ಮೋಹಂ ಭಕ್ತಜನೇ ಕುರ್ಯಾತ್ ನ ಕಾಂತಾಯಾಂ ಸುತೇಷು ಚ | ಅಮೋಹಾಖ್ಯಮಿದಂ ಶೀಲಂ ಚತುಸ್ತ್ರಿಂಶಂ ಪ್ರಕೀರ್ತಿತಮ್ ||
ಶಿವಭಕ್ತರ ವಿಷಯದಲ್ಲಿ ಮೋಹವಿರಬೇಕೇ ಹೊರತು ತನ್ನ ಸತಿ-ಸುತರಲ್ಲಿರಬಾರದು. ಅಮೋಹವೆಂದು ಕರೆಯಲ್ಪಡುವ ಈ ಆಚರಣೆಯು ಮೂವತ್ನಾಲ್ಕನೆಯ ಶೀಲ. ಮನುಷ್ಯನ ಎಲ್ಲ ಸಾಂಸಾರಿಕ ದುಃಖಗಳಿಗೆ ಈ ಮೋಹವೇ ಮೂಲ ಕಾರಣ. ತನ್ನಲ್ಲಿರುವ ಇಷ್ಟದ ಪ್ರಾಪಂಚಿಕ ವಸ್ತು ಮತ್ತು ವ್ಯಕ್ತಿಗಳು ಸದಾ ತನ್ನಲ್ಲೇ ಇರಬೇಕೆಂಬ ಆಸಕ್ತಿಪೂರ್ಣ ಭಾವವೇ ಮೋಹವೆಂದು ಕರೆಯಲ್ಪಡುತ್ತದೆ ಮತ್ತು ಇದು ಬಂಧನಕ್ಕೂ ಕಾರಣವಾಗುತ್ತದೆ. ಈ ಮೋಹವನ್ನೇ ಶಿವಭಕ್ತರ ವಿಷಯದಲ್ಲಿರಿಸಿದಾಗ ಸತ್ಸಂಗವೆನಿಸುತ್ತದೆ ಮತ್ತು ಮೋಕ್ಷಕ್ಕೆ ಸಾಧನವಾಗುತ್ತದೆ.
| ಚಂದ್ರಜ್ಞಾನಾಗಮ (9.92) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು