More

    ಅಮೃತ ಬಿಂದು- ಶ್ರೀ ಶೈವಾಗಮ| ಗುರು ಮತ್ತು ಜಂಗಮನ ವಿಷಯದಲ್ಲಿ ಗುಣದೋಷಗಳ ವಿಮರ್ಶೆ ಸರಿಯೇ?

     

    ಗುಣಾಗುಣವಿಮರ್ಶಸ್ಯ ತ್ಯಾಗೋ ಯಸ್ತು ಗುರೌ ಚರೇ | ಸಪ್ತತ್ರಿಂಶಂ ಸಮಾಖ್ಯಾತಂ ಶೀಲಂ ಪುಣ್ಯಫಲಪ್ರದಮ್ ||

    ಗುರು ಮತ್ತು ಜಂಗಮನ ವಿಷಯದಲ್ಲಿ ಗುಣದೋಷಗಳ ವಿಮರ್ಶೆಯನ್ನು ಬಿಡುವುದು ಪುಣ್ಯಪ್ರದವಾದ ಮೂವತ್ತೇಳನೆಯ ಶೀಲ. ಸಾಮಾನ್ಯವಾಗಿ ಭೂಮಿಯ ಮೇಲೆ ಜನ್ಮತಾಳಿದ ಪ್ರತಿಯೊಬ್ಬರಲ್ಲೂ ಗುಣ-ದೋಷಗಳು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಆದರೆ ನಮಗೆ ಪೂಜ್ಯಸ್ಥಾನದಲ್ಲಿರುವವರ ಗುಣಗಳನ್ನು ಗಮನಿಸಬೇಕೇ ಹೊರತು ದೋಷಗಳನ್ನು ಎಣಿಸಬಾರದು. ಒಂದುವೇಳೆ ದೋಷಗಳನ್ನೇ ಆಡಿಕೊಳ್ಳುತ್ತ ಹೋದರೆ ಅವರಲ್ಲಿರುವ ಉತ್ತಮವಾದುದನ್ನು ಪಡೆದುಕೊಳ್ಳುವುದರಿಂದ ನಾವು ವಂಚಿತರಾಗುತ್ತೇವೆ. ಅದರಿಂದ ನಮಗೇ ಹಾನಿಯಾಗುತ್ತದೆ.

    | ಚಂದ್ರಜ್ಞಾನಾಗಮ (9.95) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts