ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ?

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ, ಈ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿ ಬಳಗ, ಸಿನಿತಾರೆಯರು ಎಲ್ಲರು ಶುಭ ಹಾರೈಸುತ್ತಿದ್ದಾರೆ. ಇನ್ನು, ಈಗಾಗಲೇ ನಟಿಯ ಸೀಮಂತ, ಬೇಬಿ ಬಂಪ್, ಮಾಮ್ ಟು ಬಿ ಪಾರ್ಟಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದರ ನಡುವೆ, ನಟಿ ಅಮೂಲ್ಯಗೆ ಕನ್ನಡ ಚಿತ್ರರಂಗದವರು ಬಹುತೇಕ ಎಲ್ಲರೂ ಸೇರಿ ಬೆಂಗಳೂರಿನ ಒಂದು ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಭಾಗಿಯಾದಂತೆ ಕಾಣುತ್ತಿತ್ತು.
ಈ ಕಾರ್ಯಕ್ರಮದ ಫೋಟೋಗಳು ವೈರಲ್ ಆಗುತ್ತಿರುವಾಗಲೇ, ನಟಿ ಅಮೂಲ್ಯ ಮತ್ತು ನಟಿ ರಮ್ಯಾ ಅವರ ಒಂದು ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಬೇಬಿ ಶವರ್ ಕಾರ್ಯಕ್ರಮಕ್ಕೆ ನಟಿ ರಮ್ಯಾ ಲೇಟ್ ಆಗಿ ಬಂದರು, ಲೇಟಸ್ಸ್ ಆಗಿ ಬಂದಿದ್ದಾರೆ ಎನ್ನಲಾಗಿದೆ. ಇನ್ನು, ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್​ನ ಹಲವು ಗಣ್ಯರು ಅಮೂಲ್ಯ ಅವರಿಗೆ ಬಹಳಷ್ಟು ಬೇರೆ ಬೇರೆ ಗಿಫ್ಟ್‌ಗಳು ನೀಡಿ ಶುಭ ಹಾರೈಸಿದ್ದಾರೆ. ಆದರೆ, ನಟಿ ಅಮೂಲ್ಯಗೆ ಬಂದ ಬಹಳಷ್ಟು ಗಿಫ್ಟ್​ಗಳಲ್ಲಿ ಅವರಿಗೆ ನಟಿ ರಮ್ಯಾ ಕೊಟ್ಟ ಗಿಫ್ಟ್ ಮಾತ್ರ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಅಂದಹಾಗೆ, ಅಭಿಮಾನಿಗಳಿಗೆ ಅಮೂಲ್ಯ ಮತ್ತು ರಮ್ಯಾ ಅವರ ನಡುವಿನ ನಂಟಿನ ಬಗ್ಗೆ ತಿಳಿದೆ ಇದೆ. ಹೀಗಾಗಿ, ಕಾರ್ಯಕ್ರಮಕ್ಕೆ ಲೇಟ್ ಆಗಿಬಂದರೂ, ರಮ್ಯಾ ಅವರು ಅಮೂಲ್ಯಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಮುದ್ದು ಬೆಡಗಿ ನಟಿ ಅಮೂಲ್ಯಾಗೆ ರಮ್ಯಾ ಅವರು ಸ್ಪೆಷಲ್  ಸೀರೆ ಒಂದನ್ನು ನೀಡಿದ್ದಾರೆ. ರಮ್ಯಾ ಅಮೂಲ್ಯಾಗೆ ಬಹಳಷ್ಟು ಫೇಮಸ್ ಆಗಿರುವ ಕನಕವಲ್ಲಿ ಬ್ರ್ಯಾಂಡ್‌ನ ಸೀರೆಯನ್ನ ಗಿಫ್ಟ್ ಕೊಟ್ಟಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ದಕ್ಷಿಣದ ಸೆಲೆಬ್ರಿಟಿಗಳು ಸೇರಿ ಉದ್ಯಮಿಗಳು ಸಹ ಈ ಬ್ರ್ಯಾಂಡ್‌ನ ಸೀರೆಯನ್ನು ಇಷ್ಟ ಪಟ್ಟು ಕೊಂಡುಕೊಳ್ಳುತ್ತಾರೆ ಎನ್ನಲಾಗಿದೆ. ಜತೆಗೆ, ಕನಕವಲ್ಲಿ ಸೀರೆಗಳು ತುಂಬಾ ದುಬಾರಿ ಕೂಡ ಹೌದು.
ಸೀರೆಯೊಂದಿಗೆ ಒಂದು ಸ್ಪೆಷಲ್ ಗ್ರೀಟಿಂಗ್ ಕಾರ್ಡ್‌ನಲ್ಲಿ ಕೂಡಾ ಶುಭಾಶಯಗಳು ತಿಳಿಸಿದ್ದಾರೆ ನಟಿ ರಮ್ಯಾ. ಇನ್ನು, ನಟಿ ಅಮೂಲ್ಯ ತಮಗೆ ಅದೆಷ್ಟು ಗಿಫ್ಟ್​ಗಳು ಬಂದರೂ ನಟಿ ರಮ್ಯಾ ಅವರಿಂದ ಬಂದ ಈ ಸೀರೆಯ ಉಡುಗೊರೆಯ ಬಗ್ಗೆ ಮಾತ್ರ ಸ್ಪೆಷಲ್ ಆಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ, ನಟಿ ಅಮೂಲ್ಯ ಹಂಚಿಕೊಂಡ ರಮ್ಯಾ ಅವರ ಗಿಫ್ಟ್​ನ ಫೋಟೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಶೇರ್​ಗಳನ್ನು ಪಡೆಯುತ್ತದೆ. ಸಿನಿಮಾಗಳಿಂದ ದೂರ ಉಳಿದಿರುವ ನಟಿ ರಮ್ಯಾ ಸ್ಯಾಂಡಲ್​ವುಡ್ ಕುಟುಂಬದೊಂದಿಗೆ ಮಾತ್ರ ಸಂಬಂಧ ಕಳೆದುಕೊಂಡಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗಂತೂ ಖುಷಿ ನೀಡುತ್ತಿದೆ

ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ? ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ?

Contents
ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ, ಈ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿ ಬಳಗ, ಸಿನಿತಾರೆಯರು ಎಲ್ಲರು ಶುಭ ಹಾರೈಸುತ್ತಿದ್ದಾರೆ. ಇನ್ನು, ಈಗಾಗಲೇ ನಟಿಯ ಸೀಮಂತ, ಬೇಬಿ ಬಂಪ್, ಮಾಮ್ ಟು ಬಿ ಪಾರ್ಟಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದರ ನಡುವೆ, ನಟಿ ಅಮೂಲ್ಯಗೆ ಕನ್ನಡ ಚಿತ್ರರಂಗದವರು ಬಹುತೇಕ ಎಲ್ಲರೂ ಸೇರಿ ಬೆಂಗಳೂರಿನ ಒಂದು ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಭಾಗಿಯಾದಂತೆ ಕಾಣುತ್ತಿತ್ತು.ಈ ಕಾರ್ಯಕ್ರಮದ ಫೋಟೋಗಳು ವೈರಲ್ ಆಗುತ್ತಿರುವಾಗಲೇ, ನಟಿ ಅಮೂಲ್ಯ ಮತ್ತು ನಟಿ ರಮ್ಯಾ ಅವರ ಒಂದು ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಬೇಬಿ ಶವರ್ ಕಾರ್ಯಕ್ರಮಕ್ಕೆ ನಟಿ ರಮ್ಯಾ ಲೇಟ್ ಆಗಿ ಬಂದರು, ಲೇಟಸ್ಸ್ ಆಗಿ ಬಂದಿದ್ದಾರೆ ಎನ್ನಲಾಗಿದೆ. ಇನ್ನು, ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್​ನ ಹಲವು ಗಣ್ಯರು ಅಮೂಲ್ಯ ಅವರಿಗೆ ಬಹಳಷ್ಟು ಬೇರೆ ಬೇರೆ ಗಿಫ್ಟ್‌ಗಳು ನೀಡಿ ಶುಭ ಹಾರೈಸಿದ್ದಾರೆ. ಆದರೆ, ನಟಿ ಅಮೂಲ್ಯಗೆ ಬಂದ ಬಹಳಷ್ಟು ಗಿಫ್ಟ್​ಗಳಲ್ಲಿ ಅವರಿಗೆ ನಟಿ ರಮ್ಯಾ ಕೊಟ್ಟ ಗಿಫ್ಟ್ ಮಾತ್ರ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.ಅಂದಹಾಗೆ, ಅಭಿಮಾನಿಗಳಿಗೆ ಅಮೂಲ್ಯ ಮತ್ತು ರಮ್ಯಾ ಅವರ ನಡುವಿನ ನಂಟಿನ ಬಗ್ಗೆ ತಿಳಿದೆ ಇದೆ. ಹೀಗಾಗಿ, ಕಾರ್ಯಕ್ರಮಕ್ಕೆ ಲೇಟ್ ಆಗಿಬಂದರೂ, ರಮ್ಯಾ ಅವರು ಅಮೂಲ್ಯಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಮುದ್ದು ಬೆಡಗಿ ನಟಿ ಅಮೂಲ್ಯಾಗೆ ರಮ್ಯಾ ಅವರು ಸ್ಪೆಷಲ್  ಸೀರೆ ಒಂದನ್ನು ನೀಡಿದ್ದಾರೆ. ರಮ್ಯಾ ಅಮೂಲ್ಯಾಗೆ ಬಹಳಷ್ಟು ಫೇಮಸ್ ಆಗಿರುವ ಕನಕವಲ್ಲಿ ಬ್ರ್ಯಾಂಡ್‌ನ ಸೀರೆಯನ್ನ ಗಿಫ್ಟ್ ಕೊಟ್ಟಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ದಕ್ಷಿಣದ ಸೆಲೆಬ್ರಿಟಿಗಳು ಸೇರಿ ಉದ್ಯಮಿಗಳು ಸಹ ಈ ಬ್ರ್ಯಾಂಡ್‌ನ ಸೀರೆಯನ್ನು ಇಷ್ಟ ಪಟ್ಟು ಕೊಂಡುಕೊಳ್ಳುತ್ತಾರೆ ಎನ್ನಲಾಗಿದೆ. ಜತೆಗೆ, ಕನಕವಲ್ಲಿ ಸೀರೆಗಳು ತುಂಬಾ ದುಬಾರಿ ಕೂಡ ಹೌದು.ಸೀರೆಯೊಂದಿಗೆ ಒಂದು ಸ್ಪೆಷಲ್ ಗ್ರೀಟಿಂಗ್ ಕಾರ್ಡ್‌ನಲ್ಲಿ ಕೂಡಾ ಶುಭಾಶಯಗಳು ತಿಳಿಸಿದ್ದಾರೆ ನಟಿ ರಮ್ಯಾ. ಇನ್ನು, ನಟಿ ಅಮೂಲ್ಯ ತಮಗೆ ಅದೆಷ್ಟು ಗಿಫ್ಟ್​ಗಳು ಬಂದರೂ ನಟಿ ರಮ್ಯಾ ಅವರಿಂದ ಬಂದ ಈ ಸೀರೆಯ ಉಡುಗೊರೆಯ ಬಗ್ಗೆ ಮಾತ್ರ ಸ್ಪೆಷಲ್ ಆಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ, ನಟಿ ಅಮೂಲ್ಯ ಹಂಚಿಕೊಂಡ ರಮ್ಯಾ ಅವರ ಗಿಫ್ಟ್​ನ ಫೋಟೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಶೇರ್​ಗಳನ್ನು ಪಡೆಯುತ್ತದೆ. ಸಿನಿಮಾಗಳಿಂದ ದೂರ ಉಳಿದಿರುವ ನಟಿ ರಮ್ಯಾ ಸ್ಯಾಂಡಲ್​ವುಡ್ ಕುಟುಂಬದೊಂದಿಗೆ ಮಾತ್ರ ಸಂಬಂಧ ಕಳೆದುಕೊಂಡಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗಂತೂ ಖುಷಿ ನೀಡುತ್ತಿದೆ. 

ಇಡೀ ಚಿತ್ರರಂಗದ ಜತೆಗೆ ‘ಬೇಬಿ ಶವರ್’ ಆಚರಿಸಿಕೊಂಡ ನಟಿ ಅಮೂಲ್ಯ! ಫೋಟೋಗಳು ವೈರಲ್…

ಗೆಳೆಯನ 3ನೇ ಸಿನಿಮಾಗೆ ತಮ್ಮ ಟೈಟಲ್ ಬಿಟ್ಟುಕೊಟ್ಟ ಡಾಲಿ!

ವಿಚ್ಛೇದನದ ಬಳಿಕ ಹೇಗಿತ್ತು ನಟಿ ಸಮಂತಾಳ ಮೊದಲ ವ್ಯಾಲಂಟೈನ್ಸ್ ಡೇ? ಫೋಟೋ ವೈರಲ್!

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…