ಆಸನೇ ಶಯನೇ ಯಾನೇ ಗೋಷ್ಠ್ಯಾಂ ಭವಿಸಂಬಂಧವರ್ಜನಂ | ಅಷ್ಟಾವಿಂಶಮಿದಂ ಶೀಲಂ ನಿರ್ದಿಷ್ಟಂ ಶೌಚಸಾಧನಮ್ ||
ಆಸನದಲ್ಲಾಗಲೀ, ಶಯನದಲ್ಲಾಗಲೀ, ಸಭೆಸಮಾರಂಭಗಳಲ್ಲಾಗಲೀ ಭವಿಯ ಸಂಬಂಧ ಮಾಡದೆ ಇರುವುದು ಇಪ್ಪತ್ತೆಂಟನೆಯ ಶೀಲ. ಇದು ಶೌಚದ ಸಾಧನ. ವೀರಶೈವಧರ್ಮದಲ್ಲಿ ದೀಕ್ಷೆ ಪಡೆದು ಸುಸಂಸ್ಕೃತ ಜೀವನ ನಡೆಸುವವರನ್ನು ಭಕ್ತರೆಂದೂ, ದೀಕ್ಷೆ ಪಡೆಯದೆ ಸಂಸ್ಕಾರಹೀನ ಬದುಕು ಸಾಗಿಸುವವರನ್ನು ಭವಿಗಳೆಂದೂ ಕರೆಯಲಾಗುತ್ತದೆ.
ಯಾವುದೇ ಸಂದರ್ಭದಲ್ಲಿಯೂ ನಾವು ಎಂಥವರ ಜತೆಗೆ ಸಹವಾಸ, ಸಂಬಂಧ ಇರಿಸಿಕೊಳ್ಳುತ್ತೇವೆಯೋ ಅಂಥ ಆಚಾರವಿಚಾರಗಳೇ ನಮ್ಮನ್ನೂ ಆವರಿಸಿಕೊಳ್ಳುವ ಕಾರಣ – ಭವಿಗಳಿಂದ ದೂರ ಮತ್ತು ಭಕ್ತರ ಸಮೀಪ ಇರಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು.