ಗುರೋರಪೀಷ್ಟಲಿಂಗಸ್ಯ ಚರಸ್ಯೈವ ಪ್ರಸಾದತಃ | ಕಾಯಶೋಧನಮೇತದ್ಧಿ ಶೀಲಂ ಸ್ಯಾತ್ ಪಂಚವಿಶಕಮ್ ||
ಗುರು, ಇಷ್ಟಲಿಂಗ ಮತ್ತು ಜಂಗಮನ ಪ್ರಸಾದದಿಂದ ಶರೀರವನ್ನು ಪರಿಶುದ್ಧಗೊಳಿಸಿಕೊಳ್ಳುವುದು ಇಪ್ಪತ್ತೈದನೆಯ ಶೀಲ. ಶರೀರದ ಶುದ್ಧೀಕರಣವು ಅಂತರಂಗ ಮತ್ತು ಬಹಿರಂಗ ಎಂದು ಎರಡು ವಿಧ. ನೀರಿನಿಂದ ಶರೀರದ ಶೋಧನೆಯು ಬಹಿರಂಗ. ಪ್ರಸಾದಸೇವನೆಯಿಂದ ಶರೀರದ ಶೋಧನೆಯು ಅಂತರಂಗ. ನಾವು ಸೇವಿಸುವ ಆಹಾರವೇ ಸಪ್ತಧಾತುಗಳ ರೂಪದಲ್ಲಿ ಪರಿವರ್ತನೆಯಾಗುತ್ತ ಕೊನೆಗೆ ಮನಸ್ಸಾಗುವುದರಿಂದ ಪ್ರಸಾದ ಸೇವನೆಯಿಂದ ಪರಿಶುದ್ಧ ಮನಸ್ಸು ನಿರ್ವಣವಾಗುತ್ತದೆ. ಗುರು, ಲಿಂಗ ಮತ್ತು ಜಂಗಮರ ಪ್ರಸಾದ ಸೇವಿಸುವುದರಿಂದ ಕ್ರಮವಾಗಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ದೇಹಗಳ ಶುದ್ಧಿ ಸಾಧ್ಯ.
| ಚಂದ್ರಜ್ಞಾನಾಗಮ (9.82) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು