Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಪ್ರಶ್ನೆಗಳೊಂದಿಗೆ ಸೆಣೆಸುತ್ತಿರುವ ಯುವ ಮನಸ್ಸುಗಳು

Friday, 21.09.2018, 3:03 AM       No Comments

| ಸದ್ಗುರು

ಯುವಜನರು ಸತ್ಯವನ್ನು ಹುಡುಕುತ್ತಿರುವ ಸಹಜ ಸಾಧಕರು. ಸತ್ಯವನ್ನು ಅವರು ತಿಳಿಯುವುದಕ್ಕೆ ನೆರವಾಗಲು, ಅಗತ್ಯವಾದ ಸ್ಪಷ್ಟತೆ, ಬದ್ಧತೆ ಮತ್ತು ಸ್ಥೈರ್ಯದಿಂದ ಅವರನ್ನು ಸಬಲರನ್ನಾಗಿಸುವ ಸಮಯ ಬಂದಿದೆ. ಯುವಜನರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳು ನಮ್ಮ ದೇಶದ ಹಾಗೂ ಪ್ರಪಂಚದ ಭವಿಷ್ಯವನ್ನು ನಿರ್ಧರಿಸುತ್ತವೆ.

ಹಲವಾರು ವರ್ಷಗಳ ಹಿಂದೆ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗಿನ ಘಟನೆ. ಒಂದು ದಿನ ತರಗತಿಯಲ್ಲಿ ಎದ್ದು ನಿಂತು ನನ್ನ ಪ್ರಾಧ್ಯಾಪಕರನ್ನು ಅವರ ನೋಟ್ಸ್​ಗಾಗಿ ಕೇಳಿದೆ..! ಅದನ್ನು ಜೆರಾಕ್ಸ್ ಮಾಡಿಸಿಕೊಳ್ಳುವ ಸಲುವಾಗಿ! ಅದರಿಂದ ಅವರಿಗೆ ಪಾಠವನ್ನು ಹೇಳಿ-ಬರೆಸುವ ಕಷ್ಟ ತಪ್ಪುತ್ತಿತ್ತು ಮತ್ತು ನನಗೆ ತರಗತಿಗೆ ಹಾಜರಾಗುವ ಕಷ್ಟ ತಪ್ಪುತ್ತಿತ್ತು ಎಂದು. ಸಹಜವಾಗಿಯೆ, ನನ್ನನ್ನು ತರಗತಿಯಿಂದ ತಕ್ಷಣ ಹೊರಗಟ್ಟಲಾಯಿತು. ನನಗೆ ಬೇಕಾಗಿದ್ದೂ ಅದೇ!

ನಾನು ಹಾಗೆ ನಡೆದುಕೊಂಡಿದ್ದು ಸೂಕ್ತವಲ್ಲ ಮತ್ತು ಹಾಗೆ ಮಾಡಿರೆಂದು ಬೇರೆಯವರಿಗೆ ಖಂಡಿತವಾಗಿಯೂ ನಾನು ಶಿಫಾರಸು ಮಾಡುತ್ತಿಲ್ಲ. ಅಸಲಿ ವಿಷಯವೇನೆಂದರೆ, ಆಗ ನನಗೆ ತರಗತಿ ಎಂದರೆ ನೋಟ್ಸ್​ಗಳನ್ನು ಬರೆದುಕೊಳ್ಳುವ ಪರ್ಯಾಯ ಪದವಾಗಿದ್ದಿತು ಮತ್ತು ನನಗೆ ಸ್ಟೆನೊಗ್ರಾಫರ್ ಆಗುವ ಬಯಕೆಯೇನೂ ಇರಲಿಲ್ಲ!

ತರಗತಿಯಿಂದ ಹೊರಹಾಕಿಸಿಕೊಳ್ಳುವುದು ನನಗೆ ಹೊಸ ಅನುಭವವೇನೂ ಆಗಿರಲಿಲ್ಲ. ಹೇಗೂ ಶಾಲೆಯೆಂದರೆ ನೀರಸವೆನಿಸಲು ಶುರುವಾಗಿತ್ತು. ಶಿಕ್ಷಕರು ಹೇಳಿಕೊಡುತ್ತಿದ್ದ ಯಾವುದೂ, ಅವರ ಜೀವನದಲ್ಲಿಯೂ ಯಾವ ಅರ್ಥವನ್ನಾದರೂ ತರುತ್ತಿತ್ತು ಎಂದು ನನಗೆ ಅನ್ನಿಸುತ್ತಿರಲಿಲ್ಲ. ನಾನು ಚಿಕ್ಕವನಿದ್ದಾಗ, ದಿನದ ಹೆಚ್ಚಿನ ಭಾಗವನ್ನು, ಶಾಲೆಯ ಹೊರಗಿದ್ದ ಒಂದು ಕಣಿವೆಯಲ್ಲಿನ ಅದ್ಭುತ ಮತ್ತು ವೈವಿಧ್ಯಮಯವಾದ ಜಲಜೀವನವನ್ನು ತಲ್ಲೀನನಾಗಿ ನೋಡುತ್ತ ಕಳೆಯುತ್ತಿದ್ದೆ. ನನ್ನ ತಂದೆ-ತಾಯಿಗೆ ಇದು ಗೊತ್ತಾದಾಗ, ನನ್ನ ಜೈವಿಕ ಪರಿಶೋಧನೆಗಳನ್ನೆಲ್ಲ, ‘ಮಳೆನೀರಿನ ಚರಂಡಿ’ಯಲ್ಲಿ ಆಟವಾಡುತ್ತಿದ್ದೀಯ ಎಂದು ತಳ್ಳಿಹಾಕಿ, ತಕ್ಷಣವೇ ನನ್ನನ್ನು ಮರಳಿ ತರಗತಿಗೆ ಕಳುಹಿಸಿದರು.

ಹಾಗಾದರೆ ನಾನು ಶಾಲೆಗೆ ಚಕ್ಕರ್ ಹೊಡೆಯುವಂತೆ ಸಲಹೆ ನೀಡುತ್ತಿದ್ದೇನೆಯೇ? ಖಂಡಿತವಾಗಿಯೂ ಇಲ್ಲ. ಯುವಜನರಲ್ಲಿ ಬಹಳಷ್ಟು ಪ್ರಶ್ನೆಗಳಿರುತ್ತವೆ ಮತ್ತು ಅವುಗಳು ಎಲ್ಲೋ ಒಮ್ಮೊಮ್ಮೆ ಮಾತ್ರ ಉತ್ತರಿಸಲ್ಪಡುತ್ತವೆ ಎನ್ನುವುದರ ಬಗ್ಗೆ ಗಮನ ಸೆಳೆಯುತ್ತಿದ್ದೇನೆ. ಕಲ್ಪನಾರಹಿತ ವಯಸ್ಕರ ಪ್ರಪಂಚವು, ಯುವಕರಿಗೆ ಸದಾ ಶಾಲೆಯ ರ್ಯಾಂಕ್, ವೃತ್ತಿಗಳು ಮತ್ತು ಹಣದ ಬಗ್ಗೆಯೇ ಉಪದೇಶ ಕೊಡುವಲ್ಲಿ ನಿರತವಾಗಿದೆ. ನನ್ನ ತಲೆಯಲ್ಲಿ ಲಕ್ಷಗಟ್ಟಲೆ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದು ಇನ್ನೂ ನೆನಪಿದೆ. ನನ್ನ ತಂದೆ ಅನೇಕ ಬಾರಿ ಹತಾಶರಾಗಿ ಕೈಚೆಲ್ಲಿ, ‘ಈ ಹುಡುಗ ತನ್ನ ಜೀವನದಲ್ಲೇನು ಮಾಡುವನೋ?’ ಎನ್ನುತ್ತಿದ್ದರು. ಅವರಿಗೆ ತಿಳಿಯದಿದ್ದುದು ಏನೆಂದರೆ, ನನಗೆ ಜೀವನದಲ್ಲಿ ಮಾಡಬೇಕಾದಂಥ ವಿಷಯಗಳು ಕಡಿಮೆ ಏನಿರಲಿಲ್ಲ ಎಂದು. ನನಗೆ ತರಗತಿಗಳು ಬೋರ್ ಹೊಡೆಯುತ್ತಿದ್ದರೂ, ಬೇರೆ ಎಲ್ಲ ವಿಷಯಗಳ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದೆ- ಪ್ರಪಂಚ ರಚನೆಗೊಂಡ ರೀತಿ, ಋತುಗಳು, ಭೂಪ್ರದೇಶಗಳ ಬಗ್ಗೆ, ಭೂಮಿಯನ್ನು ಉಳುಮೆ ಮಾಡಿದಾಗ ಬೀಜ ಮೊಳಕೆಯಾಗುವುದರ ಬಗ್ಗೆ, ಜನರು ಜೀವಿಸುವ ರೀತಿಯ ಬಗ್ಗೆ…. ಹೀಗೆ ನನ್ನ ಜೀವನವು ಆಸಕ್ತಿ ಹುಟ್ಟಿಸುವಂಥ ಅನೇಕ ಪ್ರಶ್ನೆಗಳಿಂದ ತುಂಬಿತ್ತು.

ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಸಮಯ: ಯುವಜನರಲ್ಲಿ ಎಂದೂ ಪ್ರಶ್ನೆಗಳ ಕೊರತೆಯಿರುವುದಿಲ್ಲ. ಭಾರತದ ಅರ್ಧದಷ್ಟು ಜನಸಂಖ್ಯೆ 25 ವರ್ಷಗಳಿಗಿಂತ ಕೆಳಗಿನದು. ಇದರರ್ಥ, ಪ್ರಶ್ನೆಗಳು ಹೇರಳವಾಗಿವೆಯೆಂದು. ಈ ಅರವತ್ತೈದು ಕೋಟಿ ಯುವಜನರು- ಅವರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳು- ನಮ್ಮ ದೇಶದ ಹಾಗೂ ಪ್ರಪಂಚದ ಭವಿಷ್ಯವನ್ನು ನಿರ್ಧರಿಸುತ್ತವೆ. ಆದರೆ, ‘ಅವರು ನಿರ್ವಿುಸದೆ ಇರುವ’ ಸಮಾಜದ ಹೇರಿಕೆಗಳು ಮತ್ತು ಒತ್ತಡಗಳೊಂದಿಗೆ ಹೋರಾಡುತ್ತಿದ್ದಾರೆ. ಹದಿನೈದು ಮತ್ತು ಇಪ್ಪತ್ತೊಂಬತ್ತರ ನಡುವಿನ ಯುವಜನರಲ್ಲಿ, ವಿಶ್ವದಲ್ಲೆ ಅತಿಹೆಚ್ಚು ಆತ್ಮಹತ್ಯೆಯ ಪ್ರಮಾಣವನ್ನು ಹೊಂದಿರುವ ‘ಅವಮಾನಕಾರಿ ಹಿರಿಮೆ’ಗೆ ನಾವು ಪಾತ್ರರಾಗಿದ್ದೇವೆ. ಭಾರತದಲ್ಲಿ ಪ್ರತಿಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ! ಇದೊಂದು ಆಘಾತಕಾರಿ ಅಂಕಿಅಂಶವಾಗಿದ್ದು, ಇದು ನಾವೆಲ್ಲಿ ತಪ್ಪು ಮಾಡಿರಬಹುದೆಂದು ನಮ್ಮನ್ನು ನಾವು ಕೇಳಿಕೊಳ್ಳುವಂತೆ ಒತ್ತಾಯಿಸಬೇಕು.

ಮುಂಬರುವ ದಿನಗಳಲ್ಲಿ ನಾನು ಯುವಜನರೊಂದಿಗೆ ಸಮಯ ಕಳೆಯಲು ಉದ್ದೇಶಿಸಿದ್ದೇನೆ. ನನ್ನ ಉದ್ದೇಶ ಅವರಿಗೆ ಸಲಹೆ ಅಥವಾ ನೈತಿಕತೆಯ ಬಗ್ಗೆ ಉಪದೇಶ ನೀಡುವುದಲ್ಲ. ನಾನು ಯುವಕನಾಗಿದ್ದಾಗ ಅಂಥ ಉಪದೇಶಗಳು ನನಗೆ ಸಹಾಯವನ್ನೇನೂ ಮಾಡಲಿಲ್ಲ. ನಾನು ಅವರಿಗೆ ಸ್ಪಷ್ಟತೆಯನ್ನು ಮಾತ್ರ ಕೊಡಬಲ್ಲೆ. ನನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ನನಗೆ ಗೋಚರವಾದಂಥ ಸ್ಪಷ್ಟತೆ- ಏಕೆಂದರೆ ನನ್ನ ಬಳಿ ಪ್ರಶ್ನೆಗಳಿದ್ದವು ಮತ್ತವುಗಳ ಜತೆ ಜೀವಿಸಲು ನನಗೆ ಭಯವಿಲ್ಲದಿದ್ದ ಕಾರಣದಿಂದ! ಯಾವುದೇ ತೀರ್ವನಗಳಿಗೆ ಬರದೆ ಪ್ರಶ್ನೆಗಳೊಂದಿಗೆ ಜೀವಿಸುವುದು: ಇದು ಜೀವನದ ಅಸಾಧಾರಣ ಸಾಹಸ.

‘ನನಗೆ ಗೊತ್ತಿಲ್ಲ’ ಎಂಬುದರ ಸಾಧ್ಯತೆ: ‘ನನಗೆ ಗೊತ್ತಿಲ್ಲ’ ಎಂಬುದರ ಸಾಧ್ಯತೆಯ ಸ್ಥಿತಿಯನ್ನು ಜಗತ್ತು ತಿಳಿಯದೇ ಇರುವುದು ಒಂದು ದುರಂತ. ಜ್ಞಾನದ ಸೋಗುಹಾಕಿಕೊಂಡಂಥ ನಂಬಿಕೆಗಳು, ಊಹೆಗಳು ಮತ್ತು ನಿಶ್ಚಿತತೆಗಳ ಮೂಲಕ ವಿಸ್ಮಯಪಡುವ ಸಾಮರ್ಥ್ಯವನ್ನು ಅಳಿಸಲಾಗುತ್ತದೆ. ‘ನನಗೆ ಗೊತ್ತಿಲ್ಲ’ ಎನ್ನುವುದು ‘ತಿಳಿಯುವುದಕ್ಕೆ’ ಇರುವಂಥ ಏಕೈಕ ಬಾಗಿಲೆಂದು ನಾವು ಮರೆಯುತ್ತೇವೆ.

ಯುವಕರ ಮುಂದೆ ಇಂದು ನಿಂತಿರುವ ಬಾಗಿಲಿದು. ಒಂದು ಗಾಢವಾದ ‘ಜೀವನ ಸಾಹಸ’ಕ್ಕೆ ತೆರೆದಿರುವ ಬಾಗಿಲು ಇದಾಗಿದೆ ಮತ್ತು ಬಹಳಷ್ಟು ಬಳಲಿದ ವಯಸ್ಕರು ಇದನ್ನು ಮರೆತಿದ್ದಾರೆ. ಕೇವಲ ಪ್ರಶ್ನೆಗಳನ್ನು ಕೇಳುವ ಧೈರ್ಯವಿರುವ ಯುವಜನರಷ್ಟೆ ಅಲ್ಲದೆ, ಪರಿಹಾರಗಳನ್ನು ಹುಡುಕುವಲ್ಲಿ ತಮ್ಮ ಜೀವನವನ್ನು ವಿನಿಯೋಗಿಸಲು ಸಿದ್ಧರಿರುವ ಯುವಜನರು ಸಹ ಬೇಕಾಗಿದ್ದಾರೆ. ನಮ್ಮ ವೈಯಕ್ತಿಕ ಮತ್ತು ವಿಶ್ವವ್ಯಾಪಿ ಯೋಗಕ್ಷೇಮವು ಇದರ ಮೇಲೆ ಅವಲಂಬಿತವಾಗಿದೆ.

# ಅಸೂಯೆ ಕೆಟ್ಟದೇ?

ವಿದ್ಯಾರ್ಥಿ: ಸದ್ಗುರು, ಅಸೂಯೆಯನ್ನು ಒಂದು ಕೆಟ್ಟ ಭಾವನೆ ಎಂದು ನೋಡಲಾಗುತ್ತದೆ. ಆದರೆ ನಿಜವೇನೆಂದರೆ, ನನಗೆ ಅದು ಚೆನ್ನಾಗಿಯೇ ಕೆಲಸ ಮಾಡಿದೆ.

# ನಮಗೆ ಅದರಿಂದ ಏನು ಉಪಯೋಗವಾಯ್ತು?

ವಿದ್ಯಾರ್ಥಿ: ಅದು ನನಗೆ ಸ್ಪೂರ್ತಿ ಕೊಡುತ್ತದೆ. ಪ್ರತಿ ಬಾರಿಯೂ ಸ್ನೇಹಿತರು ಏನಾದರೂ ಹೊಸದನ್ನು ಕಲಿತರೆ, ನನಗೆ ಅವರಿಗಿಂತ ಹೆಚ್ಚು ಕಲಿಯಬೇಕು ಎನ್ನಿಸುತ್ತದೆ. ಬಹುಶಃ ಅದರಿಂದಲೇ ನನಗೆ ನನ್ನ ‘ಡ್ರೀಮ್ ಕಾಲೇಜ್’ಗೆ ಸೇರಲು ಸಾಧ್ಯವಾಯ್ತು. ಹಾಗಾಗಿ, ಹೊಟ್ಟೆಕಿಚ್ಚು ನಿಜವಾಗಿಯೂ ಕೆಟ್ಟದು ಎಂದು ಎನಿಸುತ್ತದೆಯೇ? ಅಥವಾ ಅದು ಮುಂದೆ ಹೋಗುವುದಕ್ಕೆ ಒಂದು ಸ್ಪೂರ್ತಿಯೇ?

-ನೋಡಿ, ಇವತ್ತಿನ ದಿನಗಳಲ್ಲಿ ಅದೃಷ್ಟವಶಾತ್ ಇದು ನಡೆಯುತ್ತಿಲ್ಲವೇನೋ… ನಾವು ಚಿಕ್ಕವರಿದ್ದಾಗ ದೀಪಾವಳಿ ಸಮಯದಲ್ಲಿ, ಸಣ್ಣ ಊರುಗಳಲ್ಲಿ ಜನರು ತಮಾಷೆ ಮಾಡುತ್ತಿದ್ದರು. ಒಂದು ಡಬ್ಬಿ ತುಂಬ ಪಟಾಕಿಗಳನ್ನು ತುಂಬಿ ಅದನ್ನು ಒಂದು ಕತ್ತೆಯ ಬಾಲಕ್ಕೆ ಕಟ್ಟುವರು. ಅದು ಢಮ್ ಢಮ್ ಢಮ್ ಎಂದು ಸಿಡಿದಾಗ, ಪಾಪ ಕತ್ತೆ ಎಲ್ಲಕಡೆ ಓಡೋದು, ಕುದುರೆಗಿಂತ ವೇಗವಾಗಿ!

# ಜೀವನದಲ್ಲಿ ಸ್ಪೂರ್ತಿ ಪಡೆಯಬೇಕಾಗಿರುವುದು ಹೀಗಾ?

ಇದಕ್ಕಿಂತ ಉತ್ತಮವಾದ ಮತ್ತು ಬುದ್ಧಿವಂತ ದಾರಿಗಳಿವೆ. ಬಾಲ ಸುಡ್ತಾ ಇದೆ ಎಂದು ಅನ್ನಿಸಿದಾಗ, ನೀವು ಓಡಬಹುದು. ಜನರು ಕೂಡ ಯಾವಾಗಲೂ ಇದನ್ನೇ ಹೇಳುತ್ತಾರೆ, ‘ಒಂದು ನಾಯಿ ನಿಮ್ಮನ್ನ ಅಟ್ಟಿಸಿಕೊಂಡು ಬಂದರೆ, ನೀವು ಬಹಳ ವೇಗವಾಗಿ ಹೋಗುತ್ತೀರ’ ಎಂದು. ಆದರೆ ಅದು ಸರಿಯಾದ ರೀತಿಯೇ? ‘ಬೋಲ್ಟ್’ ಗೊತ್ತಾ ನಿಮಗೆ? ‘ಉಸೇನ್ ಬೋಲ್ಟ್’, ಪ್ರಸಿದ್ಧ ಓಟಗಾರ! ಆತ ಓಡಿದ್ದು ತನ್ನ ಬಾಲ ಸುಡ್ತಾ ಇದೆ ಎಂದಲ್ಲ. ಅವರು ಅಷ್ಟು ವೇಗವಾಗಿ ಓಡಲು ಏಕೆ ಸಾಧ್ಯವಾಯಿತೆಂದರೆ, ಕಾಲುಗಳನ್ನು, ಶ್ವಾಸಕೋಶವನ್ನು ಅದಕ್ಕೆ ಸರಿಯಾಗಿ ಸಿದ್ಧಗೊಳಿಸಿಕೊಂಡಿದ್ದರಿಂದ. ಅಂದರೆ, ಅವರು ಹೇಗೆ ಓಡಿದರೂ, ಎಲ್ಲರಿಗಿಂತ ವೇಗವಾಗಿ ಇರುತ್ತಾರೆ. ಅಲ್ಲವೇ? ನಾವು ಕೂಡ ಹೀಗೆ ತಾನೆ ಓಡಬೇಕು?

ನಾಯಿ ನಿಮ್ಮನ್ನ ಅಟ್ಟಿಸಿಕೊಂಡು ಬಂದರೆ ಓಡುವುದಕ್ಕೆ ಬಯಸುತ್ತೀರಾ? ಬಾಲ ಸುಡ್ತಾ ಇದೆ ಎಂದು ಓಡುವುದಕ್ಕೆ ಬಯಸುತ್ತೀರಾ? ನೀವು ‘ಓಡ’ ಬೇಕಾಗಿರುವುದು ಹಾಗಾ? ಇಲ್ಲ, ಹಾಗೆ ಓಡುವುದು ಹಿತವಾದ ಅನುಭವವಲ್ಲ. ನೋಡಿ, ಒಂದು ಮುಖ್ಯವಾದ ವಿಷಯ ಏನೆಂದರೆ, ನೀವು ವೇಗವಾಗಿ ಓಡಬೇಕು ನಿಜ, ಅದರ ಜತೆ ಓಡುವ ಅನುಭವ ಕೂಡ ಅದ್ಭುತವಾಗಿರಬೇಕು. ಅದೂ ಮುಖ್ಯ ಅಲ್ಲವೇ?

ನಿಮಗೆ ನಿಮ್ಮ ‘ಡ್ರೀಮ್ ಕಾಲೇಜ್’ನಲ್ಲಿ ಸೀಟು ಸಿಕ್ಕಿರಬಹುದು. ಆದರೆ ಅದು ನರಕವೂ ಆಗಬಹುದು, ಮೂರು ವರ್ಷಗಳ ನರಕ. ಯಾರಿಗೆ ಗೊತ್ತು? ಈ ಮೂರು ವರ್ಷಗಳು ನಿಮಗೆ ಒಂದು ಅದ್ಭುತವಾದ ಅನುಭವವಾಗಬೇಕು, ಅದು ಮುಖ್ಯ ಅಲ್ಲವೇ? ಓಡುವುದು ಮಾತ್ರ ಮುಖ್ಯವಾದ ವಿಷಯ ಅಲ್ಲ. ಅದನ್ನು ಹೇಗೆ ಅನುಭವಿಸುತ್ತೀರ, ಅದರಿಂದ ಯಾವ ಉದ್ದೇಶ ಈಡೇರುತ್ತದೆ? ಇವೆಲ್ಲವನ್ನೂ ನೋಡಬೇಕು. ಒಂದುವೇಳೆ, ಎಲ್ಲರೂ ಬಾಲ ಸುಡ್ತಾ ಇದೆ ಎಂದು ಓಡಿದರೆ, ಜನರನ್ನು ಓಡುವ ತರಹ ಮಾಡುವುದಕ್ಕೆ ಇರುವ ಒಂದೇ ದಾರಿಯೆಂದರೆ ಅವರ ಬಾಲಕ್ಕೆ ಬೆಂಕಿ ಹಚ್ಚುವುದು. ಅಂದರೆ ಏನು.. ಎಲ್ಲರಿಗೂ ಎಷ್ಟು ಹಾನಿಯನ್ನು ಉಂಟುಮಾಡುತ್ತೇವೆ ನೋಡಿ..!

‘ಆ’ ಕತ್ತೆಗಳು ಕುದುರೆಗಿಂತ ವೇಗವಾಗಿ ಓಡುವುದನ್ನು ನಾನು ನೋಡಿದ್ದೀನಿ- ‘ಭಯದಿಂದಾಗಿ ಓಡುವ ರೀತಿಯನ್ನು’! ಆದರೆ ಓಡುವುದಕ್ಕೆ ಇದು ಸರಿಯಾದ ರೀತಿಯಲ್ಲ. ದಯವಿಟ್ಟು ಇನ್ನು ಮುಂದೆ ಅದನ್ನು ಮಾಡಬೇಡಿ.

ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆ ಜತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊಂದು ಒಗಟಿನಂತೆ ಗೊಂದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊಂದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಅವಕಾಶವಿದೆ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ-ಖ್ಞಿಟ್ಝ್ಠಗಜಿಠಿಜಖಚಛಜಜ್ಠr.ಟ್ಟಜ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

Leave a Reply

Your email address will not be published. Required fields are marked *

Back To Top