ಮೋಡದಿಂದಾಗಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿರುವ ಯುದ್ಧವಿಮಾನ: ಅಪಘಾತ ಸ್ಥಳ ತಲುಪಿರುವ ಪರ್ವತಾರೋಹಿಗಳ ತಂಡ

ನವದೆಹಲಿ: ತನ್ನ ಎಎನ್​-32 ಯುದ್ಧ ವಿಮಾನ ಅಪಘಾತಕ್ಕೆ ಮೋಡ ಅಡ್ಡ ಬಂದಿರುವುದು ಕಾರಣ. ಮೋಡದಿಂದಾಗಿ ಬೆಟ್ಟದ ಎತ್ತರವನ್ನು ನಿಖರವಾಗಿ ಗಮಿಸಲು ಪೈಲಟ್​ ವಿಫಲವಾಗಿದ್ದರಿಂದ ವಿಮಾನ ಅಪಘಾತಕ್ಕೀಡಾಗಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

ವಿಮಾನ ಅಪಘಾತಕ್ಕೀಡಾಗಿರುವ ಪ್ರದೇಶ ತುಂಬಾ ಕಡಿದಾಗಿದ್ದು, ದಟ್ಟ ಹಸಿರಿನಿಂದ ಕೂಡಿದೆ. ಭಾರತೀಯ ವಾಯುಪಡೆ ಸೇರಿ ಸೇನೆಯ 15 ಪರ್ವತಾರೋಹಿಗಳ ತಂಡ ಅಲ್ಲಿಗೆ ತೆರಳುತ್ತಿದೆ ಎಂದು ಹೇಳಿವೆ.

ವಾಯಪಡೆಯ 9, ಸೇನೆಯ ನಾಲ್ವರು ಮತ್ತು ಇಬ್ಬರು ನಾಗರಿಕ ಪರ್ವತಾರೋಹಿಗಳು ಈ ತಂಡದಲ್ಲಿದ್ದಾರೆ. ಇವರಲ್ಲಿ ಒಂದು ತಂಡ ಈಗಾಗಲೆ ಅಪಘಾತ ಸ್ಥಳ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಸಜ್ಜಾಗುತ್ತಿದೆ. ಇನ್ನುಳಿದವರು ಶೀಘ್ರದಲ್ಲೇ ಅಲ್ಲಿಗೆ ತಲುಪಲಿದ್ದಾರೆ ಎಂದು ತಿಳಿಸಿವೆ.

ಅಂದಾಜು 9 ದಿನಗಳ ಹಿಂದೆ ಅಸ್ಸಾಂಸನಿಂದ ಅರುಣಾಚಲಪ್ರದೇಶದ ಮೆಚುಕ್​ ಇಳಿದಾಣದತ್ತ ತೆರಳುತ್ತಿದ್ದ ಎಎನ್​-32 ಯುದ್ಧವಿಮಾನ ಹಠಾತ್ತನೆ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ಅಂದಿನಿಂದಲೂ ಇದನ್ನು ಪತ್ತೆ ಮಾಡಲು ಶೋಧ ಕಾರ್ಯ ನಡೆದಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ 16 ಕಿ.ಮೀ. ದೂರದಲ್ಲಿ ಹಾಗೂ ಟಾಟೋದ ಈಶಾನ್ಯ ಭಾಗದಲ್ಲಿ ಅಂದಾಜು 12 ಸಾವಿರ ಅಡಿ ಎತ್ತರದಲ್ಲಿ ಎಎನ್​-32 ಯುದ್ಧವಿಮಾನದ ಅವಶೇಷ ಪತ್ತೆಯಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *