ನಿಷಿದ್ಧವಿಷಯೇಭ್ಯಶ್ಚ ಯದಿಂದ್ರಿಯವಿನಿಗ್ರಹಃ | ಷಡ್ವಿಂಶಃ ಶೀಲಮಿತ್ಯುಕ್ತಂ ಭವದೋಷನಿವಾರಣಮ್ ||
ನಿಷಿದ್ಧ ವಿಷಯಗಳೆಡೆಗೆ ಇಂದ್ರಿಯಗಳು ಹೋಗದಂತೆ ನಿಯಂತ್ರಿಸುವುದು ಇಪ್ಪತ್ತಾರನೆಯ ಶೀಲ. ಈ ಶೀಲದ ಆಚರಣೆಯಿಂದ ಸಂಸಾರದೋಷವು ನಿವಾರಣೆಯಾಗುತ್ತದೆ. ವಿಷಯಗಳಲ್ಲಿ ವಿಹಿತ-ನಿಷಿದ್ಧ ಎಂದು ಎರಡು ಪ್ರಕಾರ. ಯಾವ ವಿಷಯದಲ್ಲಿ ಇಂದ್ರಿಯಗಳು ಪ್ರವೃತ್ತವಾಗುವುದರಿಂದ ಇತರರಿಗೆ ಸಂತೋಷವೂ ತನಗೆ ಪುಣ್ಯವೂ ಲಭಿಸುವುದೋ ಅದು ವಿಹಿತ ವಿಷಯ. ಯಾವುದರಲ್ಲಿ ಪ್ರವೃತ್ತವಾಗುವುದರಿಂದ ಇತರರಿಗೆ ದುಃಖವೂ ಮತ್ತು ತನಗೆ ಪಾಪವೂ ಉಂಟಾಗುವುದೋ ಅದು ನಿಷಿದ್ಧ ವಿಷಯ. ಉದಾ: ಸ್ವಪತ್ನೀಗಮನ ವಿಹಿತ. ಪರಸ್ತ್ರೀಗಮನ ನಿಷಿದ್ಧ.
| ಚಂದ್ರಜ್ಞಾನಾಗಮ (9.83 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು