ಇಷ್ಟಲಿಂಗೇಕ್ಷಣೋದ್ಭೂತಾನಂದಬಾಷ್ಪಸಮುದ್ಗಮಃ | ವಿಂಶಂ ಶೀಲಂ ವಿನಿರ್ದಿಷ್ಟಂ ಸ್ಪಷ್ಟಂ ಚಂದ್ರಾರ್ಧಮೌಲಿನಾ ||
ಎವೆಯಿಕ್ಕದೆ ಇಷ್ಟಲಿಂಗವನ್ನು ನಿರೀಕ್ಷಿಸುವುದರಿಂದ ಕಣ್ಣುಗಳಿಂದ ಆನಂದಬಾಷ್ಪಗಳು ಬರುವುದನ್ನು ಇಪ್ಪತ್ತನೆಯ ಶೀಲವೆಂದು ಅರ್ಧಚಂದ್ರಧಾರಿ ಶಿವನು ಸ್ಪಷ್ಟವಾಗಿ ಹೇಳಿದ್ದಾನೆ. ಆನಂದಬಾಷ್ಪಗಳಲ್ಲಿ ಭೋಗಾನಂದ ಬಾಷ್ಪ ಮತ್ತು ಯೋಗಾನಂದ ಬಾಷ್ಪ ಎಂಬುದಾಗಿ ಎರಡು ಪ್ರಕಾರ.
ದುರ್ಲಭವಾದ ಆದರೆ ಇಷ್ಟವಾದ ಲೌಕಿಕ ವ್ಯಕ್ತಿ ಅಥವಾ ವಸ್ತುಗಳು ಪ್ರಾಪ್ತವಾದಾಗ ಬರುವವು ಭೋಗಾನಂದ ಬಾಷ್ಪಗಳು. ಯೋಗಸಾಧನೆ ಮಾಡುವಾಗ, ಅದರಲ್ಲೂ ವಿಶೇಷವಾಗಿ ಲಿಂಗನಿರೀಕ್ಷಣೆ ಮಾಡುವಾಗ ಬರುವ ಬಾಷ್ಪಗಳು ಯೋಗಾನಂದ ಬಾಷ್ಪಗಳು. ಈ ಬಾಷ್ಪಗಳು ಯೋಗಸಿದ್ಧಿಗೆ ಸಹಾಯಕ.