಇತರೆ ಅಂಶಗಳಿಂದ ಪೋರ್ಟ್​ಫೋಲಿಯೋ ಶೇ.2.1 ಪ್ರಭಾವಿತಗೊಳ್ಳುತ್ತದೆ.

ಮಾರುಕಟ್ಟೆ ಸದಾ ಅನಿಶ್ಚಿತತೆಯಿಂದ ಕೂಡಿರುತ್ತದೆ. ಹಾಗೆಂದು ಹೂಡಿಕೆದಾರರ ಭಾವನೆಗಳಿಗೆ ಈ ಮಾತು ಅನ್ವಯಿಸುವುದಿಲ್ಲ. ಆಶಾಭಾವದಿಂದ, ಸಂತಸ, ಸಂತಸದಿಂದ ಖುಷಿಯ ಕ್ಷಣಗಳು ಕ್ಷಣಾರ್ಧದಲ್ಲಿ ಆತಂಕ, ಭಯ ಮತ್ತು ಖಿನ್ನತೆಯಾಗಿ ಪರಿವರ್ತನೆಗೊಳ್ಳಬಹುದು. ​ಹೂಡಿಕೆದಾರನಿಗೆ ತಿಳಿಯುವಷ್ಟರಲ್ಲಿ ನಿರೀಕ್ಷೆ ಖಿನ್ನತೆಯಾಗಿ ಮಾರ್ಪಟ್ಟರೆ, ಒಂದಷ್ಟು ಸಮಾಧಾನದ ಬಳಿಕ ಆಶೋತ್ತರಗಳು ನಿರಾಶೆಯಾಗಿ ಮಾರ್ಪಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ ಕುರಿಮಂದೆಯ ರೀತಿ ಹೂಡಿಕೆದಾರರು ಪರಸ್ಪರರನ್ನು ಹಿಂಬಾಲಿಸುತ್ತಾರೆ. ಭಾವನೆಗಳ ಉತ್ಕಟತೆಗೆ ಕಡಿವಾಣ ಹಾಕಬೇಕಾದ ಸಂದರ್ಭದಲ್ಲಿ ಅದನ್ನು ಮಾಡುವುದಿಲ್ಲ. ಇತರೆ ಹೂಡಿಕೆದಾರರು ಭೀತರಾದರೆಂದರೆ ಇವರಲ್ಲಿ ನಡುಕವೇ ಹುಟ್ಟಿಕೊಳ್ಳುತ್ತದೆ. ಹೆಚ್ಚಿನ ಲಾಭದಲ್ಲಿ ಇತರರು ಷೇರುಗಳನ್ನು ಮಾರಾಟ ಮಾಡಲು ಮುಂದಾದರೆ ಇವರು ಕೂಡ ಷೇರುಗಳನ್ನು ಮಾರಾಟ ಮಾಡಲು ಮುಗಿಬೀಳುತ್ತಾರೆ. ಕುರಿಮಂದೆಯಂಥ ಇಂಥ ವರ್ತನೆಗೆ ಕಡಿವಾಣ ಹಾಕಬೇಕಾದರೆ, ಸೂಕ್ತವಾದ ಅಸೆಟ್​ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿ ಹೂಡಿಕೆ ಮಾಡಿ ನೆಮ್ಮದಿಯಿಂದ ಇರುವುದು ಒಳ್ಳೆಯದು.

ಹೂಡಿಕೆ ವಿಷಯದಲ್ಲಿ ಮ್ಯೂಚುಯಲ್​ ಫಂಡ್​ಗಳ ಜನಪ್ರಿಯತೆ
ಷೇರುಪೇಟೆಯಲ್ಲಿ ಹಣ ತೊಡಗಿಸುವ ವಿಷಯ ಬಂದಾಗ ಮ್ಯೂಚುಯಲ್ ಫಂಡ್​ಗಳು ತುಂಬಾ ಜನಪ್ರಿಯ ಎನಿಸಿಕೊಳ್ಳುತ್ತವೆ. ಹೂಡಿಕೆದಾರರ ಪ್ರಯಾಣ ಸುಖಕರವಾಗಿ ಮತ್ತು ಸುಗಮವಾಗಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ಅಸೆಟ್​ ಆಧಾರಿತ ಹೂಡಿಕೆ ಎಂಬ ಅಂಶವನ್ನು ಇದು ಒಳಗೊಂಡಿರುವುದು ಇದಕ್ಕೆ ಕಾರಣ.

ಮ್ಯೂಚುಯಲ್​ ಫಂಡ್​ಗಳಲ್ಲಿ ಎರಡು ಬಗೆಯ ಅಸೆಟ್​ ಹಂಚಿಕೆಗಳಿವೆ. ಮೊದಲನೆಯದ್ದು ಸ್ಥಿರವಾದ ಅಸೆಟ್​ ಹಂಚಿಕೆ (ಸ್ಟಾಟಿಕ್​ ಅಸೆಟ್​ ಅಲೋಕೇಷನ್​). ಇದರಲ್ಲಿ ವಿವಿಧ ಅಸೆಟ್​ಗಳ ಅನುಪಾತ ಬಹುತೇಕ ನಿಶ್ಚಿತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ ಉಂಟಾಗಿ ಮೂಲಭೂತ ಹೂಡಿಕೆಯ ಮೌಲ್ಯಾಂಕನವನ್ನೇ ಬದಲಿಸುವ ಸ್ಥಿತಿ ನಿರ್ಮಾಣಗೊಂಡಾಗ ಮಾತ್ರ ಇವುಗಳ ಮೌಲ್ಯದಲ್ಲೂ ಬದಲಾವಣೆಗಳಾಗುತ್ತವೆ. ಬಹುಮುಖೀಯ ಅಸೆಟ್​ ಹಂಚಿಕೆ (ಡೈನಾಮಿಕ್​ ಅಸೆಟ್​ ಅಲೋಕೇಷನ್​) ಎರಡನೆಯದ್ದು. ಮ್ಯೂಚುಯಲ್​ ಫಂಡ್​ಗಳಲ್ಲಿ ಹೂಡಿಕೆ ವಿಷಯ ಬಂದಾಗ ಇದರಲ್ಲಿ ಹಣ ತೊಡಗಿಸುವುದು ಹೆಚ್ಚು ಸೂಕ್ತ. ಈ ಹೂಡಿಕೆಗಳ ಮಾರುಕಟ್ಟೆಗಳ ಹಲವು ಸೂಚಕಗಳನ್ನು ಆಧರಿಸಿದ ಮಾದರಿಯನ್ನು ಹೊಂದಿರುತ್ತವೆ. ಇದರ ಪರಿಣಾಮ ನಿಜಕ್ಕೂ ಅಮೋಘವಾಗಿರುತ್ತವೆ. ಮಾರುಕಟ್ಟೆಯಲ್ಲಿ ಆಗುವ ಸಣ್ಣ ಬದಲಾವಣೆ ಕೂಡ ಹೂಡಿಕೆಗಳನ್ನು ವಿವಿಧ ಅಸೆಟ್​ ವರ್ಗಗಳತ್ತ ಹೂಡಿಕೆಯನ್ನು ವರ್ಗಾಯಿಸಲು ಪ್ರೇರಣೆ ಒದಗಿಸುತ್ತವೆ.

ವರ್ಷಗಳು ಉರುಳಿದಂತೆ ಬಹುಮುಖೀಯ ಅಸೆಟ್​ ಹಂಚಿಕೆಗಳಲ್ಲಿನ ಹೂಡಿಕೆಗಳು ಹೆಚ್ಚು ಲಾಭದಾಯಕ ಎನಿಸಿಕೊಂಡಿವೆ. ಮಾನವ ಭಾವನೆಗಳಿಗೆ ಆಸ್ಪದ ಇಲ್ಲದಂತೆ ಕಡಿಮೆಯಿದ್ದಾಗ ಖರೀದಿಸಿ, ಹೆಚ್ಚಾಗಿದ್ದಾಗ ಮಾರಾಟ ಮಾಡಿ ಎಂಬ ನೀತಿಯನ್ನು ಅಕ್ಷರಶಃ ಪಾಲಿಸುತ್ತ ಇಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಹೂಡಿಕೆ ಮಾಡಲಾಗುತ್ತದೆ. ಐಸಿಐಸಿಐ ಪ್ರುಡೆನ್ಶಿಯಲ್​ ಅಸೆಟ್​ ಅಲೋಕೇಟರ್​ ಫಂಡ್​ ಇದಕ್ಕೆ ಒಳ್ಳೆಯ ಉದಾಹರಣೆ.

ಈ ಸಂಸ್ಥೆಯು ಪ್ರದರ್ಶನವನ್ನು ಆಧರಿಸಿ ಡೆಟ್​ ಮತ್ತು ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಮಾರುಕಟ್ಟೆಯಲ್ಲಿನ ಸ್ಥಿತಿಗತಿಯನ್ನು ಆಧರಿಸಿ ಸೂಕ್ತವೆನಿಸಿದ್ದಲ್ಲಿ, ಡೆಟ್​ ಮತ್ತು ಈಕ್ವಿಟಿಗಳಲ್ಲಿ ಶೇ.0-100 ಹೂಡಿಕೆ ಮಾಡುತ್ತದೆ. ಈಕ್ವಿಟಿ ಮತ್ತು ಡೆಟ್​ ಮಾರುಕಟ್ಟೆಗಳಲ್ಲಿ ತಜ್ಞತೆಯನ್ನು ಆಧರಿಸಿ, ಸಂಸ್ಥೆಯಲ್ಲಿ ಆಂತರಿಕವಾಗಿ ರೂಪಿಸಲಾಗಿರುವ ಮಾದರಿಯನ್ನು ಆಧರಿಸಿ ಹೂಡಿಕೆಯನ್ನು ವಿಂಗಡಿಸಿ ಈಕ್ವಿಟಿ ಮತ್ತು ಡೆಟ್​ ಫಂಡ್​ಗಳಲ್ಲಿ ತೊಡಗಿಸುತ್ತಾರೆ. ಮಾರುಕಟ್ಟೆಯಲ್ಲಿನ ಏರಿಳಿತಗಳ ಹೊರತಾಗಿಯೂ ಸಂಸ್ಥೆಯು 2012ರಿಂದ ಹೊಂದಿರುವ ಮಾದರಿ ಎಂದಿಗೂ ನೇತ್ಯಾತ್ಮಕವಾಗಿ ವರ್ತಿಸಿಲ್ಲ. ಈಕ್ವಿಟಿ ಮಾರುಕಟ್ಟೆಗಳು ನೇತ್ಯಾತ್ಮಕವಾಗಿ ವರ್ತಿಸಿದರೂ ಈ ಮಾದರಿಯನ್ವಯ ಮರುಹೊಂದಾಣಿಕೆ ಮಾಡಿಕೊಳ್ಳುವುದರಿಂದ, ಲಾಭಾಂಶ ಬರುವುದು ತಪ್ಪಿಲ್ಲ. ಈ ಮಾದರಿಯು ಕಳೆದ 8 ವರ್ಷಗಳಲ್ಲಿ 7 ವರ್ಷ ಪ್ಲೇನ್​-ವೆನಿಲ್ಲಾ ಹೈಬ್ರೀಡ್​ ಫಂಡ್​ಗಳ ಮಾದರಿಯನ್ನು ಮಣಿಸಿದೆ. ಇದು ಸಂಸ್ಥೆ ಹೊಂದಿರುವ ಅತ್ಯಂತ ಕ್ರಿಯಾಶೀಲ ಅಸೆಟ್​ ಹಂಚಿಕೆ ಮಾದರಿಯ ಹೆಗ್ಗಳಿಕೆಯಾಗಿದೆ.

ಬಹುಮುಖೀಯ ಅಸೆಟ್​ ಹಂಚಿಕೆಯು ಹೂಡಿಕೆದಾರರಿಗೆ ನಾಲ್ಕು ವಿಧದ ಅನುಕೂಲಗಳನ್ನು ಕಲ್ಪಿಸಿಕೊಡುತ್ತದೆ. ಮೊದಲು ಅಸೆಟ್​ ವರ್ಗಗಳ ನಡುವೆ ಹೂಡಿಕೆಯನ್ನು ಪರಿವರ್ತಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ನಿಯಮಿತ ಮೇಲ್ವಿಚಾರಣೆ ಮತ್ತು ಮರುಹೊಂದಾಣಿಕೆಗೆ ಅವಕಾಶ ನೀಡುವ ಮೂಲಕ ಹೆಚ್ಚಿನ ನಷ್ಟವನ್ನು ತಪ್ಪಿಸುತ್ತದೆ. ರಿಸ್ಕ್​ ಆಧರಿತವಾಗಿ ಹೆಚ್ಚಿನ ಲಾಭಾಂಶ ಹೊಂದಲು ಅವಕಾಶ ಮಾಡಿಕೊಡುವ ಮೂಲಕಿ ಹೂಡಿಕೆಯ ಹಿತಾನುಭವವನ್ನು ಉಂಟು ಮಾಡುತ್ತದೆ. ಷೇರುಪೇಟೆಯಲ್ಲಿನ ಏರಿಳಿತಕ್ಕೆ ತಕ್ಕಂತೆ ಲಾಭಾಂಶವನ್ನು ತಂದುಕೊಡುವ ಜತೆಗೆ ಡೆಟ್​ ತೆರಿಗೆಯ ಲಾಭವನ್ನೂ ತಂದುಕೊಡುತ್ತದೆ. ತನ್ಮೂಲಕ ಹಣದುಬ್ಬರ ಆಧಾರಿತವಾದ ಲಾಭ ತಂದುಕೊಡುವ ಸಾಂಪ್ರದಾಯಿಕ ಹೂಡಿಕೆಗಳಿಗಿಂತಲೂ ಹೆಚ್ಚು ಸಮರ್ಥವಾಗಿ ಇದು ಕಾರ್ಯನಿರ್ವಹಿಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ – ಅತ್ಯಂತ ಉತ್ಕೃಷ್ಟವಾದ ಪೋರ್ಟ್​ಫೋಲಿಯೋ ಹೊಂದುವ ನಿಟ್ಟಿನಲ್ಲಿ ಅತ್ಯಂತ ಜಾಣ್ಮೆಯಿಂದ ಹೂಡಿಕೆಗಳನ್ನು ಮಾಡುವುದು ಒಳಿತು. ಇದರಿಂದಾಗಿ ಮಾರುಕಟ್ಟೆಯ ಏರಿಳಿತವನ್ನು ಆಧರಿಸಿ ತ್ವರಿತವಾಗಿ ಹೂಡಿಕೆಗಳನ್ನು ವಿವಿಧ ಅಸೆಟ್​ಗಳಿಗೆ ಸುಲಭವಾಗಿ ಮತ್ತು ಸುಗಮವಾಗಿ ವರ್ಗಾಯಿಸಲು ಅನುಕೂಲವಾಗುತ್ತದೆ. ತನ್ಮೂಲಕ ಉತ್ತಮ ಲಾಭಾಂಶವೂ ದೊರೆಯುತ್ತದೆ. ಇದರಿಂದಾಗಿ ಪೋರ್ಟ್​ಫೋಲಿಯೋದ ಒಟ್ಟಾರೆ ಪ್ರದರ್ಶನ ಮತ್ತು ಉತ್ಕೃಷ್ಟತೆಯ ಸ್ಪರ್ಶ ದೊರೆಯುತ್ತದೆ. ಈ ರೀತಿಯಾಗಿ ಹೂಡಿಕೆದಾರರು ಮಾರುಕಟ್ಟೆಯ ಏರಿಳಿತದಿಂದಾಗಿ ತಮ್ಮ ಹೂಡಿಕೆ ಏನಾಯಿತೋ ಎಂಬ ಬಗ್ಗೆ ಆತಂಕಗೊಳ್ಳದೆ ನೆಮ್ಮದಿಯಿಂದ ನಿರಾಳವಾಗಿ ಉಳಿಯಲು ಸಾಧ್ಯವಾಗುತ್ತದೆ.

| ಸುಧೇಂದ್ರ ಲಕ್ಷ್ಮಣ ರಾವ್​, ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇನ್​ಪ್ರಿಸಮ್​ ಸರ್ವೀಸಸ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​, ಬೆಂಗಳೂರು.