ಕ್ರಿಯಾಯಾಂ ವಚನೇ ವಾಽಪಿ ಪ್ರಮಾದರಹಿತಸ್ಥಿತಿಃ | ಧೀರ್ಯಾ ಶೀಲಂ ತದಿಹ ಷಟ್ ಚತ್ವಾರಿಂಶಂ ಪ್ರಕೀರ್ತಿತಮ್ ||
ಮಾತಿನಲ್ಲಾಗಲಿ ಕೃತಿಯಲ್ಲಾಗಲಿ ತಪ್ಪು ಮಾಡದಿರುವ ಯಾವ ಬುದ್ಧಿಯಿದೆಯೋ ಅದು ನಲವತ್ತಾರನೆಯ ಶೀಲ. ಮಾತನಾಡುವುದು ಮತ್ತು ಧರ್ಮಸಂಬಂಧಿಯಾದ ಉತ್ತಮ ಆಚರಣೆಗಳನ್ನು ಮಾಡುವುದು ಇವು ದೇವರು ಮನುಷ್ಯನಿಗೆ ಮಾತ್ರ ಕೊಟ್ಟ ವಿಶಿಷ್ಟ ಕೊಡುಗೆಗಳು. ಆದ್ದರಿಂದ ಇವುಗಳನ್ನು ಪಾಪ ಮಾಡಲು ಬಳಸದೆ ಮಾಡದೆ ಪುಣ್ಯ ಮಾಡಲು ಉಪಯೋಗಿಸಬೇಕು. ಮಾತು-ಕೃತಿಗಳಿಂದ ಮಾಡುವ ತಪ್ಪುಗಳು ಮಾತ್ರ ತಪ್ಪುಗಳಲ್ಲ. ಅದನ್ನು ಮಾಡಬೇಕೆನ್ನುವ ವಿಚಾರ ಮನದಲ್ಲಿ ಬಂದರೆ ಅದೂ ತಪ್ಪೇ. ಕಾರಣ ಬುದ್ಧಿಯಲ್ಲಿ ಬರುವ ವಿಚಾರಗಳ ಬಗ್ಗೆ ಕೂಡ ಎಚ್ಚರ ವಹಿಸಬೇಕು.
ಚಂದ್ರಜ್ಞಾನಾಗಮ (9.104 )
| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು